ಹೈದರಾಬಾದ್​:ಪೊಲಿಯೋ ಡ್ರಾಪ್ಸ್​ ಪಡೆದ ಕೆಲವೇ ಕ್ಷಣಗಳಲ್ಲಿ ಎರಡು ವರ್ಷದ ಮಗು ಸಾವಿಗೀಡಾಗಿರುವ ಘಟನೆ ತೆಲಂಗಾಣದ ಮೇಡ್ಚಲ್-ಮಲ್ಕಜ್ಗಿರಿ ಜಿಲ್ಲೆಯಲ್ಲಿ ನಡೆದಿದೆ. ಮಗುವಿನ ಸಾವಿಗೆ ಪೊಲಿಯೋ ಹನಿಗಳೇ ಕಾರಣ ಎಂದು ಕುಟುಂಬ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದೆ.
ರಮೇಶ್​ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ತಿಂಗಳು 16 ದಿನದ ಮಗುವಿತ್ತು. ಮಗುವಿಗೆ ಭಾನುವಾರ ಬೆಳಗ್ಗೆ ಪೊಲಿಯೋ ಡ್ರಾಪ್ಸ್​ ಹಾಕಿಸಲಾಗಿದೆ. ಡ್ರಾಪ್ಸ್​ ಪಡೆದ ಕೆಲವೇ ನಿಮಿಷಗಳಲ್ಲಿ ಮಗು ಅಸ್ವಸ್ಥವಾಗಿದೆ. ಕೂಡಲೇ ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲವೆನ್ನಲಾಗಿದ್ದು, ಹೆಚ್ಚುವರಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಲಾಗಿದೆ. 11.55ರ ಸಮಯಕ್ಕೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಗು ಕೊನೆಯುಸಿರೆಳೆದಿರುವುದಾಗಿ ತಿಳಿಸಲಾಗಿದೆ. ಪೊಲಿಯೋ ಡ್ರಾಪ್ಸ್​ನಿಂದಲೇ ಮಗು ಸಾವನ್ನಪ್ಪಿರುವುದಾಗಿ ಕುಟುಂಬ ಪೊಲೀಸ್​ ದೂರು ದಾಖಲಿಸಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಗುವಿನ ಸಾವಿಗೆ ಪೊಲಿಯೋ ಡ್ರಾಪ್ಸ್​ ಕಾರಣವಾಗಲು ಸಾಧ್ಯವಿಲ್ಲ ಎಂದು ಜಿಲ್ಲಾ ವೈದ್ಯಕೀಯ ಅಧೀಕ್ಷಕ ಮಲ್ಲಿಕಾರ್ಜುನ್​ ಪ್ರತಿಕ್ರಿಯಿಸಿದ್ದಾರೆ. ಒಂದು ಬಾಕ್ಸ್​ನಲ್ಲಿ 40 ಬಾಟೆಲ್​ಗಳಲ್ಲಿ ಪೊಲಿಯೋ ಡ್ರಾಪ್ಸ್​ ಇರುತ್ತದೆ. ಈ ಮಗು ಪೊಲಿಯೋ ಡ್ರಾಪ್ಸ್​ ಪಡೆದ ನಂತರ 17 ಮಕ್ಕಳಿಗೆ ಅದೇ ಬಾಕ್ಸ್​ನಲ್ಲಿದ್ದ ಡ್ರಾಪ್ಸ್​ ಹಾಕಲಾಗಿದೆ. ಯಾರೊಬ್ಬರಲ್ಲೂ ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ನಂತರ ನಿಜಾಂಶ ತಿಳಿದುಬರಲಿದೆ. (ಏಜೆನ್ಸೀಸ್​)
5 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ 58 ವರ್ಷದ ವ್ಯಕ್ತಿ! ಇದೆಲ್ಲ ದೆವ್ವ ಮಾಡಿಸಿದ್ದು ಎಂದು ಹೇಳಿದ

ಜ್ವಾಲಾಮುಖಿಯ ಭಯದಲ್ಲೇ ಬದುಕುತ್ತಿವೆ ಇಲ್ಲಿನ ಕುಟುಂಬಗಳು! ಅತ್ಯಂತ ಭಯ ತರಿಸುವ ಈ ದ್ವೀಪ ಯಾವುದು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 4 =
Remember me
