ಬೆಂಗಳೂರು:ಸೋಷಿಯಲ್ ಮೀಡಿಯಾದಲ್ಲಿ ಒಂದು ಸ್ಟೇಟಸ್ ಹಾಕುವ ಮುನ್ನ ತುಂಬಾ ಯೋಚಿಸಬೇಕಾಗುತ್ತದೆ. ಏಕೆಂದರೆ ತಮಾಷೆಗೆಂದು ಹಾಕಿದ ಒಂದು ಸಣ್ಣ ಸ್ಟೇಟಸ್​ ಕೂಡ ವಿವಾದಕ್ಕೀಡಾಗಿ ಗಂಭೀರ ಎನಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.
ಅಂಥದ್ದೇ ಒಂದು ಪ್ರಕರಣ ಇದೀಗ ಉಂಟಾಗಿದ್ದು, ಪರಿಣಾಮವಾಗಿ ಐಎಎಸ್​ ಅಧಿಕಾರಿಯೊಬ್ಬರ ವಿರುದ್ಧ ಕ್ರಿಕೆಟಿಗರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸುವಂತಾಗಿದೆ. ಸೋಮೇಶ್​ ಉಪಾಧ್ಯಾಯ ಎಂಬ ಐಎಎಸ್ ಅಧಿಕಾರಿಯೊಬ್ಬರು ಹಾಕಿದ್ದ ಸ್ಟೇಟಸ್​ಗೆ ಕ್ರಿಕೆಟಿಗ ಅಮಿತ್​ ಮಿಶ್ರಾ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯರು ಬ್ಯಾಡ್ಮಿಂಟನ್​ನಲ್ಲಿ ಅದು ಹೇಗೆ ತಮಗಿಂತ ಉತ್ತಮವಾಗಿದ್ದಾರೆ ಎಂದು ಇಂಡೋನೇಷ್ಯಾದವರು ಅಚ್ಚರಿಪಡುತ್ತಿದ್ದಾರೆ ಎಂಬ ಕ್ಯಾಪ್ಷನ್​ನೊಂದಿಗೆ ಸೊಳ್ಳೆ ಸಾಯಿಸುವಂಥ ಬ್ಯಾಟ್​ ಚಿತ್ರವೊಂದನ್ನು ಟ್ವೀಟ್​ ಮಾಡಿದ್ದರು.
ಅದನ್ನು ಗಂಭೀರವಾಗಿ ಪರಿಗಣಿಸಿರುವ ಕ್ರಿಕೆಟಿಗ ಅಮಿತ್ ಮಿಶ್ರಾ, ಇದು ಅಭಿರುಚಿಹೀನ ಮಾತ್ರವಲ್ಲ, ನಮ್ಮ ಬ್ಯಾಡ್ಮಿಂಟನ್​ ಹೀರೋಗಳ ಸಾಧನೆಯನ್ನು ಅವಹೇಳನ ಮಾಡುವಂಥದ್ದು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡೂ ಟ್ವೀಟ್​ಗಳು ಭಾರಿ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದು, ತಮಾಷೆ ಎಂಬುದು ಗಂಭೀರವಾಗಿ ಪರಿಣಮಿಸಿದೆ.
This is not only distasteful but also insulting the achievement of our badminton heroes.https://t.co/QFWWKKw55t
— Amit Mishra (@MishiAmit)May 16, 2022

ಬೆಳಗಿನ ಜಾವ ಮನೆ ಬಾಗಿಲು ತೆರೆದವರಿಗೆ ಕಾದಿತ್ತು ಅಚ್ಚರಿ!; ನಾನೇ ಇಟ್ಕೋತೀನಿ ಅಂದ್ರೂ ಪೊಲೀಸರು ಬಿಡಲಿಲ್ಲ!

ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − fifteen =
Remember me
