ಚೆನ್ನೈ:ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿದ್ದ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಕೃತ್ಯಕ್ಕೆ ತಂದೆಗೂ ಸಂಕಷ್ಟ ಎದುರಾಗಿದೆ.
ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಾಪನಾಸಂನ 16 ವರ್ಷದ ಬಾಲಕ ತನ್ನ ತಂದೆಯ ಮೊಬೈಲ್​ ಮೂಲಕ ಫೇಸ್​ಬುಕ್​ ಖಾತೆ ತೆರೆದು ಅದರಲ್ಲಿ ಪೋರ್ನ್​ ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿದ್ದ. ಮಗನ ಕೃತ್ಯ ಸ್ವತಃ ತಂದೆಗೇ ಗೊತ್ತಿರಲಿಲ್ಲವಂತೆ!
ಇದನ್ನೂ ಓದಿರಿಇನ್ಮುಂದೆ ಕರೊನಾ ಕುರಿತು ಬೆಳಗಿನ ಹೆಲ್ತ್​ ಬುಲೆಟಿನ್​ ಇರಲ್ಲ!
ಅಶ್ಲೀಲ ವಿಡಿಯೋ ಅಪ್ಲೋಡ್​ ಮಾಡುತ್ತಿದ್ದವನ ಪತ್ತೆಗೆ ಪಾಪನಾಸಂ ಉಪ ಪೊಲೀಸ್ ವರಿಷ್ಠಾಧಿಕಾರಿ ನಂದಗೋಪಾಲ್​ ನೇತೃತ್ವದ ತಂಡ ಮತ್ತು ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು. ಪ್ರಕರಣದ ಮಾಹಿತಿ ಕಲೆ ಹಾಕಲು ‘ಸೋಶಿಯಲ್ ಮೀಡಿಯಾ ಸೆಲ್’ನ ಸಹಾಯ ಪಡೆಯಲಾಗಿತ್ತು. ಪ್ರಮುಖ ಆರೋಪಿಯ ಜಾಡು ಹಿಡಿದ ಪೊಲೀಸರಿಗೆ ಶಾಕ್​ ಕಾದಿತ್ತು!
ಇದನ್ನೂ ಓದಿರಿನಾಳೆ ಲಾಕ್​ಡೌನ್​ ಇರಲ್ಲ!
ಈ ಕೃತ್ಯ ಎಸಗಿದ್ದು ಅಪ್ರಾಪ್ತ ಬಾಲಕ. ತನ್ನ ಫೇಸ್‍ಬುಕ್ ಖಾತೆಯಿಂದ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ ಬಾಲಕ ಈಗಷ್ಟೇ ಪ್ರಥಮ ಪಿಯು ಪರೀಕ್ಷೆ ಬರೆದವ. ಫೇಸ್‍ಬುಕ್ ಖಾತೆ ತೆರೆಯಲು ತನ್ನ ತಂದೆಯ ಮೊಬೈಲ್ ಫೋನ್ ಬಳಸಿದ್ದಾನೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಬಾಲಕನ ಜತೆಗೆ ಆತನ ತಂದೆಯನ್ನೂ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಪೋಕ್ಸೋ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೃತ್ಯಕ್ಕೆ ಬಳಸಿದ ಮೊಬೈಲ್​ ಮತ್ತು ಲ್ಯಾಪ್​ಟಾಪ್​ ಅನ್ನು ಪಾಪನಾಸಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓದುವ ವಯಸ್ಸಲ್ಲಿ ಅಶ್ಲೀಲತೆ ಬಗ್ಗೆ ತಲೆಕೆಡಿಸಿಕೊಂಡ ಬಾಲಕನೀಗ ಕಾನೂನು ಕ್ರಮ ಎದುರಿಸುವಂತಾಗಿದೆ.
ಇದನ್ನೂ ಓದಿರಿಕ್ವಾರಂಟೈನ್​ ಕೇಂದ್ರದಲ್ಲಿ ಕಾಂಡೋಮ್ ರಾಶಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eight =
Remember me
