ಲಂಡನ್​:ಬ್ರಿಟನ್​ ರಾಣಿ ಎಲಿಜಬೆತ್​ 11 ಅವರು ದೀರ್ಘಕಾಲದ ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನರಾದರು. ರಾಣಿಯ ಹಿರಿಯ ಮಗ, ವೇಲ್ಸ್​ನ ರಾಜಕುಮಾರ 73 ವರ್ಷದ ಚಾರ್ಲ್ಸ್​ ಅವರು ತಕ್ಷಣದಿಂದಲೇ ಅನ್ವಯವಾಗುವಂತೆ ರಾಜನಾಗಿ ಕರ್ತವ್ಯ ನಿಭಾಯಿಸುವರು. ರಾಣಿ ಎಲಿಜಬೆತ್​ ಅವರ 96 ವರ್ಷಗಳ ಜೀವಿತಾವಧಿಯಲ್ಲಿ ಅನೇಕ ಪ್ರಥಮಗಳ ಒಡತಿಯಾಗಿದ್ದರು. ಸುಧೀರ್ಘ ಆಡಳಿತ ನಡೆಸುವ ಮೂಲಕ ತನ್ನ ಅಜ್ಜಿ ವಿಕ್ಟೋರಿಯಾ ಹೆಸರಲ್ಲಿದ್ದ ದಾಖಲೆಯನ್ನೂ ಮುರಿದಿದ್ದರು. ವರ್ಷಕ್ಕೆ ಎರಡು ಬಾರಿ ಅಂದರೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಬ್ರಿಟನ್​ನಲ್ಲಿ ವಾಹನ ಪರವಾನಗಿ ಇಲ್ಲದೆ ವಾಹನ ಚಲಾಯಿಸಲು ಅನುಮತಿ ಪಡೆದ ಏಕೈಕ ವ್ಯಕ್ತಿ ಕೂಡ ರಾಣಿ ಎಲಿಜಬೆತ್​ ಆಗಿದ್ದರು. ಇಲ್ಲಿದೆ ಅವರ ಜೀವನಪಥ…
ಬ್ರಿಟನ್ ರಾಣಿ ಎಲಿಜಬೆತ್​ ಜೀವನಪಥ:1926 ಏಪ್ರಿಲ್​ 21ರಂದು ಲಂಡನ್​ನ 17 ಬ್ರೂಟನ್​ ಸೇಂಟ್​ನಲ್ಲಿ ಜನಿಸಿದ ರಾಣಿ ಎಲಿಜಬೆತ್​ ಅವರಿಗೆ ಅದೇ ವರ್ಷ ಮೇ 29ರಂದು ಬಕಿಂಗ್​ಹ್ಯಾಮ್​ ಅರಮನೆಯಲ್ಲಿರುವ ಖಾಸಗಿ ಪ್ರಾರ್ಥನಾ ಮಂದಿರದಲ್ಲಿ ನಾಮಕರಣ ಮಾಡಲಾಯಿತು. ಶಾಲೆಗೆ ಹೋಗಿಲ್ಲ, ಆದರೆ ಮನೆಯಲ್ಲೇ ಖಾಸಗಿಯಾಗಿ ಶಿಕ್ಷಣ ನೀಡಲಾಯಿತು. ತಂದೆ ಕಿಂಗ್​ ಜಾರ್ಜ್​ ನಿಧನದ ಬಳಿಕ 1952ರ ಫೆಬ್ರವರಿ 6ರಂದು ವೆಸ್ಟ್​ಮಿನಿಸ್ಟರ್​ ಅಬ್ಬೆಯಲ್ಲಿ ಬ್ರಿಟನ್​ ರಾಣಿಯಾಗಿ ಎಲಿಜಬೆತ್​ ಪಟ್ಟಕ್ಕೇರಿದರು. ಇದು ದೂರದರ್ಶಕದಲ್ಲಿ ಪ್ರಸಾರವಾದ ಮೊದಲ ಪಟ್ಟಾಭಿಷೇಕ ಕಾರ್ಯಕ್ರಮ ಕೂಡ.
ಗ್ರೀಕ್​ ರಾಜಕುಮಾರನ ಜತೆ ಮದುವೆ:ಎಲಿಜಬೆತ್​ ಅವರು 1947ರ ನವೆಂಬರ್​ 20ರಂದು ಲಂಡನ್​ನ ವೆಸ್ಟ್​ಮಿನಿಸ್ಟರ್​ ಅಬೆಯಲ್ಲಿ ಗ್ರೀಕ್​ ರಾಜಕುಮಾರ, ನೌಕಾಪಡೆಯ ಲೆಫ್ಟಿನೆಂಟ್​ ಫಿಲಿಪ್​ ಮೌಂಟ್​ಬ್ಯಾಟನ್​ ಅವರನ್ನು ವಿವಾಹವಾದರು. ಈ ದಂಪತಿಗೆ ನಾಲ್ವರು ಮಕ್ಕಳು. ಪ್ರಿನ್ಸ್​ ಚಾರ್ಲ್ಸ್​ (ಜನನ 1948), ಪ್ರಿನ್ಸೆಸ್​ ಅನ್ನೆ (1950), ಪ್ರಿನ್ಸ್​ ಆ್ಯಂಡ್ರೂ (1960) ಮತ್ತು ಪ್ರಿನ್ಸ್​ ಎಡ್ವರ್ಡ್​ (1964). ಪತಿ ಫಿಲಿಪ್​ 2021ರ ಏಪ್ರಿಲ್​ನಲ್ಲಿ 99ನೇ ವಯಸ್ಸಿನಲ್ಲಿ ನಿಧನರಾದರು.

ವರ್ಷಕ್ಕೆ ಎರಡು ಬಾರಿ ಹುಟ್ಟುಹಬ್ಬ ಆಚರಣೆ:ಬ್ರಿಟನ್ ರಾಣಿ ಎಲಿಜಬೆತ್​ ಅವರು ವರ್ಷಕ್ಕೆ ಎರಡು ಬಾರಿ ಅಂದರೆ ಏಪ್ರಿಲ್​ 21 ಮತ್ತು ಜೂನ್​ 11ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಬ್ರಿಟನ್​ನಲ್ಲಿ ವಾಹನ ಪರವಾನಗಿ ಇಲ್ಲದೆ ವಾಹನ ಚಲಾಯಿಸಲು ಅನುಮತಿ ಪಡೆದ ಏಕೈಕ ವ್ಯಕ್ತಿಯಾಗಿದ್ದರು. ಕುದುರೆ ಸವಾರಿ, ಪಾರಿವಾಳ ರೇಸಿಂಗ್​, ಪುಟ್ಬಾಲ್​ ಎಂದರೆ ಅವರಿಗೆ ಇಷ್ಟ. ಎಲಿಜಬೆತ್​ ಸಿಂಹಾಸನಕ್ಕೇರಿದಾಗ ಸೋವಿಯತ್​ ಒಕ್ಕೂಟದಲ್ಲಿ ಜೋಸೆಫ್​​ ಸ್ಟಾಲಿನ್​, ಚೀನಾದಲ್ಲಿ ಮಾವೊ ಝೆಡಾಂಗ್​ ಮತ್ತು ಅಮೆರಿಕದಲ್ಲಿ ಹ್ಯಾರಿ ಟ್ರೂಮನ್​ ನೇತೃತ್ವ ವಹಿಸಿದ್ದರು. ಬ್ರಿಟನ್​ನಲ್ಲಿ ವಿನ್​ಸ್ಟನ್​ ಚರ್ಚಿಲ್​​ ಪ್ರಧಾನಿಯಾಗಿದ್ದರು. ಎಲಿಜಬೆತ್​ ಅವಧಿಯಲ್ಲಿ ಬೋರಿಸ್​ ಜಾನ್ಸನ್​ ಸೇರಿದಂತೆ 15 ಮಂದಿ ಬ್ರಿಟನ್​ ಪ್ರಧಾನಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಮೆರಿಕದಲ್ಲಿ 14 ಮಂದಿ ಅಧ್ಯಕ್ಷರಾಗಿದ್ದರು.

ಸುದೀರ್ಘ ಅವಧಿಯ ಆಳ್ವಿಕೆಯ ಹಿರಿಮೆ:ಜಗತ್ತಿನಲ್ಲೇ ಸುದೀರ್ಘ ಆಳ್ವಿಕೆ ನಡೆಸಿದ ಎರಡನೇ ರಾಜವಂಶಸ್ಥೆಯಾಗಿ ಎಲಿಜಬೆತ್​ ದಾಖಲೆ ನಿರ್ಮಿಸಿದ್ದರು. ಫ್ರಾನ್ಸ್​ನ 14ನೇ ಲೂಯಿಸ್​ 1643ರಿಂದ 1715ರವರೆಗೆ ಒಟ್ಟು 72 ವರ್ಷ 112 ದಿನಗಳ ಕಾಲ ಆಡಳಿತ ನಡೆಸಿ, ಜಗತ್ತಿನಲ್ಲಿ ಸುದೀರ್ಘ ಅವಧಿವರೆಗೆ ಆಳ್ವಿಕೆ ನಡೆಸಿದ ರಾಜ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಥಾಯ್ಲೆಂಡ್​ನ ರಾಜ ಭುಮಿಬೊಲ್​ ಅದುಲ್ಯದೆಜ್​ ಅವರು ಸುದೀರ್ ಅವಧಿವರೆಗೆ ಸಿಂಹಾಸನದಲ್ಲಿದ್ದ ಎರಡನೇ ರಾಜ ಎನಿಸಿದ್ದರು. ಅವರು 1927ರಿಂದ 2016ರವರೆಗೆ 70 ವರ್ಷ 126 ದಿನ ಆಳ್ವಿಕೆ ನಡೆಸಿದ್ದರು. ರಾಣಿ ಎಲಿಜಬೆತ್​ ಅವರು ಆ ದಾಖಲೆ ಮುರಿದು ಭುಮಿಬೊಲ್​ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. 1953ರಲ್ಲಿ ಬ್ರಿಟನ್​ ರಾಣಿಯಾಗಿ ಪಟ್ಟಕ್ಕೇರಿದ ಎರಡನೇ ಎಲಿಜಬೆತ್​ ಅವರು 2015ರಲ್ಲಿ ತಮ್ಮ ಅಜ್ಜಿ ವಿಕ್ಟೋರಿಯಾ ಹೆಸರಲ್ಲಿದ್ದ ದಾಖಲೆ ಮುರಿದು ಬ್ರಿಟನ್​ ರಾಜಮನೆತನದ ದೀರ್ಘಾವಧಿಯ ರಾಣಿ ಎನಿಸಿಕೊಂಡಿದ್ದರು.
15 ದೇಶಗಳ ರಾಣಿ:ಮುತ್ತಜ್ಜಿ ರಾಣಿ ವಿಕ್ಟೋರಿಯಾ ಆಳ್ವಿಕೆ ನಡೆಸಿದ 63 ವರ್ಷ, 7 ತಿಂಗಳು, 2 ದಿನಗಳು, 16 ಗಂಟೆಗಳು ಮತ್ತು 23 ನಿಮಿಷಗಳನ್ನು ಹಿಂದಿಕ್ಕಿ ದೇಶದ ದೀರ್ಘಾವಧಿಯ ರಾಣಿ ಎಂಬ ಹೆಗ್ಗಳಿಕೆಗೆ 2015ರ ಸೆಪ್ಟೆಂಬರ್​ 9ರಂದು ರಾಣಿ ಎಲಿಜಬೆತ್​ ಪಾತ್ರರಾದರು. 1066ರಲ್ಲಿ ನಾರ್ಮನ್​ ಕಿಂಗ್​ ವಿಲಿಯಂ ದಿ ಕಾಂಕರ್​ ಸಾಯುವವರೆಗೂ ಇಂಗ್ಲೆಂಡಿನ ರಾಜ ಎನಿಸಿಕೊಂಡಿದ್ದರು. ಎಲಿಜಬೆತ್​ ಅವರು ಯುನೈಟೆಡ್​ ಕಿಂಗ್​ಡಮ್​, ಆಸ್ಟ್ರೆಲಿಯಾ, ಕೆನಡಾ, ನ್ಯೂಜಿಲೆಂಡ್​, ಜಮೈಕಾ, ಆಂಟಿಗುವಾ , ಬಾರ್ಬುಡಾ, ಬಹಮಾಸ್​, ಬೆಲೀಜ್​, ಗ್ರೆನೆಡಾ, ಪಪುವಾ ನ್ಯೂ ಗಿನಿಯಾ, ಸೊಲೊಮನ್​ ದ್ವೀಪಗಳು, ಸೇಂಟ್​ ಕಿಟ್ಸ್​ ಮತ್ತು ನೆವೀಸ್​, ಸೇಂಟ್​ ಲೂಸಿಯಾ, ಸೇಂಟ್​ ವಿನ್ಸೆಂಟ್​, ಗ್ರೆನಡೈನ್ಸ್​ ಮತ್ತು ಟುವಾಲು ಸೇರಿದಂತೆ 15 ದೇಶಗಳ ರಾಣಿಯಾಗಿದ್ದರು. ರಾಣಿಯಾಗಿ 70 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 2022ರ ಫೆಬ್ರವರಿ 6ರಂದು ಪ್ಲಾಟಿನಂ ಜುಬಿಲಿ ಆಚರಿಸಿಕೊಂಡಿದ್ದರು. ರಾಣಿಯಾದಾಗಿನಿಂದ 260 ಸಾಗರೋತ್ತರ ಪ್ರವಾಸ ಕೈಗೊಂಡಿದ್ದರು. ರಾಣಿಯಾದ ಕಾರಣದಿಂದ ತೆರಿಗೆ ಕಟ್ಟಬೇಕಾದ ಅಗತ್ಯ ಇರಲಿಲ್ಲ. ಆದರೆ 1993ರಿಂದ ತೆರಿಗೆ ಪಾವತಿಸುತ್ತಿದ್ದರು.
ಅನೇಕ ಪ್ರಥಮಗಳ ಒಡತಿ:ರಾಣಿ ಎಲಿಜಬೆತ್​ ಆಳ್ವಿಕೆಯಲ್ಲಿ ಬ್ರಿಟನ್​ ರಾಜಪ್ರಭುತ್ವವು ಅನೇಕ ಪ್ರಥಮಗಳನ್ನು ಒಳಗೊಂಡಿತ್ತು. ಅವರ ಪಟ್ಟಾಭಿಷೇಕವು ವೆಸ್ಟ್​ಮಿನಿಸ್ಟರ್​ ಅಬೆಯಿಂದ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರಸಾರವಾಯಿತು. ರಾಜಮನೆತನವು ತನ್ನದೇ ಆದ ವೆಬ್​ಸೈಟ್​ ಮತ್ತು ಟ್ವಿಟರ್​ ಖಾತೆ ಪ್ರಾರಂಭಿಸಿತು. ರಾಣಿಯ ಸಾಂಪ್ರದಾಯಿಕ ಕ್ರಿಸ್ಮಸ್​ ಸಂದೇಶವನ್ನು ಯೂಟ್ಯೂಬ್​ನಲ್ಲಿ ಪ್ರಸಾರ ಮಾಡಲಾಗುತ್ತದೆ.
ರಾಣಿ ಎಲಿಜಬೆತ್​ ನಿಧನ, ಬ್ರಿಟನ್​ನಲ್ಲಿ 10 ದಿನ ರಾಷ್ಟ್ರೀಯ ಶೋಕ: ಪ್ರಧಾನಿ ಮೋದಿ ಸಂತಾಪ

ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + 10 =
Remember me
