ಅಹಮದಾಬಾದ್​:ಕೆಲವು ಸಾರ್ವಜನಿಕ ಪ್ರದೇಶಗಳು, ಮಾಲ್​ಗಳು ಮತ್ತು ಚಿತ್ರಮಂದಿರಗಳಲ್ಲಿ ಕೆಲ ಆಹಾರ ಪದಾರ್ಥಗಳ ಬೆಲೆ ನೋಡಿದರೆ ನಮಗೆ ಅಚ್ಚರಿಯಾಗುವುದು ಖಂಡಿತ. ಹೊರಗಡೆ ಪಾಪ್​ಕಾರ್ನ್​ ಕೇವಲ 10 ರೂಪಾಯಿಗೆ ಸಿಕ್ಕರೆ, ಅದೇ ಪಾಪ್​ಕಾರ್ನ್​ 15 ರಿಂದ 150 ರೂ. ವರೆಗೆ ಚಿತ್ರಮಂದಿರಗಳಲ್ಲಿ ಚಾರ್ಜ್​ ಮಾಡುತ್ತಾರೆ.
ನಮ್ಮ ಹವ್ಯಾಸಗಳನ್ನೇ ಲಾಭವಾಗಿ ಮಾಡಿಕೊಳ್ಳುವ ಅನೇಕ ಜನರಿರುವುದನ್ನು ನಾವು ನೋಡಿದ್ದೇವೆ. ಅದರಂತೆಯೇ ಅಹಮದಾಬಾದ್​ನ ರೋಹಿತ್​ ಪಾಟಿಲ್​ (67) ಅವರು ಇದೇ ರೀತಿಯ ಅನುಭವವನ್ನು ಎದುರಿಸಿ ಐದು ವರ್ಷಗಳ ಬಳಿಕ ಗೆಲವು ಸಾಧಿಸಿದ್ದಾರೆ. ಆಗಿದ್ದೇನೆಂದರೆ ಐದು ವರ್ಷಗಳ ಹಿಂದೆ ರೆಸ್ಟೋರೆಂಟ್​ ಒಂದು 20 ರೂ. ಬೆಲೆಯ ನೀರಿನ ಬಾಟಲ್​ಗೆ 150 ರೂ. ಚಾರ್ಜ್​ ಮಾಡಿದ್ದರು. ಇದರ ವಿರುದ್ಧ ಕೊರ್ಟ್​​ ಮೆಟ್ಟಿಲೇರಿದ್ದ ರೋಹಿತ್​ ಐದು ವರ್ಷಗಳ ಬಳಿಕ ಗೆಲುವು ಕಂಡಿದ್ದಾರೆ.
ಇದನ್ನೂ ಓದಿರಿ:ಪತಿಗೆ ಕೈಕೊಟ್ಟು ಮಲಮಗನನ್ನೇ ಮದ್ವೆಯಾಗಿ ಗರ್ಭಿಣಿಯಾಗಿರೋ ಮಹಿಳೆಯ ವಿಚಿತ್ರ ಹೊಸ ನಿರ್ಧಾರವಿದು!
ಘಟನೆಯ ವಿವರಣೆಗೆ ಬರುವುದಾರೆ, ಅಹಮದಾಬಾದ್​ನ ಎಸ್​ಜಿ​ ಹೆದ್ದಾರಿಯಲ್ಲಿರುವ ಹೋಟೆಲ್​ಗೆ ರೋಹಿತ್​ ಅವರು ತಮ್ಮ ಸ್ನೇಹಿತರೊಂದಿಗೆ ಐದು ವರ್ಷಗಳ ಹಿಂದೆ ತೆರಳಿದ್ದರು. ನೆಚ್ಚಿನ ಆಹಾರಗಳ ಜತೆ ನೀರಿನ ಬಾಟಲ್​ ಅನ್ನು ಆರ್ಡರ್​ ಮಾಡಿದ್ದರು. ಊಟದ ಬಳಿಕ ಬಿಲ್​ ನೋಡಿದ ರೋಹಿತ್​ ಅವರಿಗೆ ಶಾಕ್​ ಎದುರಾಗಿತ್ತು. ನೀರಿನ ಬಾಟಲ್​ಗೆ ಬರೋಬ್ಬರಿ 164 ರೂಪಾಯಿ ಬಿಲ್​ ಮಾಡಲಾಗಿತ್ತು. ತಪ್ಪಾಗಿ ನಮೂದಿಸಿರಬಹುದು ಎಂದು ವಿಚಾರಿಸಿದಾಗ, ಇಲ್ಲ ಬಾಟಲ್​ ಬೆಲೆ ಅಷ್ಟೇ ಎಂದು ಹೇಳಿದ್ದರು. ಬಳಿಕ ಮಾಲೀಕನ ಜತೆ ಸಾಕಷ್ಟು ವಾಗ್ವಾದ ಮಾಡಿದರು ಪ್ರಯೋಜನವಾಗದೆ ಕೊನೆಗೆ ಬಿಲ್ ಪಾವತಿಸಿ ಮರಳಿದ್ದರು. ಆದರೆ, ಅಷ್ಟಕ್ಕೆ ಸುಮ್ಮನಾಗದ ರೋಹಿತ್​ ಅವರು ಗ್ರಾಹಕರ ಕೋರ್ಟ್​ಗೆ ಹೋಟೆಲ್​ ಕ್ರಮವನ್ನು ಪ್ರಶ್ನಿಸಿ ದಾವೆ ಹೂಡಿದ್ದರು.
ಬಳಿಕ ಕೋರ್ಟ್​ ಹೋಟೆಲ್​ಗೆ ಲೀಗಲ್​ ನೋಟಿಸ್​ ಕಳುಹಿಸಿ ಪ್ರಕರಣ ಕುರಿತು ತಮ್ಮನ್ನು ಸಮರ್ಥಿಸಿಕೊಳ್ಳಲು ವಕೀಲರನ್ನು ಕಳುಹಿಸಲು ಸೂಚಿಸಿತ್ತು. ಇಬ್ಬರ ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯ ಐದು ವರ್ಷಗಳ ಕಾಲ ಮುಂದೂಡಿತ್ತು. ರೋಹಿತ್​ ಸುಮಾರು 28 ಬಾರಿ ಕೋರ್ಟ್​ಗೆ ಹಾಜರಾಗಿದ್ದರು. ಒಂದು ಬಾಟಲಿ ನೀರಿಗಾಗಿ ಐದು ವರ್ಷಗಳ ಹೋರಾಟ ವ್ಯರ್ಥವಾಯಿತು ಎಂದು ಎಂದಿಗೂ ರೋಹಿತ್​ ಅವರು ಯೋಚಿಸಲಿಲ್ಲವಂತೆ.
ಇದನ್ನೂ ಓದಿರಿ:5 ತಿಂಗಳ ಮಗು ಎತ್ಕೊಂಡು ಬೆತ್ತಲೆಯಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ: ಶ್ರೀಮಂತೆಯ ದುರಂತ ಕತೆಯಿದು!
ತಾಳ್ಮೆಯಿಂದಲೇ ಪ್ರತಿ ಬಾರಿ ನ್ಯಾಯಾಲಯಕ್ಕೆ ಬಂದು ವಿಚಾರಣೆ ಎದುರಿಸುತ್ತಿದ್ದರು. ಈ ತಿಂಗಳ 5ರಂದು ನ್ಯಾಯಾಲಯ ರೋಹಿತ್​ ಪರವಾಗಿ ತೀರ್ಪು ಪ್ರಕಟಿಸಿದೆ. ಎಂಆರ್​ಪಿಗಿಂತ ಹೆಚ್ಚು ದರ ವಿಧಿಸದೇ ರೋಹಿತ್​ಗೆ ಕಿರುಕುಳ ಸಹ ನೀಡಿತ್ತು. ಹೀಗಾಗಿ ನ್ಯಾಯಾಲಯ 5,500 ರೂ. ಪರಿಹಾರ ನೀಡುವಂತೆ ಹೋಟೆಲ್​ಗೆ ಆದೇಶಿಸಿದೆ.
ಈ ಬಗ್ಗೆ ಮಾತನಾಡಿರುವ ರೋಹಿತ್​, ಕೋರ್ಟ್​ ತೀರ್ಪಿನ ಬಗ್ಗೆ ಸಮಾಧಾನವಿದೆ. ಇದೇ ನನ್ನ ಮೊದಲ ಪ್ರಕರಣವಲ್ಲ. ಈಗಾಗಲೇ ಅನೇಕ ಪ್ರಕರಣಗಳನ್ನು ದಾಖಲಿಸಿದ್ದೇನೆ. ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯಲು ಯಾವ ಕಂಪನಿಗೂ ಹಕ್ಕಿಲ್ಲ ಎಂದಿರುವ ರೋಹಿತ್​, ಗ್ರಾಹಕರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕು. ಅದರನ್ನು ದರೋಡೆ ಮಾಡಬಾರದು. ಇದನ್ನು ಸಹಿಸಲು ಆಗುವುದಿಲ್ಲ ಎಂದಿದ್ದಾರೆ.(ಏಜೆನ್ಸೀಸ್​)
ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ ಎಂದು ಪತ್ರ ಬರೆದ ನೆರೆಮನೆಯವರಿಗೆ ಮಹಿಳೆ ಕೊಟ್ಟ ಉತ್ತರ ವೈರಲ್​!​
ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
