ಬರ್ಮಿಂಗ್​ಹ್ಯಾಂ​:22ನೇ ಆವೃತ್ತಿಯ ಕಾಮನ್ವೆಲ್ತ್​ ಕ್ರೀಡಾಕೂಟದ ಅಂತಿಮ ದಿನವಾದ ಇಂದು ಕೂಡ ಭಾರತ ಪದಕಗಳ ಬೇಟೆಯಾಡುತ್ತಿದ್ದು, ಬ್ಯಾಡ್ಮಿಂಟನ್​​ ಸಿಂಗಲ್ಸ್​ ಸ್ಪರ್ಧೆಯಲ್ಲಿ ಪಿ.ವಿ.ಸಿಂಧು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಕೆನಡಾದ ಮಿಶೈಲ್​ ವಿರುದ್ಧ ಸೆಣಸಾಡಿದ ಸಿಂಧು, ಮೊದಲ ಸುತ್ತಿನಲ್ಲಿ 21-15, 2ನೇ ಸುತ್ತಿನಲ್ಲಿ 21-13 ಅಂತರದಲ್ಲಿ ಜಯಭೇರಿ ಬಾರಿಸಿದರು.
22ನೇ ಆವೃತ್ತಿಯ ಕಾಮನ್ವೆಲ್ತ್​ ಗೇಮ್ಸ್​ನ ಸಮಾರೋಪ ಸಮಾರಂಭ ಇಂದು(ಸೋಮವಾರ) ರಾತ್ರಿ ಬರ್ಮಿಂಗ್​​ಹ್ಯಾಂನ ಅಲೆಕ್ಸಾಂಡರ್​ ಸ್ಟೇಡಿಯಂನಲ್ಲಿ ನಡೆಯಲಿದೆ.
ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಭಾನುವಾರವೂ ಭರ್ಜರಿ ಬಂಗಾರದ ಪದಕಗಳನ್ನು ಬೇಟೆಯಾಡಿದ್ದರು. ಬಾಕ್ಸಿಂಗ್​ನಲ್ಲಿ 3, ಪ್ಯಾರಾ ಟೇಬಲ್​ ಟೆನಿಸ್​ ಮತ್ತು ಅಥ್ಲೆಟಿಕ್ಸ್​ನಲ್ಲಿ ತಲಾ 1 ಚಿನ್ನದ ಸಂಭ್ರಮ ಕಂಡಿತ್ತು. ಜತೆಗೆ 2 ಬೆಳ್ಳಿ, 5 ಕಂಚು ಒಲಿಸಿಕೊಂಡಿತ್ತು. ಇದುವರೆಗೆ ಒಟ್ಟಾರೆ 51 (18 ಚಿನ್ನ, 13 ಬೆಳ್ಳಿ, 20 ಕಂಚು) ಪದಕ ಗೆದ್ದಿದೆ.
ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡಂಗಿಲ್ಲ: ಜಮೀರ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − four =
Remember me
