ಕೊಲ್ಕತ್ತಾ:ಬಿಸಿಸಿಐ ಅಧ್ಯಕ್ಷ, ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಪ್ರವೇಶಿಸುತ್ತಾರಾ? ಇಂತಹದ್ದೊಂದು ಚರ್ಚೆ ಶುರುವಾಗಿದೆ. ಬುಧವಾರ ಸಂಜೆ ಗಂಗೂಲಿ ಅವರು ಮಾಡಿದ ಆ ಒಂದು ಟ್ವೀಟ್​ ಇಂತಹ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ ಇದೆಲ್ಲವೂ ವದಂತಿ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ಕೊಡಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಡಿಸಿದ್ದಾರೆ.
‘1992ರಲ್ಲಿ ಶುರುವಾದ ನನ್ನ ಕ್ರಿಕೆಟ್​ ಜರ್ನಿ 2022ರ ವರೆಗೆ ಸಾಗಿ ಬಂದಿದೆ. ಈ 30 ವರ್ಷದಲ್ಲಿ ಕ್ರಿಕೆಟ್​ನಿಂದ ಗೌರವ, ಅವಕಾಶ… ಸೇರಿದಂತೆ ಎಲ್ಲವೂ ನನಗೆ ಸಿಕ್ಕಿದೆ. ಎಲ್ಲರೂ ನನಗೆ ಪ್ರೀತಿಯಿಂದ ಸಹಕರಿಸಿದ್ದಾರೆ. ಈ ಪಯಣದಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ, ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುವೆ. ಇಂದು ನಾನು ಮಹತ್ವದ ಯೋಜನೆ ಹಾಕಿಕೊಂಡಿರುವೆ. ಇನ್ಮುಂದೆ ತುಂಬಾ ಜನರಿಗೆ ಸಹಾಯ ಮಾಡಬೇಕು. ಈ ಕೆಲಸಕ್ಕೆ ನಿಮ್ಮೆಲ್ಲರ ಸಹಕಾರ ಇರುತ್ತೆ ಎಂದು ನಂಬಿದ್ದೇನೆ’ ಎಂದು ಸೌರವ್​ ಗಂಗೂಲಿ ಟ್ವೀಟ್​ ಮಾಡಿದ್ದಾರೆ.
pic.twitter.com/JrHOVvH3Vi
— Sourav Ganguly (@SGanguly99)June 1, 2022

ಇದನ್ನು ನೋಟಿದ ನೆಟ್ಟಿಗರು, ಅಭಿಮಾನಿಗಳು, ಸಾರ್ವಜನಿಕರು ಗಂಗೂಲಿ ಅವರ ಮುಂದಿನ ಪ್ಲಾನ್​ ಏನಿರಬಹುದು? ರಾಜಕೀಯಕ್ಕೆ ಹೋಗುವ ಸುಳಿವು ಕೊಟ್ಟರೇ? ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಬೇಕು ಎಂದೆಲ್ಲ ಚರ್ಚಿಸುತ್ತಿದ್ದಾರೆ.
Sourav Ganguly has not resigned as the president of BCCI: Jay Shah, BCCI Secretary to ANIpic.twitter.com/C2O3r550aL
— ANI (@ANI)June 1, 2022

ತುಮಕೂರಲ್ಲಿ ಶಿಕ್ಷಣ ಸಚಿವ ನಾಗೇಶ್​ರ ಮನೆಗೆ ಬೆಂಕಿ ಹಚ್ಚಲು ಯತ್ನ: ತುರ್ತು ಸುದ್ದಿಗೋಷ್ಠಿ ನಡೆಸಿದ ಗೃಹಸಚಿವ

ಅನಂತರಾಜು ಡೆತ್​ ಕೇಸ್​: ಬ್ಯಾಡರಹಳ್ಳಿ ಪೊಲೀಸ್​ ಠಾಣೆ ಮುಂಭಾಗವೇ ಬಸ್​ಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಯಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
