ಹೈದರಾಬಾದ್​:ಸಿಗರೇಟ್​ನಿಂದಲೂ ಕರೊನಾ ಬರುತ್ತೆ ಜೋಕೆ! ಸ್ವಲ್ಪ ಯಾಮಾರಿದ್ರೆ ಧೂಮಪಾನಿಗಳಿಗೆ ಮಾತ್ರವಲ್ಲ, ಅವರ ಅಕ್ಕಪಕ್ಕದಲ್ಲಿದ್ದವರಿಗೂ ಕರೊನಾ ಸೋಂಕು ಅಂಟಿಸುತ್ತೆ ಸಿಗರೇಟ್​.
ಹೈದರಾಬಾದ್​ನಲ್ಲಿ ಸಂಭವಿಸಿದ ಈ ಘಟನೆ ಕರೊನಾದಿಂದ ಕಂಗೆಟ್ಟ ಜನರಲ್ಲಿ ಮತ್ತಷ್ಟು ಆತಂಕ ತಂದೊಡ್ಡಿದೆ. ಇಲ್ಲಿನ ಶ್ರೀನಗರ ಕಾಲನಿಯ ನಿವಾಸಿ, ಕಂಪನಿಯೊಂದರ ಮಾರ್ಕೆಟಿಂಗ್ ಮ್ಯಾನೇಜರ್ ಮಾಡಿದ ಒಂದೇ ಒಂದು ತಪ್ಪಿಗೆ 18 ಮಂದಿಗೆ ಸೋಂಕು ತಗುಲಿದೆ.
ಕರೊನಾ ಸೋಂಕಿನಿಂದ ದೂರವಿರಲು ಸಾಮಾಜಿಕ ಅಂತರವೇ ಪ್ರಮುಖ ಅಸ್ತ್ರ ಎಂದು ವೈದ್ಯಲೋಕವೇ ಹೇಳುತ್ತಿದೆ. ಇಂತಹ ಸಂದರ್ಭದಲ್ಲಿ ಹೈದರಾಬಾದ್​ನ ಕಂಪನಿಯೊಂದರ ಮಾರ್ಕೆಟಿಂಗ್ ಮ್ಯಾನೇಜರ್, ಇತ್ತೀಚಿಗೆ ಕಚೇರಿ ಕೆಲಸಕ್ಕೆ ಹೋಗುವ ಮಾರ್ಗಮಧ್ಯೆ ಭಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಸಿಗರೇಟ್​ ಸೇದಲೆಂದು ರಸ್ತೆ ಬದಿ ಕಾರು ನಿಲ್ಲಿಸಿದ್ದು, ಲೈಟರ್​ಗಾಗಿ ತಡಕಾಡಿದ್ದಾನೆ. ಸಿಗದಿದ್ದಾಗ ಅಲ್ಲಿಯೇ ಸಿಗರೇಟ್​ ಸೇದುತ್ತ ನಿಂತಿದ್ದ ವ್ಯಕ್ತಿಯೊಬ್ಬನ ಬಳಿ ಹೋಗಿ ಬೆಂಕಿ ಪೊಟ್ಟಣ ಕೇಳುವ ಬದಲು, ಆತ ಸೇದುತ್ತಿರುವ ಸಿಗರೇಟ್​ನಿಂದಲೇ ತನ್ನ ಸಿಗರೇಟ್​ಗೆ ಬೆಂಕಿ ಹಚ್ಚಿಸಿಕೊಂಡು ಹೊಗೆ ಬಿಟ್ಟಿದ್ದ.
ಇದಾದ ಮೂರು ದಿನಗಳ ನಂತರ ಮ್ಯಾನೇಜರ್​ಗೆ ಜ್ವರ ಮತ್ತು ಶೀತ ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಹದಗೆಟ್ಟಿತು. ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿತು. ಕೂಡಲೇ ಆಸ್ಪತ್ರೆಗೆ ಹೋಗಿ ಸಿಟಿ ಸ್ಕ್ಯಾನ್​ ಮಾಡಿಸಿದ್ದು, ಕರೊನಾ ಪಾಸಿಟಿವ್​ ಬಂದಿದೆ. ಕೂಡಲೇ ಈತ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ 20 ಜನರ ತಂಡ ಕರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಈ ಪೈಕಿ 18 ಮಂದಿಗೆ ಸೋಂಕು ಪತ್ತೆಯಾಗಿದೆ. ಇನ್ನು ಇವರ ಕುಟುಂಬದಲ್ಲಿ ಮತ್ಯಾರಿಗೆ ಕರೊನಾ ಸೋಂಕು ತಗುಲಿದೆಯೋ ಗೊತ್ತಿಲ್ಲ.
ಈ ನಡುವೆ ಮ್ಯಾನೇಜರ್​ ಮತ್ತೊಂದು ಸಿಗರೇಟ್​ ಸೇದುತ್ತಾ ಎಲ್ಲಿಂದ ಸೋಂಕು ತಗುಲಿತು. ನಮ್ಮ ಕಂಪನಿಯ ಸಿಬ್ಬಂದಿಯೆಲ್ಲರೂ ಕರೊನಾ ನಿಯಮ ಪಾಲಿಸುತ್ತಿದ್ದಾರೆ. ನನಗೆ ಹೇಗೆ ಬಂತು ಎಂದು ಯೋಚಿಸುತ್ತಿರುವಾಗ ನೆನಪಾಯ್ತು ರಸ್ತೆಬದಿ ನಿಂತಿದ್ದ ವ್ಯಕ್ತಿಯೊಬ್ಬನ ಸಿಗರೇಟ್​ನಿಂದ ತಾನೂ ಸಿಗರೇಟ್​ ಹಚ್ಚಿಕೊಂಡದ್ದು. ಸೋಂಕಿನ ಮೂಲ ಅರಿತ ಮ್ಯಾನೇಜರ್​, ತನ್ನಿಂದಾದ ಪ್ರಮಾದಕ್ಕೆ ತೀವ್ರ ನೊಂದುಕೊಂಡ.
ಇಂತಹ ಪ್ರಮಾದ ತಿಳಿದೋ ತಿಳಿಯದೆಯೋ ಆಗುತ್ತಲೇ ಇರುತ್ತೆ. ಕರೊನಾ ಸಂಕಷ್ಟಕಾಲದಲ್ಲಿ ಜಾಗ್ರತೆ ಮತ್ತು ಮುನ್ನೆಚ್ಚರಿಕೆ ಇದ್ದಷ್ಟೂ ನೀವು ಸೇಫ್​. ಜತೆಗೆ ನಿಮ್ಮವರೂ ಸೇಫ್​.
ರಾಜ್ಯದಲ್ಲಿ ಕಂಪ್ಲೀಟ್​ ಲಾಕ್​ಡೌನ್​ ಜಾರಿ ಆಗುತ್ತಾ? ಸಚಿವ ಡಾ.ಸುಧಾಕರ್​ ಹೇಳಿದ್ದೇನು?

ತಡರಾತ್ರಿ ಹೊತ್ತಿ ಉರಿದ ಕೋವಿಡ್​ ಆಸ್ಪತ್ರೆ, 16 ಮಂದಿ ಸಜೀವ ದಹನ

ಬಾಲಕಾರ್ವಿುಕರಾಗೋದು ಬೇಡ, ಆದರೆ ಕೆಲಸದ ಮಹತ್ವ ಗೊತ್ತಿರಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
