ನವದೆಹಲಿ:ಕೋವಿಡ್-19 ಸಾಂಕ್ರಾಮಿಕತೆಯು ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲು ಒದಗಿಸಿರುವ ಅವಕಾಶವನ್ನು ಬಳಸಿಕೊಂಡಿರುವ ಸರ್ಕಾರ, ಲಸಿಕೆಗಳನ್ನು ಮಾನವನ ಮೇಲೆ ಪ್ರಯೋಗಿಸುವ (ಕ್ಲಿನಿಕಲ್ ಪರೀಕ್ಷೆ) ಕಾನೂನುಬದ್ಧ ಅವಧಿಯನ್ನು ಕಡಿತಗೊಳಿಸುವ ಹಾಗೂ ಲಸಿಕೆ, ಡಯಾಗ್ನಸ್ಟಿಕ್ ಹಾಗೂ ರೋಗ ನಿವಾರಣೆ ಚಿಕಿತ್ಸಾ ವಿಧಾನಗಳ ಸಂಶೋಧನೆ-ಅಭಿವೃದ್ಧಿಗೆ ವೇಗ ನೀಡಲು ಮುಂದಾಗಿದೆ. ಈ ಬಗ್ಗೆ ಕಾನೂನುಗಳಿಗೆ ತಿದ್ದುಪಡಿ ತರುವ ಸಂಭವವೂ ಇದೆ.
ಮಹಾಮಾರಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಲಸಿಕೆ ಹಾಗೂ ಔಷಧ ಕಂಡು ಹಿಡಿಯಲು ಭಾರತ, ಚೀನಾ, ಅಮೆರಿಕ ಸಹಿತ ಅನೇಕ ದೇಶಗಳು ಪ್ರಯತ್ನಿಸುತ್ತಿವೆ. ಅದಕ್ಕೆ ಬಹಳ ಸಮಯ ಬೇಕಾಗುವ ನಿರೀಕ್ಷೆಯಿದೆ. ಈ ನಡುವೆಯೂ ಒಂದು ವೇಳೆ ಯಾವುದೇ ಲಸಿಕೆ ಕಂಡು ಹಿಡಿದರೂ ಅದು ಮಾನವರ ಮೇಲೆ ಬಳಸಲು ಯೋಗ್ಯ ಎಂಬುದನ್ನು ನಿರ್ಧರಿಸಲು ಅಗತ್ಯವಾಗುವ ಪರೀಕ್ಷೆಗೆ ಇನ್ನಷ್ಟು ಸಮಯ ತಗಲುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ಕ್ಲಿನಿಕಲ್ ಪರೀಕ್ಷೆಗೆ ಅನುಮತಿ ನೀಡುವ ಅವಧಿಯನ್ನು ಕಡಿತಗೊಳಿಸಲು ಭಾರತ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ನೀತಿ ಆಯೋಗ ಈ ಪ್ರಯತ್ನಗಳಿಗೆ ನೇತೃತ್ವ ವಹಿಸಿದೆ.
ಕಠಿಣ ನಿಯಮ
ಹಾಲಿ ಇರುವ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಔಷಧ ಉದ್ಯಮವು ಹಲವು ತೊಂದರೆ ಎದುರಿಸುತ್ತಿದೆ. ಹಾಗೂ ಕ್ಲಿನಿಕಲ್ ಪರೀಕ್ಷೆಗಳನ್ನು ಸಂಸ್ಥೆಗಳು ಬ್ರೆಜಿಲ್ ಮತ್ತು ಅಮೆರಿಕದಲ್ಲಿ ನಡೆಸಬೇಕಾಗಿದೆ.
ಯಾರ ನೇತೃತ್ವ?
ಕ್ಲಿನಿಕಲ್ ಪರೀಕ್ಷೆ ಅವಧಿ ಕಡಿತಗೊಳಿಸುವ ವಿಚಾರಕ್ಕೆ ಕೇಂದ್ರೀಯ ಔಷಧಗಳ ಮಾನದಂಡ ನಿಯಂತ್ರಣ ಸಂಸ್ಥೆ ಪ್ರಮುಖ ಸಂಪರ್ಕ ಸಂಸ್ಥೆಯಾಗಿರುತ್ತದೆ. ಆರೋಗ್ಯ ಸಚಿವಾಲಯ ಕಾರ್ಯದರ್ಶಿ ನೇತೃತ್ವದ ಸಮಿತಿ 15 ದಿನ ಅಥವಾ ತಿಂಗಳಿಗೊಮ್ಮೆ ಸಭೆ ಸೇರಿ ಪ್ರಸ್ತಾಪನೆಗಳ ಮೇಲೆ ನಿರ್ಧಾರ ಕೈಗೊಳ್ಳಲಿದೆ.
90 ದಿನದೊಳಗೆ ನಿರ್ಧಾರ
ಕ್ಲಿನಿಕಲ್ ಪರೀಕ್ಷೆಗಳಿಗೆ ಕಾನೂನು ಸಮ್ಮತಿ ಒದಗಿಸುವುದಕ್ಕೆ ಪುಣೆ ಮೂಲದ ಸಿಡಿಎಸಿ ಒಂದು ಸಮಾನ ವೇದಿಕೆಯನ್ನು ಸೃಷ್ಟಿಸಲಿದೆ. ಕ್ಲಿನಿಕಲ್ ಪರೀಕ್ಷೆಗೆ ಒಪ್ಪಿಗೆ ನೀಡಲು 90 ದಿನದೊಳಗೆ ನಿರ್ಧಾರ ಕೈಗೊಳ್ಳಬೇಕು ಎಂಬುದು ಇದರ ಆಶಯವಾಗಿದೆ. ನೀತಿ ಆಯೋಗದ ಪ್ರಸ್ತಾಪನೆಗಳ ಚರ್ಚೆಗೆ ಸಂಪುಟ ಕಾರ್ಯದರ್ಶಿ ಹಾಗೂ ಹಲವು ಸಚಿವಾಲಯಗಳ ಅಧಿಕಾರಿಗಳು ಸರಣಿ ಸಭೆಗಳನ್ನು ನಡೆಸಿದ್ದಾರೆ. ಫಾರ್ವ, ಜೈವಿಕ ಔಷಧ ಮತ್ತು ಡಯಾಗ್ನಸ್ಟಿಕ್ ಕ್ಷೇತ್ರಗಳಲ್ಲಿ ಭಾರತ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಗಳಿಸುವಂತಾಗಲು ಕೈಗೊಳ್ಳಬೇಕಾದ ಕ್ರಮಗಳನ್ನು ರ್ಚಚಿಸಲಾಗಿದೆ. ಭಾರತ ಶೇಕಡಾ 16ರಷ್ಟು ಮಾರುಕಟ್ಟೆ ಪಾಲು ಹೊಂದಿತ್ತು. ಅದೀಗ ಬಹುತೇಕ ಶೇಕಡಾ 1ಕ್ಕೆ ಕುಸಿದಿದೆ. ಕಳೆದ ಕೆಲವು ವರ್ಷಗಳಲ್ಲಿ ತರಲಾದ ಕಠಿಣ ಕಾನೂನುಗಳು ಹಾಗೂ ನಿಯಮಗಳಿಂದಾಗಿ ಈ ಕ್ಷೇತ್ರ ತೀರ ಸೊರಗಿ ಹೋಗಿದೆ.
ಒಡಿಶಾದ ನದಿಯಲ್ಲಿ ಮುಳುಗಿದ್ದ 500 ವರ್ಷ ಹಳೆಯ ದೇಗುಲ ಗೋಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + nine =
Remember me
