|ಕೀರ್ತಿನಾರಾಯಣ ಸಿ.ಶ್ರೀನಗರ (ಜಮ್ಮು-ಕಾಶ್ಮೀರ)
ಜಮ್ಮು- ಕಾಶ್ಮೀರದಲ್ಲಿ ಉಗ್ರರ ಭಯ ನಿಧಾನವಾಗಿ ತೆರೆಮರೆಗೆ ಸರಿದಿದ್ದು, ಪ್ರತಿಷ್ಠಿತ ಕಂಪನಿಗಳು ಬಂಡವಾಳ ಹೂಡಿಕೆಗೆ ತಾ ಮುಂದು ನಾ ಮುಂದು ಎನ್ನುತ್ತಿವೆ. ಜಮ್ಮು-ಕಾಶ್ಮೀರ ಆಡಳಿತವೂ ಇನ್ನಷ್ಟು ಬಂಡವಾಳ ಹೂಡಿಕೆ ಆಕರ್ಷಿಸಲು ಭೂ ದಾಖಲೆಗಳ ಡಿಜಿಟಲೀಕರಣ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿರುವ ಪರ್ತಕರ್ತರ ಜತೆ ಗುರುವಾರ ಶ್ರೀನಗರದ ರಾಜಭವನದಲ್ಲಿ ಜಮ್ಮು-ಕಾಶ್ಮೀರ ಅಧಿಕಾರಿಗಳು ಮಾಹಿತಿ ಹಂಚಿಕೊಂಡರು. ಕಣಿವೆಯಲ್ಲಿ ಭಯೋತ್ಪಾದಕರ ನೇಮಕಾತಿಯಲ್ಲಿ ಶೇ.32 ಇಳಿಕೆಯಾಗಿದೆ. 2021ರಲ್ಲಿ 112 ಯುವಕರು ಹಾಗೂ 2020ರಲ್ಲಿ 164 ಮಂದಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ್ದರು. ಇವರಲ್ಲಿ 72 ಮಂದಿಯನ್ನು ಗಡಿಪಾರು ಮಾಡಿದ್ದು, 22 ಮಂದಿಯನ್ನು ಬಂಧಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಉಗ್ರ ಗುಂಪುಗಳಿಗೆ ನೇಮಕಾತಿ ಶೂನ್ಯಕ್ಕೆ ಇಳಿದಿದೆ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳುವ ಪ್ರಕಾರ, ಭೂಗತವಾಗಿದ್ದುಕೊಂಡು ಉಗ್ರರಿಗೆ ಮಾಹಿತಿ ನೀಡುತ್ತಿದ್ದ 670 ಶಂಕಿತರನ್ನು ಬಂಧಿಸಲಾಗಿದೆ ಮತ್ತು 89 ಭಯೋತ್ಪಾದನಾ ಕ್ಯಾಂಪ್​ಗಳನ್ನು ಭೇದಿಸಲಾಗಿದೆ. ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಗೆ ಡ್ರೋನ್​ಗಳ ಬಳಕೆ ಗಡಿಯಾಚೆಯಿಂದ ಹೆಚ್ಚುತ್ತಿದೆ. 2020ರಲ್ಲಿ 63 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. 2021ರಲ್ಲಿ ಈ ಸಂಖ್ಯೆ 42ಕ್ಕೆ ಇಳಿದಿದ್ದು, 2022ರಲ್ಲಿ 33 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
22 ಭಾಷೆಗಳಿಗೆ ಭೂ ದಾಖಲೆ ಭಾಷಾಂತರ:ಉತ್ಪಾದನೆ, ಔಷಧೀಯ ಮತ್ತು ಆಹಾರ ಸಂಸ್ಕರಣಾ ವಲಯಗಳಿಂದ ಬಂಡವಾಳ ಹೂಡಿಕೆಗೆ ಹೆಚ್ಚಿನ ಪ್ರಸ್ತಾಪಗಳು ಬಂದಿವೆ. ಡಿಸೆಂಬರ್ ವೇಳೆಗೆ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ. ನ್ಯಾಷನಲ್ ಜೆನೆರಿಕ್ ಡಾಕ್ಯುಮೆಂಟ್ ರಿಜಿಸ್ಟ್ರೇಶನ್ (ಎನ್​ಡಿಜಿಆರ್) ಅಪ್ಲಿಕೇಶನ್ ಮೂಲಕ ಭೂ ದಾಖಲೆಗಳನ್ನು 22 ಭಾಷೆಗಳಿಗೆ ಭಾಷಾಂತರಿಸುವುದು ಮತ್ತು ಭೂ ಹಕ್ಕುಗಳ ಸರಳೀಕರಣಕ್ಕೆ ಬದಲಾವಣೆಗಳನ್ನು ಮಾಡಲಾಗುತ್ತಿದೆ.
ಇಲ್ಲಿ ಉರ್ದು ಪ್ರಧಾನ ಭಾಷೆಯಾಗಿರುವುದರಿಂದ ಭೂ ದಾಖಲೆಗಳು ಉರ್ದು ಭಾಷೆಯಲ್ಲಿದ್ದವು. ಉರ್ದು ತಿಳಿದಿರುವ ಜನರು ಸಹ ಭೂ ದಾಖಲೆಗಳ ಸಿದ್ಧಪಡಿಸುವಿಕೆ ಮತ್ತು ಅದನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಿದ್ದರು. ಈಗ, ಜಮಾಬಂದಿ ಡೇಟಾವನ್ನು ಡಿಜಿಟಲೀಕರಣಗೊಳಿಸಲಾಗಿದೆ. ಜಮ್ಮು-ಕಾಶ್ಮೀರ ಆದಾಯ ದಾಖಲೆಗಳೊಂದಿಗೆ ಸಂಯೋಜಿಸಲ್ಪಟ್ಟಿರುವ ಸಿ-ಡಿಎಸಿ, ಪುಣೆ ಅಭಿವೃದ್ಧಿಪಡಿಸಿದ ತಂತ್ರಾಂಶದ ಸಹಾಯದಿಂದ ಜಮಾಬಂದಿ ಡೇಟಾ ಈಗ ಇತರ 22 ಭಾಷೆಗಳಲ್ಲಿ ಲಭ್ಯವಿದೆ. ನಾವು ಭೂಮಿಯ ವಿವರಗಳನ್ನು ಖಚಿತಪಡಿಸಿಕೊಳ್ಳಬಹುದಾದ ಕೀ ಕೋಡ್​ಗಳೊಂದಿಗೆ 3 ಭಾಷೆಗಳಲ್ಲಿ (ಹಿಂದಿ, ಇಂಗ್ಲಿಷ್ ಮತ್ತು ಉರ್ದು) ಭೂ ಪಾಸ್​ಬುಕ್​ಗಳ ವಿತರಣೆಯನ್ನು ಪ್ರಾರಂಭಿಸಿದ್ದೇವೆ. ಡಿ.15ರೊಳಗೆ ಆಧಾರ್ ಪರಿಶೀಲನೆಯನ್ನು ಪರಿಚಯಿಸಲು ಯೋಜಿಸಿದ್ದೇವೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ವಿಜಯ್ ಕೆ. ಬಿಧುರಿ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.
55000 ಕೋಟಿ ರೂ. ಹೂಡಿಕೆ ಪ್ರಸ್ತಾವ:ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಬೀಳುತ್ತಿರುವುದ ರಿಂದ ಬಂಡವಾಳ ಹೂಡಿಕೆಗೆ ಹೆಚ್ಚಿನ ಆಸಕ್ತಿ ಬಂದಿದೆ. ಪ್ರಸ್ತುತ 10 ಸಾವಿರ ಕೋಟಿಗಳಲ್ಲಿರುವ ಯೋಜನೆ ಹೂಡಿಕೆಯನ್ನು 15 ಸಾವಿರ ಕೋಟಿ ರೂ.ಗೆ ಏರಿಸುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಆಡಳಿತವು 55 ಸಾವಿರ ಕೋಟಿ ರೂ. ಮೌಲ್ಯದ ಪ್ರಸ್ತಾವನೆಗಳನ್ನು ಸ್ವೀಕರಿಸಿದ್ದು, ಈ ಪೈಕಿ 38 ಸಾವಿರ ಕೋಟಿ ರೂ. ಮೌಲ್ಯದ ಪ್ರಸ್ತಾವನೆಗಳಿಗೆ ಈಗಾಗಲೆ ಮಂಜೂರಾತಿ ನೀಡಲಾಗಿದೆ.
‘ದೈವ ದೇವರೆಂದರೆ ತಮಾಷೆಯಾ?’; ‘ಕಾಂತಾರ’ದ ‘ವರಾಹ ರೂಪಂ’ ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?

ಏನಿದು ಪ್ರೆಷರ್ ಕುಕ್ಕರ್ ಬಾಂಬ್? ಉಗ್ರರಲ್ಲಿ ಈ ಪರಿಕಲ್ಪನೆ ಶುರುವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eleven =
Remember me
