ಬೆಂಗಳೂರು:ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ಇಂದು(ಸೋಮವಾರ) ದೇಶಾದ್ಯಂತ ಮತದಾನ ಆರಂಭವಾಗಿದೆ. ಭಾರತ್​ ಜೋಡೋ ಯಾತ್ರೆ ಬಳ್ಳಾರಿಯಲ್ಲಿದ್ದು, ಯಾತ್ರೆಯಲ್ಲಿರುವ ಕಾಂಗ್ರೆಸ್​ ನಾಯಕರಿಗೆ ಬಳ್ಳಾರಿಯಲ್ಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿಯಲ್ಲೇ ಕಾಂಗ್ರೆಸ್​ನ ರಾಷ್ಟ್ರ ನಾಯಕ ರಾಹುಲ್​ ಗಾಂಧಿ ಮತದಾನ ಮಾಡಲಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿಗಳ 9,000ಕ್ಕೂ ಅಧಿಕ ಪ್ರತಿನಿಧಿಗಳಿಗೆ ಮತ ಚಲಾಯಿಸುವ ಹಕ್ಕು ಇದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಭಾರತ್ ಜೋಡೋ ಕಾರಣಕ್ಕೆ ಯಾತ್ರಿಗಳ ಅನುಕೂಲಕ್ಕಾಗಿ ಬಳ್ಳಾರಿ ಗಡಿಯ ಸಂಗನಕಲ್ಲು ಬಳಿ ವಿಶೇಷ ಮತಗಟ್ಟೆ ಸ್ಥಾಪಿಸಿದ್ದು, 40 ಮಂದಿಗೆ ಮಾತ್ರ ಮತದಾನ ಮಾಡಲು ಅವಕಾಶ ಕೊಡಲಾಗಿದೆ. ರಾಜ್ಯದಿಂದ 503 ಮಂದಿ ಮತ ಚಲಾಯಿಸುವ ಅವಕಾಶ ಪಡೆದುಕೊಂಡಿದ್ದು, ಈ ಪೈಕಿ ಡಿ.ಕೆಸುರೇಶ್​ ಸೇರಿದಂತೆ ಮೂವರು ಸಂಗನಕಲ್ಲು ಕ್ಯಾಂಪ್​ನಲ್ಲಿ ಮತಚಲಾಯಿಸುವರು. ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಕೂಡ ಬೆಂಗಳೂರಿನಲ್ಲೇ ಮತ ಚಲಾಯಿಸಲಿದ್ದಾರೆ.
137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್​ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದು ಇದು 6ನೇ ಬಾರಿಯಾಗಿದ್ದು, 24 ವರ್ಷಗಳ ನಂತರ ಗಾಂಧಿಯೇತರ ಕುಟುಂಬದ ನಾಯಕ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ. ಕರ್ನಾಟಕದ ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಬುಧವಾರ(ಅ.19) ಫಲಿತಾಂಶ ಪ್ರಕಟವಾಗಲಿದೆ. ಆದರೆ, ಖರ್ಗೆಗೆ ಹೆಚ್ಚು ಬೆಂಬಳ ವ್ಯಕ್ತವಾಗುತ್ತಿದ್ದು, ಅವರಿಗೇ ಅಧ್ಯಕ್ಷ ಸ್ಥಾನ ಒಲಿಯುತ್ತೆ ಎಂಬ ಲೆಕ್ಕಾಚಾರ ಶುರುವಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನುಭವಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾದರು. ಪ್ರಜಾಸತ್ತಾತ್ಮಕವಾಗಿ ಅಧ್ಯಕ್ಷರ ಆಯ್ಕೆ ನಡೆಯಬೇಕೆಂಬ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆ ನಡೆಸಲಾಗುತ್ತಿದ್ದು, ಗಾಂಧಿಯೇತರ ಕುಟುಂಬ ಸದಸ್ಯರೊಬ್ಬರು ಕಾಂಗ್ರೆಸ್​ ಅಧ್ಯಕ್ಷರಾಗುತ್ತಿದ್ದಾರೆ.
ಮಂಡ್ಯದ ಕೆರೆ ಕಾಮೇಗೌಡ ಇನ್ನಿಲ್ಲ

ವರ್ಕ್​ ಫ್ರಂ ಹೋಮ್​ ಹೆಸರಲ್ಲಿ ಮಹಾ ಮೋಸ! ಫಾರ್ಮ್ ತುಂಬುವ ಕೆಲಸ ಎಂದೇಳಿ ಅಮಾಯಕರಿಗೆ ಗಾಳ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
