ಮುಂಬೈ:ಮೊದಲ ಹೆಂಡತಿಗೆ ಹುಟ್ಟಿದ್ದ ಮಗನನ್ನು ನೋಡಿಕೊಳ್ಳುವ ಸಲುವಾಗಿ ಎರಡನೇ ಮದುವೆಯಾದ ವ್ಯಕ್ತಿಯೊಬ್ಬ ಹೆಂಡತಿಯ ಕಾಟ ತಾಳಲಾರದೆ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನಡೆದಿದೆ. ಮಲತಾಯೊ ಧೋರಣೆಯಿಂದಾಗಿ ಎಂಟು ವರ್ಷದ ಬಾಲಕ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ:VIDEO| ಹಸಿವು ನೀಗಿಸಿದ ಮಹಿಳೆಗೆ ಬೀದಿ ನಾಯಿಯ ಕಣ್ಣೀರಿನ ಕೃತಜ್ಞತೆ: ಕಣ್ಣಂಚಲಿ ನೀರು ತರಿಸುವ ವೈರಲ್​ ವಿಡಿಯೋ!
ಮುಕೇಶ್​ ಹೆಸರಿನ ವ್ಯಕ್ತಿ 10 ವರ್ಷಗಳ ಹಿಂದೆ ಸಾಕ್ಷಿಯೊಂದಿಗೆ ಮದುವೆಯಾಗಿದ್ದ. ದಂಪತಿಗಳು ಹಲವು ವರ್ಷಗಳ ಹಿಂದೆ ಬೇರಾಗಿದ್ದು, ಸಾಕ್ಷಿ ಪುಣೆಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಾಳೆ. ಮಗ ಶುಭಂನನ್ನು ಮುಕೇಶ್​ ನೋಡಿಕೊಳ್ಳುತ್ತಿದ್ದ. ಮೂರು ವರ್ಷಗಳ ಹಿಂದೆ ಮುಕೇಶ್ ರಾಧಾ ಹೆಸರಿನ ಯುವತಿಯನ್ನು ಮದುವೆಯಾಗಿದ್ದಾನೆ. ರಾಧಾಗೆ ಒಂದು ವರ್ಷದ ಹಿಂದೆ ಮಗುವಾಗಿದೆ. ಅದಾದ ನಂತರ ಆಕೆ ಶುಭಂನನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಗಂಡನಿಗೆ ಕಾಟ ಕೊಡಲಾರಂಭಿಸಿದ್ದಾಳೆ.
ಇದನ್ನೂ ಓದಿ:ಒಂದೇ ತಿಂಗಳಲ್ಲಿ 49 ಲವ್​ ಜಿಹಾದಿಗಳು ಅರೆಸ್ಟ್​! ಬಾಯಿಬಿಡಲು ಹೆದರುತ್ತಿರುವ ಯುವತಿಯರು
ಮನೆಯಲ್ಲಿ ಶುಭಂ ಏನೇ ತಪ್ಪು ಮಾಡಿದರೂ ಅದು ದಂಪತಿಯ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗುತ್ತಿತ್ತು. ಅದೇ ರೀತಿ ಡಿಸೆಂಬರ್​ 25ರಂದೂ ದಂಪತಿಯ ನಡುವೆ ಜಗಳವಾಗಿದೆ. ಸಿಟ್ಟಿಗೆದ್ದ ಮುಕೇಶ್​, ಶುಭಂನೊಂದಿಗೆ ಬಾವಿಗೆ ಹಾರಿದ್ದಾನೆ. ಆದರೆ ಬಾವಿಗೆ ಬಿದ್ದ ಆತ ಹೇಗೋ ತನ್ನ ಜೀವವನ್ನು ರಕ್ಷಿಸಿಕೊಂಡಿದ್ದಾನೆ. ಈಜು ಬರದ ಶುಭಂ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಮುಕೇಶ್​ ದಂಪತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)
ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!

ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
