ಪಾಟ್ನಾ:ಕರೊನಾ ಮಣಿಸಲು ಮಾಸ್ಕ್​ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಪ್ರಮುಖ ಅಸ್ತ್ರ ಎಂಬುದು ವೈದ್ಯಸಮೂಹದ ಮಹತ್ತರ ಸಲಹೆ. ಆದರೂ ಕೆಲವರು ಕೋವಿಡ್​ ನಿಯಮ ಪಾಲಿಸದೆ ಸೋಂಕು ತಂದುಕೊಳ್ಳುವ ಜತೆಗೆ ಇತರರಿಗೂ ಅಂಟಿಸುತ್ತಿದ್ದಾರೆ. ಇಂತಹವರ ನಡುವೆ ವಿಭಿನ್ನವಾಗಿ ನಿಲ್ಲುತ್ತೆ ಈ ಜೋಡಿ.
ಕಳೆದ ಏ.30ರಂದು ಬಿಹಾರದ ಬೆಗುಸರಾಯ್​ನ ತೆಘ್ರಾದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೀತಿಯ ಕಂಡು ಮದುವೆ ಮನೆಯಲ್ಲಿದ್ದವರು ಹುಬ್ಬೇರಿಸಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರು ಈ ಜೋಡಿಯ ಮದುವೆ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಶುಭ ಹಾರೈಸಿದ್ದಾರೆ.

ಇತ್ತೀಚಿಗೆ ತೆಘ್ರಾದಲ್ಲಿ ಕೃತೇಶ್ ಕುಮಾರ್ ಮತ್ತು ಜ್ಯೋತಿ ಕುಮಾರಿ ಎಂಬುವರು ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಪಂತ್ಯ ಜೀವನಕ್ಕೆ ಕಾಲಿಟ್ಟರು. ಅರೇ, ಇದರಲ್ಲೇನು ವಿಶೇಷತೆ ಇದೆ ಎನ್ನಬೇಡಿ. ಅವರು ಹೂಮಾಲೆ ಬದಲಾಯಿಸಿಕೊಂಡದ್ದು ಬಿದಿರನ ಕೋಲುಗಳ ಸಹಾಯದಿಂದ. ಮೂರ್ನಾಲ್ಕು ಅಡಿ ದೂರದಲ್ಲಿ ನಿಂತು ದೈಹಿಕ ಅಂತರ ಕಾಯ್ದುಕೊಂಡ ಈ ಜೋಡಿ, ಕೋಲುಗಳ ಮೂಲಕವೇ ಪರಸ್ಪರ ಕೊರಳಿಗೆ ಹೂವಿನ ಹಾರ ಹಾಕಿಕೊಂಡರು ಮದವೆ ಆದರು. ಈ ವೇಳೆ ಮಾಸ್ಕ್​ ಅನ್ನೂ ಧರಿಸಿದ್ದರು. ಈ ಫೋಟೋ ಜಾಲತಾಣದಲ್ಲಿ ವೈರಲ್​ ಆಗಿದೆ.

ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ

ಈ ಸರ್ಕಾರವನ್ನ ನಂಬಿದ್ರೆ ನಮ್ಮೆಲ್ಲರ ತಿಥಿ ಆಗುತ್ತೆ, ಬರೆದಿಟ್ಟುಕೊಳ್ಳಿ: ಸಿಎಂ ವಿರುದ್ಧ ಏಕವಚನದಲ್ಲೇ ಶಾಸಕ ವಾಗ್ದಾಳಿ

ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ

ಚಾಮರಾಜನಗರದಲ್ಲಿ 24 ಮಂದಿ ಸಾವು: ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪ ಗರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
