ರಾಷ್ಟ್ರರಾಜಧಾನಿಯಲ್ಲಿ ಸಿಕ್ಕಾಪಟೆ ಆಗುತ್ತಿದೆ. ಇಂದು ಕೂಡ ವಿಪರೀತ ಮಳೆ ಸುರಿದಿದ್ದು ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಕೂಡ ನೀರು ತುಂಬಿದ್ದು, ಜನ, ವಾಹನ ಸಂಚಾರಕ್ಕೆ ತೊಡಕಾಗಿದೆ.
ಅಂಡರ್​ಪಾಸ್​ಗಳಲ್ಲಿ ಮುಳುಗುವಷ್ಟು ನೀರು ನಿಂತಿದ್ದು, ರಸ್ತೆಗಳ ಮೇಲೆ ಕೂಡ ಸೊಂಟದಷ್ಟು ಎತ್ತರಕ್ಕೆ ಬರುವಷ್ಟು ನೀರು ಇದೆ. ಅನೇಕ ಕಡೆಗಳಲ್ಲಿ ಮರಗಳು ಮುರಿದುಬಿದ್ದು, ವಿದ್ಯುತ್​ ವ್ಯತ್ಯಯವಾಗಿದೆ. ಗುರ್​ಗಾಂವ್​, ನೊಯ್ಡಾಗಳಲ್ಲೂ ಇದಕ್ಕೆ ಹೊರತಾಗಿರಲಿಲ್ಲ. ಮಳೆಯಲ್ಲಿ ಸಿಲುಕಿದ ಅದೆಷ್ಟೋ ಜನರು ತಮ್ಮ ಮನೆಯನ್ನು ತಲುಪಲು ಪರದಾಡುವಂತಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು.ಇದನ್ನೂ ಓದಿ:ಏಕತಾ ಮೂರ್ತಿಗೆ ಸಿಐಎಸ್​ಎಫ್​ ಕಾವಲು; ಆಗಸ್ಟ್​ 25ರಂದು 275 ಸಿಬ್ಬಂದಿ ನಿಯೋಜನೆ
ದಕ್ಷಿಣ ದೆಹಲಿಯ ಸಾಕೇತ್​​ನಲ್ಲಿರುವ ಶಾಲೆಯೊಂದರ ಕಾಂಪೌಂಡ್ ಗೋಡೆ ಕುಸಿದು ಸುಮಾರು ಏಳು ಕಾರುಗಳು ಜಖಂಗೊಂಡಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಗುರ್​ಗಾಂವ್​ ಅಂಡರ್​ಪಾಸ್​​ನಲ್ಲಿ ನಿಂತಿದ್ದ ಕಾರೊಂದು ಮುಕ್ಕಾಲು ಭಾಗ ಮುಳುಗಿದ್ದು, ಅದರ ಮೇಲ್ಮೈ ಮಾತ್ರ ಕಾಣಿಸುತ್ತಿದೆ. ಈ ಫೋಟೋ ಕೂಡ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ದೆಹಲಿಯಲ್ಲಿ ನಿನ್ನೆಯಿಂದಲೇ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. (ಏಜೆನ್ಸೀಸ್​)
ಲಾಕ್​ಡೌನ್​ನಲ್ಲಿ ಕ್ರಿಕೆಟ್​ ಆಡುವುದೇ ಮರೆತುಹೋಗುತ್ತೆ ಎಂದು ಹೆದರಿದ್ದ ಕೆಎಲ್​ ರಾಹುಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 3 =
Remember me
