ಚೆನ್ನೈ:ಮಕ್ಕಳಲ್ಲಿ ಯಾವುದೇ ಸಮಸ್ಯೆಯಿದ್ದರೂ, ಅದು ತಾಯಿಗೆ ದೊಡ್ಡ ಸಮಸ್ಯೆಯೆನಿಸುವುದೇ ಇಲ್ಲವಂತೆ. ಆದರೆ ಇಲ್ಲೊಬ್ಬ ತಾಯಿ ಮಾತ್ರ ನರ ಸಮಸ್ಯೆಯಿಂದ ಬಳಲುತ್ತಿದ್ದ ಮಗನನ್ನು ನೋಡಿಕೊಳ್ಳಲಾಗುತ್ತಿಲ್ಲ ಎಂದು ಕೊಲೆ ಮಾಡಿರುವಂತಹ ಘಟನೆ ನಡೆದಿದೆ.
ಇದನ್ನೂ ಓದಿ:ವಧು ಎಂದು ನಂಬಿಸಿ ಕೆಲಸದವಳನ್ನೇ ಮದುವೆ ಮಾಡಿಸಿದಳು! ಹೆಂಡತಿಗೆ ಗಿಫ್ಟ್​ ಕೊಟ್ಟಿದ್ದ ಮೊಬೈಲ್​ನಿಂದಲೇ ಬಯಲಾಯಿತು ಸತ್ಯ!
ಹೌದು! ಇಂತದ್ದೊಂದು ಘಟನೆ ಚೆನ್ನೈನಲ್ಲಿ ನಡೆದಿದೆ. ಈಗ 11 ತಿಂಗಳ ಹಿಂದೆ, ಅಂದರೆ ಜನವರಿಯಲ್ಲಿ 33 ವರ್ಷದ ನಾಡಿಯಾ ಹೆಸರಿನ ಮಹಿಳೆ ತನ್ನ ಮೂರು ವರ್ಷದ ಮಗ ಇಶಾಂತ್​ನನ್ನು ಸ್ಟಾನ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತಂದಿದ್ದಳು. ಮಗ ಆಟವಾಡುತ್ತಿದ್ದಾಗ ಮುಗ್ಗರಿಸಿ ಬಿದ್ದು, ತಲೆಗೆ ಪೆಟ್ಟು ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಳು. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಮೂರೇ ದಿನಗಳಲ್ಲಿ ಮಗು ಪ್ರಾಣ ಬಿಟ್ಟಿತ್ತು. ಈ ವಿಚಾರದಲ್ಲಿ ಯಾವುದೇ ಅನುಮಾನವನ್ನು ಆಸ್ಪತ್ರೆಯ ವೈದ್ಯರು ವ್ಯಕ್ತಪಡಿಸಿರಲಿಲ್ಲ.
ಮಗು ಸತ್ತ ಕೆಲ ದಿನಗಳಲ್ಲಿ, ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಮಗು ಮುಗ್ಗರಿಸಿ ಬಿದ್ದು ಸಾವನ್ನಪ್ಪಿಲ್ಲ ಎನ್ನುವುದು ವರದಿಯಲ್ಲಿ ದಾಖಲಾಗಿದೆ. ಮಗುವಿನಲ್ಲಿ ನರ ಸಮಸ್ಯೆಯಿದ್ದಿದ್ದರಿಂದಾಗಿ ಅದು ಇನ್ನೂ ನಡೆಯಲು ಕೂಡ ಕಲಿತಿರಲಿಲ್ಲ ಎನ್ನುವುದು ತಿಳಿದುಬಂದಿದೆ. ಇದಾದ ನಂತರ ವಿಚಾರಣೆ ನಡೆಸಿದ ಪೊಲೀಸರಿಗೆ ಇದು ಆಕಸ್ಮಿಕವಲ್ಲ, ಕೊಲೆ ಎನ್ನುವುದು ತಿಳಿದುಬಂದಿದೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ತರಗತಿಗಳ ಆರಂಭಕ್ಕೆ ಸಿದ್ಧತೆ; ಕರೊನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳ ಎಚ್ಚರಿಕೆ
ಮಗನಿಗೆ ಮೂರು ವರ್ಷವಾದರೂ ಆತ ಇನ್ನೂ ಚಿಕ್ಕ ಮಗುವಿನಂತೇ ಇರುತ್ತಿದ್ದ. ಪ್ರತಿದಿನ ಆತನನ್ನು ನೋಡಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸವಾಗುತ್ತಿತ್ತು. ಅದಕ್ಕಾಗಿ ನಾನೇ ಕೊಲೆ ಮಾಡಿದೆ ಎಂದು ಮಗುವಿನ ತಾಯಿ ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. (ಏಜೆನ್ಸೀಸ್​)
ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!

ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 10 =
Remember me
