ಭೋಪಾಲ್​:ಕುಡಿಯುವ ನೀರಿನ ಬಾಟಲಿ ಖರೀದಿಸಲು ಪತಿಯೊಂದಿಗೆ ಹೋಟೆಲ್​ಗೆ ಹೋದ ಮಹಿಳೆಗೆ ದುಷ್ಕರ್ಮಿಗಳು ಅಶ್ಲೀಲವಾಗಿ ಕಮೆಂಟ್​ ಮಾಡಿ ಶಿಳ್ಳೆ ಹೊಡೆದಿದ್ದರು. ಇದನ್ನು ವಿರೋಧಿಸಿದ ಮಹಿಳೆ ದುಷ್ಕರ್ಮಿಗಳ ಪೈಕಿ ಓರ್ವನ ಕಪಾಳಕ್ಕೆ ಮೂರ್ನಾಲ್ಕು ಏಟು ಕೊಟ್ಟಿದ್ದಳು… ಇಷ್ಟಾದರೂ ಸುಮ್ಮನಾಗದ ಕಾಮುಕರು, ಆಕೆಯ ಮುಖಕ್ಕೆ ಬ್ಲೇಡ್​ನಿಂದ ಮನಸೋಇಚ್ಛೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ.
ಇಂತಹ ಅಮಾನುಷ ಕೃತ್ಯ ಮಧ್ಯಪ್ರದೇಶದ ಭೋಪಾಲ್​ನ ಟಿಟಿ ನಗರ ಪ್ರದೇಶದಲ್ಲಿ ಸಂಭವಿಸಿದೆ. ಅಂದು ನೀರಿನ ಬಾಟಲಿ​ ಖರೀದಿಸಲು ಪತಿಯೊಂದಿಗೆ ಹೋಟೆಲ್​ಗೆ ಮಹಿಳೆ ತೆರಳಿದ್ದರು. ಆಕೆಯ ಪತಿ ಹೋಟೆಲ್​ನಲ್ಲಿದ್ದಾಗ ಆರೋಪಿಗಳು ಅಶ್ಲೀಲವಾಗಿ ಕಾಮೆಂಟ್​ ಮಾಡಿ ಶಿಳ್ಳೆ ಹೊಡೆದಿದ್ದರು. ಇದನ್ನು ವಿರೋಧಿಸಿದ ಮಹಿಳೆ ಒಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದರು. ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ಮಧ್ಯಪ್ರವೇಶಿಸಿ ಎರಡೂ ಕಡೆ ಸಮಾಧಾನ ಮಾಡಿ ಕಳುಹಿಸಿದ್ದರು.
ನಂತರ ಮಹಿಳೆ ಹೋಟೆಲ್​ ಒಳಗೆ ಹೋಗಿ ಪತಿಯೊಂದಿಗೆ ಹೊರಬಂದಾಗ ಆರೋಪಿಗಳು ಬ್ಲೇಡ್​ನಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖಕ್ಕೆ 118 ಹೊಲಿಗೆಗಳನ್ನು ಹಾಕಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಹೋಟೆಲ್​ನ ಸಿಸಿ ಕ್ಯಾಮರಾದ ದೃಶ್ಯಾವಳಿ ಪರಿಶೀಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.
ಗೊರವನಹಳ್ಳಿ ಸಮೀಪ ಘೋರ ಕೃತ್ಯ: 3 ವರ್ಷದ ಬಳಿಕ ಸಿಕ್ಕಿಬಿದ್ದವ ಬಾಯ್ಬಿಟ್ಟ ರಹಸ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಸೊಂಟದಿಂದ ಕೆಳಭಾಗ ತುಂಡರಿಸಿದ ಸ್ಥಿತಿಯಲ್ಲಿ ಮಹಿಳೆಯರಿಬ್ಬರ ಅರ್ಧ ದೇಹಗಳು ಪತ್ತೆ! ಬೆಚ್ಚಿಬಿದ್ದ ಮಂಡ್ಯ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twenty =
Remember me
