ಭುವನೇಶ್ವರ:ಮದುವೆಗೆ ಭರ್ಜರಿ ಏರ್ಪಾಡಾಗಿತ್ತು. ಇನ್ನೇನು ರಾತ್ರಿಯೆಂದರೆ ಮದುವೆಯಾಗಿ ಆಕೆ ಗಂಡನ ಮನೆ ಸೇರುವವಳಿದ್ದಳು. ಆದರೆ ಮದುವೆಗೆ ಕೆಲವೇ ಗಂಟೆಗಳಿದ್ದಾಗ ವಧು ಮದುವೆ ಮಂಟಪದಿಂದಲೇ ಕಾಣೆಯಾಗಿದ್ದಾಳೆ. ಆಕೆಯಿಂದಾಗಿ ಆಕೆಯ ತಂಗಿಗೂ ಸಂಕಷ್ಟ ಬಂದೊದಗಿದೆ.
ಒಡಿಶಾದ ಕಲಹಂಡಿ ಜಿಲ್ಲೆಯ ಯುವತಿಗೆ ಗುರುವಾರದಂದು 26 ವರ್ಷದ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಅದಾಗಲೇ ಬೇರೆ ಯುವುಕನೊಂದಿಗೆ ಪ್ರೀತಿಯಲ್ಲಿದ್ದ ಯುವತಿ ಮದುವೆ ದಿನದಂದೇ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಇತ್ತ ವಧುವಿನ ಬಗ್ಗೆ ಮಾಹಿತಿಯೇ ಇಲ್ಲದ ವರನ ಕುಟುಂಬ ಮದುವೆಗೆಂದು ದಿಬ್ಬಣ ತೆಗೆದುಕೊಂಡು ಬಂದಿದೆ. ಸಮಾಜದೆದುರು ಮಾನ ಉಳಿಸಿಕೊಳ್ಳುವ ಸಲುವಾಗಿ ಎರಡು ಕುಟುಂಬಗಳು ಸೇರಿ ಒಂದು ನಿರ್ಧಾರ ಮಾಡಿವೆ. ಓಡಿ ಹೋದ ವಧುವಿನ 15 ವರ್ಷದ ತಂಗಿಯೊಂದಿಗೆ ವರನಿಗೆ ಮದುವೆ ಮಾಡಲು ನಿಶ್ಚಯಿಸಲಾಗಿದೆ.
ಇನ್ನೂ ಎಸ್​ಎಸ್​ಎಲ್​ಸಿ ಓದುತ್ತಿದ್ದ ಬಾಲಕಿಗೆ 26 ವರ್ಷದವನ ಜತೆ ಮದುವೆಯನ್ನೂ& ಮಾಡಲಾಗಿದೆ. ಆದರೆ ಇಷ್ಟೊತ್ತಿಗಾಗಲೇ ಈ ವಿಚಾರ ಪೊಲೀಸರಿಗೆ ತಲುಪಿದ್ದು, ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗ 18 ವರ್ಷದೊಳಗೆ ಮದುವೆ ಮಾಡುವುದು ಕಾನೂನುಬಾಹಿರ ಎಂದು ತನಗೆ ತಿಳಿದಿರಲಿಲ್ಲವೆಂದು ಇಬ್ಬರ ಕುಟುಂಬ ಪೊಲೀಸರೆದುರು ತಪ್ಪೊಪ್ಪಿಕೊಂಡಿದೆ.
ಈ ವಿಚಾರದಲ್ಲಿ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಇಬ್ಬರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಬಾಲಕಿ ವಯಸ್ಕಳಾಗುವವರೆಗೂ ಆಕೆಯನ್ನು ಮದುವೆ ಆದವಳಂತೆ ಪರಿಗಣಿಸದಿರಲು ಎರಡು ಕುಟುಂಬಗಳು ನಿರ್ಧರಿಸಿವೆ. ಬಾಲಕಿಯನ್ನು ಪೋಷಕರೊಂದಿಗೆ ವಾಸಿಸಲು ಬಿಟ್ಟಿದ್ದು, ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಲು ತಿಳಿಸಲಾಗಿದೆ. (ಏಜೆನ್ಸೀಸ್​)
‘ದಪ್ಪವಿದ್ದರೂ ಅದೆಷ್ಟು ಚಂದ ಇದ್ದೀಯ ಗೊತ್ತಾ?’ ವಿದ್ಯಾರ್ಥಿನಿಯೊಂದಿಗೆ ಪ್ರಾಧ್ಯಾಪಕ ನಡೆಸಿದ ಚಾಟ್​ ವೈರಲ್!

ದಾವಣಗೆರೆಯಲ್ಲಿ ಭೀಕರ ಅಪಘಾತ: ನಡುರಸ್ತೆಯಲ್ಲೇ ಹೊತ್ತಿಉರಿದ ಲಾರಿ-ಕಾರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 2 =
Remember me
