ಲಂಡನ್​:ಬ್ರಿಟನ್​ ಪ್ರಧಾನಿ ಬೋರಿಸ್​​​​ ಜಾನ್ಸನ್​ ಅವರು ರಾಜೀನಾಮೆ ಕೊಡಲು ಒಪ್ಪಿಗೆ ಸೂಚಿಸಿದ್ದು, ಇಂದೇ ಪ್ರಧಾನಿ ಸ್ಥಾನ ತೊರೆಯುವ ಸಾಧ್ಯತೆ ಇದೆ. ಕ್ಯಾಬಿನೆಟ್ ಸದಸ್ಯರು ಸೇರಿದಂತೆ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ಕಳೆದ ಎರಡು ದಿನಗಳಿಂದ ರಾಜೀನಾಮೆ ನೀಡಿದ್ದು, ಬೋರಿಸ್​​​​ ಜಾನ್ಸನ್​ ನೇತೃತ್ವದ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಪರಿಣಾಮ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ಅವರು ರಾಜೀನಾಮೆ ಕೊಡುವುದಾಗಿ ಗುರುವಾರ ಘೋಷಿಸಿದ್ದಾರೆ.
ಬೋರಿಸ್​​​​ ಜಾನ್ಸನ್​ ಅವರ ಕಾರ್ಯವೈಖರಿ ವಿರುದ್ಧ ಅವರ ಸಂಪುಟದಲ್ಲೇ ಅಸಮಾಧಾನ ಸ್ಫೋಟಗೊಂಡಿದ್ದು, ಯುಕೆ ಹಣಕಾಸು ಸಚಿವ ಸ್ಥಾನಕ್ಕೆ ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್​ ಕೂಡ ರಾಜೀನಾಮೆ ನೀಡಿದ್ದರು. ಆರೋಗ್ಯ ಕಾರ್ಯದರ್ಶಿ ಸಾಜಿದ್​ ಜಾವಿದ್​ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಆಡಳಿತ ನಡೆಸುವ ಜಾನ್ಸನ್ ಅವರ ಸಾಮರ್ಥ್ಯದ ಬಗ್ಗೆ ನಾನು ವಿಶ್ವಾಸವನ್ನು ಕಳೆದುಕೊಂಡಿದ್ದೇನೆ. ಇನ್ಮುಂದೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದರು. 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರ ಸರಣಿ ರಾಜೀನಾಮೆ ಬ್ರಿಟನ್​ ಸರ್ಕಾರವನ್ನ ಭಾರೀ ಇಕ್ಕಟ್ಟಿಗೆ ಸಿಲುಕಿಸಿದ್ದು, ಕೊನೆಗೂ ತಮ್ಮ ಸ್ಥಾನಕ್ಕೆ ಬಿಟ್ರನ್​ ಪ್ರಧಾನಿ ರಾಜೀನಾಮೆ ಕೊಡಲು ಒಪ್ಪಿದ್ದಾರೆ.
57 ವರ್ಷದ ಬೋರಿಸ್​ ಜಾನ್ಸನ್​ಗೆ ಸ್ವಪಕ್ಷೀಯದವರಿಂದಲೇ​ ತೀವ್ರ ವಿರೋಧ ಎದುರಾಗಿದೆ. ಇಡೀ ಬ್ರಿಟನ್​ 2020ರ ಮೇ ತಿಂಗಳಲ್ಲಿ ಮೊದಲ ಕೋವಿಡ್​ ಲಾಕ್​ಡೌನ್​ನಲ್ಲಿ ಇರುವಾಗ ಲಂಡನ್​ನ 10 ಡ್ರೌವ್ನಿಂಗ್ ಸ್ಟ್ರೀಟ್​ನಲ್ಲಿ ಪ್ರಧಾನಿ ಜಾನ್ಸನ್​ ಮದ್ಯದ ಪಾರ್ಟಿ ನಡೆಸಿದ್ದರು ಎಂದು ಹೇಳಲಾಗಿದೆ. ಇದನ್ನು ಸ್ವತಃ ಪ್ರಧಾನಿಯೇ ಒಪ್ಪಿಕೊಂಡಿದ್ದು, 2020ರ ಬೇಸಿಗೆಯಲ್ಲಿ ತನ್ನ ಕಚೇರಿಯಲ್ಲಿ ಪಾರ್ಟಿ ಆಯೋಜಿಸಿದ್ದಾಗಿ ಹೇಳಿದ್ದಾರೆ. ಆದರೆ, ಸಾಂಕ್ರಮಿಕ ಸಮಯದಲ್ಲಿ ತಮ್ಮ ಸಿಬ್ಬಂದಿಯ ಶ್ರಮಕ್ಕೆ ಪ್ರತಿಫಲವಾಗಿ ಈ ಕಾರ್ಯಕ್ರಮ ನಡೆಸಲಾಯಿತು ಎಂದು ಜಾನ್ಸನ್​ ಸಮರ್ಥನೆಯನ್ನು ನೀಡಿದ್ದಾರೆ. ಇನ್ನು ಪಾರ್ಟಿಗೆ ಸಂಬಂಧಿಸಿದ ವಿಡಿಯೋವೊಂದು ಸಹ ಇತ್ತೀಚೆಗಷ್ಟೇ ವೈರಲ್​ ಆಗಿತ್ತು. ಪ್ರತಿಪಕ್ಷ ಲೇಬರ್​ ಪಾರ್ಟಿ ಮತ್ತು ತಮ್ಮದೇ ಕನ್ಸರ್ವೇಟಿವ್​ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಬ್ರಿಟನ್​ ಜನರ ಕೆಂಗಣ್ಣಿಗೂ ಜಾನ್ಸನ್​ ಅವರ ನಡೆ ಗುರಿಯಾಗಿತ್ತು.
ಈ ವಿವಾದದ ಬಗ್ಗೆ ಲಂಡನ್​ನ ಹೌಸ್​ ಆಫ್​ ಕಾಮನ್​ನಲ್ಲಿ ಪ್ರಧಾನಿ ಬೋರಿಸ್​ ಜಾನ್ಸನ್​ ಅವರು ಕ್ಷಮೆಯಾಚಿಸಿದ್ದರಾದರೂ ಅವರದೇ ಕನ್ಸರ್ವೇಟಿವ್​ ಪಕ್ಷದ ನಾಯಕರು ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಸರ್ಕಾರವೇ ಮಾಡಿದ ಲಾಕ್​ಡೌನ್​ ಮಾರ್ಗಸೂಚಿಯನ್ನು ಉಲ್ಲಂಘಿಸಿ ಜನರಿಗೆ ತಪ್ಪು ಸಂದೇಶವನ್ನು ರವಾನಿಸಿದ್ದಾರೆ. ಸರ್ಕಾರದ ಮೇಲೆ ಜನರ ಭಾವನೆ ಬದಲಾಗುವಂತೆ ಜಾನ್ಸನ್​ ನಡೆದುಕೊಂಡಿದ್ದಾರೆ. ಕೋವಿಡ್​ ಸಂದರ್ಭದಲ್ಲೂ ಸರಿಯಾದ ನಿರ್ವಹಣೆ ಮಾಡಲಿಲ್ಲ ಅಂತಾ ಸಾಲು ಸಾಲು ಆರೋಪಗಳು ಜಾನ್ಸನ್​​ ವಿರುದ್ಧ ಕೇಳಿಬಂದಿದ್ದು, ರಾಜೀನಾಮೆಗೆ ಬೇಡಿಕೆ ಹೆಚ್ಚಾಗಿತ್ತು. ಡೌನಿಂಗ್ ಸ್ಟ್ರೀಟ್‌ ಮತ್ತು ಇತರ ಎಲ್ಲಾ ಸರ್ಕಾರಿ ಕ್ವಾರ್ಟರ್‌ಗಳಲ್ಲಿ ನಡೆದಿರುವ ಲಾಕ್‌ಡೌನ್ ಉಲ್ಲಂಘನೆಗಳ ಕುರಿತು ಹಿರಿಯ ನಾಗರಿಕ ಸೇವಕ ಸ್ಯೂ ಗ್ರೇ ಅವರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ. ಇದೀಗ ಅನಿವಾರ್ಯವಾಗಿ ರಾಜೀನಾಮೆ ಕೊಡಲು ಒಪ್ಪಿದ್ದಾರೆ ಎಂದು ಬ್ರಿಟನ್​ ಮಾಧ್ಯಮಗಳು ವರದಿ ಮಾಡಿವೆ.(ಏಜೆನ್ಸೀಸ್​)
ಚಿರತೆ ದಾಳಿಗೆ ಬಲಿಯಾಗಿದ್ದ ಕರು ಶವವನ್ನು ಪತ್ತೆಹಚ್ಚಿದ ತಾಯಿಹಸು: ಮಳವಳ್ಳಿಯಲ್ಲಿ ಮನಕಲಕುವ ಘಟನೆ

ಸ್ಮಶಾನಕ್ಕೆ ಸಾಗಿಸುತ್ತಿದ್ದ ಶವವನ್ನು ಚಟ್ಟದಿಂದ ಕೆಳಗಿಳಿಸಿ ಶಿವಮೊಗ್ಗದ ಆಸ್ಪತ್ರೆಗೆ ರವಾನೆ! ಅಂತ್ಯಕ್ರಿಯೆಗೆ ಬಂದ ಗ್ರಾಮಸ್ಥರಿಗೆ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 2 =
Remember me
