ಲಂಡನ್​:ಬ್ರಿಟನ್​ನಲ್ಲಿ ಸುದೀರ್ಘ ಅವಧಿವರೆಗೆ ಆಳ್ವಿಕೆ ನಡೆಸಿದ ಖ್ಯಾತಿ ಹೊಂದಿದ್ದ ರಾಣಿ ಎಲಿಜಬೆತ್​ 11 ಅವರು ದೀರ್ಘಕಾಲದ ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನರಾದರು. ರಾಣಿಯ ಗೌರವಾರ್ಥ ಬ್ರಿಟನ್​ನಲ್ಲಿ 10 ದಿನಗಳ ಕಾಲ ರಾಷ್ಟ್ರೀಯ ಶೋಕ ಘೋಷಿಸಲಾಗಿದೆ.
ಪ್ರಧಾನಿ ಮೋದಿ ಸಂತಾಪ:ರಾಣಿ ಎಲಿಜಬೆತ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. “2015 ಮತ್ತು 2018ರಲ್ಲಿ ಬ್ರಿಟನ್​ಗೆ ತೆರಳಿದ್ದಾಗ ಎಲಿಜಬೆತ್​ ಅವರನ್ನು ಭೇಟಿ ಮಾಡಿದ್ದೆ. ಅವರ ಪ್ರೀತಿ ಮತ್ತು ಔದಾರ್ಯವನ್ನು ಎಂದಿಗೂ ಮರೆಯುವುದಿಲ್ಲ. ಭೇಟಿ ಸಂದರ್ಭದಲ್ಲಿ ಎಲಿಜಬೆತ್​ ಅವರು ತಮ್ಮ ಮದುವೆಗೆ ಮಹಾತ್ಮ ಗಾಂಧಿ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ತೋರಿಸಿದ್ದರು’ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.
I had memorable meetings with Her Majesty Queen Elizabeth II during my UK visits in 2015 and 2018. I will never forget her warmth and kindness. During one of the meetings she showed me the handkerchief Mahatma Gandhi gifted her on her wedding. I will always cherish that gesture.pic.twitter.com/3aACbxhLgC
— Narendra Modi (@narendramodi)September 8, 2022

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಣಿ ಎಲಿಜಬೆತ್​ 2021ರ ಅಕ್ಟೋಬರ್​ನಿಂದ ನಡೆಯಲು ಮತ್ತು ನಿಲ್ಲಲು ಕಷ್ಟಪಡುತ್ತಿದ್ದರು. ಗುರುವಾರ ಬೆಳಗ್ಗೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ವೈದ್ಯರು ಅವರನ್ನು ತೀವ್ರ ನಿಗಾದಲ್ಲಿ ಇಟ್ಟಿದ್ದರು. ಕುಟುಂಬ ಸದಸ್ಯರು, ಸಂಬಂಧಿಕರು ಬೆಳಗ್ಗೆಯಿಂದಲೇ ಬಾಲ್ಮೋರಲ್​ ಅರಮನೆಗೆ ದೌಡಾಯಿಸತೊಡಗಿದ್ದರು. ಗುರುವಾರ ರಾತ್ರಿ ಕೊನೆಯುಸಿರೆಳೆದರು.
ರಾಣಿ ಎಜಿಜಬೆತ್​ ಅವರಿಗೆ 96 ವರ್ಷ ವಯಸ್ಸಾಗಿತ್ತು. ಜಗತ್ತಿನಲ್ಲೇ ಸುಧೀರ್ಘ ಆಳ್ವಿಕೆ ನಡೆಸಿದ ಎರಡನೇ ರಾಜವಂಶಸ್ಥೆಯಾಗಿ ಎಲಿಜಬೆತ್​ ದಾಖಲೆ ನಿರ್ಮಿಸಿದ್ದರು. ರಾಣಿಯ ಪಾರ್ಥಿವ ಶರೀರವನ್ನು ಬಾಲ್ಮೋರಲ್​ ಎಸ್ಟೇಟ್​ನಲ್ಲಿ ಇಡಲಾಗಿದ್ದು, ಶುಕ್ರವಾರ ಲಂಡನ್​ಗೆ ಒಯ್ಯಲಾಗುವುದು ಎಂದು ಅರಮನೆಯ ಹೇಳಿಕೆ ತಿಳಿಸಿದೆ.
Koo App
RIP Queen Elizabeth-II. A stalwart with a reign of seven decades, she was Britain’s longest serving monarch. This is the end of an era. My heartfelt condolences to the people of the UK. @PIB_India
–Hardeep Singh Puri (@hardeepspuri)9 Sep 2022

Koo App
My condolences to the people of the UK on the demise of Her Majesty #QueenElizabethII. She was one of the longest serving monarchs and a true friend of India. It is a tremendous loss for the people of England and all of us.
–Piyush Goyal (@piyushgoyal)9 Sep 2022

ಅನೇಕ ಪ್ರಥಮಗಳ ಒಡತಿ ರಾಣಿ ಎಲಿಜಬೆತ್​! ಇಲ್ಲಿದೆ ಜೀವನಪಥ… ತನ್ನ ಅಜ್ಜಿ ವಿಕ್ಟೋರಿಯಾ ಹೆಸರಲ್ಲಿದ್ದ ದಾಖಲೆಯನ್ನೂ ಮುರಿದಿದ್ದರು

ಕಲಾತ್ಮಕ ಸಹಿಯ ಶಾಂತಯ್ಯ ಇನ್ನಿಲ್ಲ: ಸಾವಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಉಪನೋಂದಣಾಧಿಕಾರಿ

ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × one =
Remember me
