ಮುಂಬೈ:ನಟ, ಹಿಂದಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​-13ರ ವಿಜೇತ ಸಿದ್ಧಾರ್ಥ್ ಶುಕ್ಲಾ (40) ಗುರುವಾರ ಬೆಳಗ್ಗೆ ನಿಧನರಾದರು.
ಇಂದು ಬೆಳ್ಳಗ್ಗೆ ತೀವ್ರ ಹೃದಯಾಘಾತಕ್ಕೊಳಗಾದ ಸಿದ್ಧಾರ್ಥ್​ ಶುಕ್ಲಾ ಅವರನ್ನು ಮುಂಬೈನ ಕೂಪರ್​ ಆಸ್ಪತ್ರೆಗೆ ಕುಟುಂಬಸ್ಥರು ಕರೆ ತಂದರಾದರೂ ಬದುಕಲಿಲ್ಲ. ಮೃತರಿಗೆ ತಾಯಿ ಮತ್ತು ಇಬ್ಬರು ಸಹೋದರಿಯರು ಇದ್ದಾರೆ.
ಉತ್ತರಪ್ರದೇಶದಲ್ಲಿ 1980ರ ಡಿಸೆಂಬರ್ 12ರಂದು ಮುಂಬೈನಲ್ಲಿ ಅಶೋಕ್ ಶುಕ್ಲಾ ಮತ್ತು ರೀಟಾ ಶುಕ್ಲಾ ದಂಪತಿ ಮಗನಾಗಿ ಜನಿಸಿದ ಸಿದ್ಧಾರ್ಥ್, ಮಾಡೆಲ್​ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ‘ಬಾಬುಲ್ ಕಾ ಆಂಗನ್ ಚೂಟೇ ನಾ’ ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದ ಸಿದ್ಧಾಥ್​, ‘ಬಾಲಿಕಾ ವಧು’ ಧಾರಾವಾಹಿ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.

‘ಹ೦ಪ್ಟಿ ಶರ್ಮಾ ಕೀ ದುಲ್ಹನಿಯಾ’ ಸಿನಿಮಾದಲ್ಲಿ ಪೋಷಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. ‘ಬಿಗ್ ಬಾಸ್ ಸೀಸನ್​-13’ ಸಿದ್ಧಾರ್ಥ್​ ಅವರನ್ನು ಅತ್ಯಂತ ಜನಪ್ರಿಯವನ್ನಾಗಿಸಿತು. ಏಕ್ತಾ ಕಪೂರ್ ಅವರ ಜನಪ್ರಿಯ ಕಾರ್ಯಕ್ರಮ ‘ಬ್ರೋಕನ್ ಬಟ್ ಬ್ಯೂಟಿಫುಲ್ 3’ನಲ್ಲಿ ಸಿದ್ಧಾರ್ಥ್​ ಅಗಸ್ತ್ಯನ ಪಾತ್ರ ನಿರ್ವಹಿಸಿದ್ದರು. ಇದೇ ಇವರ ನಟನೆಯ ಕೊನೇ ಪ್ರದರ್ಶನ.
ಮಗಳ ಪ್ರಿಯಕರನ ಕೊಂದು ಜೈಲು ಸೇರಿದ ಅಪ್ಪ-ಅಮ್ಮ! ಎಲ್ಲವನ್ನೂ ಕಳೆದುಕೊಂಡಾಕೆ ಕೊನೆಗೂ ಬದುಕಲಿಲ್ಲ

ಅವ್ರು ದೊಡ್ಡವ್ರು ಬೇಡವ್ವ.. ಅಂದ್ರೂ ಮದ್ವೆ ಆಗ್ತೀನಂತ ಹಠ ಹಿಡಿದು ಅವನೊಂದಿಗೇ ಬಾರದ ಲೋಕಕ್ಕೆ ಹೋಗಿಬಿಟ್ಲು…

ಮೈಸೂರು ಗ್ಯಾಂಗ್​ ರೇಪ್​: ಆ ತಡರಾತ್ರಿ ಪೊಲೀಸರನ್ನೇ ಚಾಕುವಿನಿಂದ ಇರಿಯಲು ಮನ್ನುಗ್ಗಿದ್ದ ಆರೋಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 2 =
Remember me
