ದೀಸ್ಪುರ್​:ನಿಜವಾದ ಪ್ರೀತಿಗೆ ಯಾವುದೇ ಮಿತಿಯಿಲ್ಲ ಎಂಬುದನ್ನು ಯುವಕನೊಬ್ಬ ಸಾಬೀತುಪಡಿಸಿದ್ದಾನೆ. ಬೇರೊಬ್ಬಳನ್ನು ಮದುವೆ ಆಗಿ ಪ್ರೇಯಸಿಗೆ ವಂಚನೆ ಮಾಡುವ ಈ ಕಾಲದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಗೆ ಪರಿಶುದ್ಧ ಪ್ರೀತಿಯನ್ನು ತೋರಿದ್ದಾನೆ. ಆದರೆ, ಆ ನಿಜವಾದ ಪ್ರೀತಿಯನ್ನು ಅನುಭವಿಸಲು ಆಕೆ ಜೀವಂತವಾಗಿಲ್ಲ ಎಂಬುದೇ ದುರಾದೃಷ್ಟಕರ ಸಂಗತಿ.​
ಮೃತ ಪ್ರೇಯಸಿಯ ಕೊರಳಿಗೆ ಯುವಕನೊಬ್ಬ ತಾಳಿ ಕಟ್ಟುವ ಮನಕಲಕುವ ದೃಶ್ಯ ಅಸ್ಸಾಂನ ಮಾರಿಂಗಾವ್​ ಜಿಲ್ಲೆಯಲ್ಲಿ ನಡೆದಿದೆ. ಮಾರಿಂಗಾವ್​ ಮೂಲದ 27 ವರ್ಷದ ಬಿಟುಪನ್​ ತಮುಲಿ ಕೌಸುವಾ ಗ್ರಾಮದ ಪ್ರಾರ್ಥನಾ ಬೊರಾ ಎಂಬಾಕೆಯ ಪ್ರೀತಿಯಬ ಬಲೆಯಲ್ಲಿ ಬಿದ್ದಿದ್ದ. ಬಹಳ ದಿನದಿಂದಲೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಾರ್ಥನಾ ಚಿಕಿತ್ಸೆ ಫಲಿಸದೇ ಮೃತಪಟ್ಟಳು. ಪ್ರೇಯಸಿಯನ್ನು ಮದುವೆ ಆಗಿ ಸಂತೋಷದ ಜೀವನ ಸಾಗಿಸಬೇಕೆಂಬ ಆಸೆಯಲ್ಲಿದ್ದ ಯುವಕನಿಗೆ ಪ್ರೇಯಸಿಯ ಸಾವು ಬರ ಸಿಡಿಲು ಬಂಡಿದಂತಾಯಿರು. ಪ್ರೇಯಸಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದ ಯುವಕ, ಪ್ರೇಯಸಿಯ ಮೃತದೇಹಕ್ಕೆ ತಾಳಿ ಕಟ್ಟಿ ತನ್ನ ಪರಿಶುದ್ಧ ಪ್ರೇಮವನ್ನು ಪ್ರದರ್ಶಿಸಿದ್ದಾನೆ.
ಪ್ರೇಯಸಿಯ ಮೃತದೇಹದ ಹಣೆಗೆ ಕುಂಕುಮ ಇಟ್ಟು, ಕೊರಳಿಗೆ ಮಾಲೆ ಹಾಕಿ ಆಕೆಯ ಕುಟುಂಬಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲೇ ಯುವಕ ಮದುವೆಯಾದನು. ಪ್ರಾರ್ಥನಾಳನ್ನು ತನ್ನ ಹೆಂಡತಿ ಎಂದು ಬಿಟುಪಾನ್ ಎಲ್ಲರ ಬಳಿ ಹೇಳಿಕೊಳ್ಳುತ್ತಾನೆ. ಬೇರೊಬ್ಬಳನ್ನು ಮದುವೆಯಾಗುವುದಿಲ್ಲ ಎಂದು ಹೇಳಿರುವ ಬಿಟುಪಾನ್​, ತನ್ನ ಜೀವನದುದ್ದಕ್ಕೂ ಒಬ್ಬಂಟಿಯಾಗಿ ಉಳಿಯುವುದಾಗಿ ಪ್ರತಿಜ್ಞೆ ಮಾಡಿದ್ದಾನೆ. ಇವರಿಬ್ಬರು ಬಹಳ ದಿನಗಳಿಂದ ಪ್ರೀತಿಸುತ್ತಿರುವಾಗಲೇ ಕುಟುಂಬಸ್ಥರು ಕೂಡ ಪ್ರೇಮ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದರು. ಶೀಘ್ರದಲ್ಲೇ ಅವರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಆಕೆಯ ಅಕಾಲಿಕ ಸಾವು ಆತನಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಪ್ರಾರ್ಥನಾ ಮನೆಯಲ್ಲಿ ಕುಸಿದು ಬಿದ್ದಿದ್ದರು. ಆಕೆಯ ಕುಟುಂಬಸ್ಥರು ಆಕೆಯನ್ನು ಗುವಾಹಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆಯಲ್ಲಿ ಕೆಲಕಾಲ ಚಿಕಿತ್ಸೆ ಪಡೆಯುತ್ತಿದ್ದಾಗ ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಆಕೆಯನ್ನು ಉಳಿಸಲಾಗಲಿಲ್ಲ. ತನ್ನ ಪ್ರಿಯತಮೆಯ ಸಾವಿನಿಂದ ತೀವ್ರ ನೊಂದು ದುಃಖ ಸಾಗರದಲ್ಲಿ ಮುಳುಗಿದ ಬಿಟುಪಾನ್‌, ಅಳುತ್ತಲೇ ಆಕೆಯ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿದನು. ಅಂತಿಮ ಸಂಸ್ಕಾರ ಮುಗಿಯುವವರೆಗೂ ಗೋಳಾಡುತ್ತಲೇ ಇದ್ದನು.
ಈ ಕುರಿತು ಪ್ರಾರ್ಥನಾ ಸಹೋದರ ಶುಭೋನ್ ಮಾತನಾಡಿದ್ದು, ಬಿಟುಪಾನ್​ ನನ್ನ ತಂಗಿಯನ್ನು ಮದುವೆಯಾಗುವುದಾಗಿ ಹೇಳಿದ್ದ. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಸ್ವಲ್ಪ ಹೊತ್ತು ಏನೂ ಅರ್ಥವಾಗಲಿಲ್ಲ. ಆದರೆ, ನನ್ನ ತಂಗಿಯನ್ನು ಇಷ್ಟು ಆಳವಾಗಿ ಪ್ರೀತಿಸುತ್ತಾನೆ ಎಂದು ನಾನು ಭಾವಿಸಿರಲಿಲ್ಲ. ನನ್ನ ತಂಗಿ ನಿಜವಾಗಿಯೂ ಅದೃಷ್ಟವಂತಳು. ಅವಳು ಬಿಟುಪಾನ್​ನನ್ನು ಮದುವೆಯಾಗಲು ಬಯಸಿದ್ದಳು. ಬಿಟುಪನ್ ಅವಳ ಆಸೆಯನ್ನು ಪೂರೈಸಿದನು. ಇದರ ಮೇಲೆ ಇನ್ನೇನು ಹೇಳಬೇಕು? ಎಂದು ಪ್ರಾರ್ಥನಾ ಸಹೋದರ ಕಣ್ಣೀರಿಟ್ಟರು.(ಏಜೆನ್ಸೀಸ್​)

ಸೊಸೆ ಜತೆ ಸ್ಕೂಟಿಯಲ್ಲಿ ಹೋಗುವಾಗ ಕೆಳಗೆ ಬಿದ್ದು ಅತ್ತೆ ಸಾವು!

ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುತ್ತಿರೋ ವಿಶ್ವಕರ್ಮ ಜನರು: ಸ್ಫೋಟಕ ಸಂಗತಿ ಬಯಲು!

ಬಿಜೆಪಿ ಸಮಾವೇಶಕ್ಕೆ ಬಂದು ಸಾವಿಗೀಡಾದ ಯುವಕ; ಶವಕ್ಕಾಗಿ ಇನ್ನೂ ಹುಡುಕಾಟ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − two =
Remember me
