ಮುಂಬಯಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣ ದಿನೇದಿನೆ ಹೊಸ ತಿರುವುಗಳನ್ನು ಪಡೆಯುತ್ತ ಸಾಗಿದೆ. ಸುಶಾಂತ್ ಅವರ ಕುಟುಂಬದ ಆಗ್ರಹಕ್ಕೆ ತಕ್ಕಂತೆ ನಿನ್ನೆ ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಬಿಹಾರ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಬೆಳವಣಿಗೆ ಶಿವಸೇನೆಯಲ್ಲಿ ನಡುಕ ಹುಟ್ಟಿಸಿದೆ.
ಸಿಬಿಐ ತನಿಖೆಯ ತೀರ್ಪು ಬಂದ ಕೂಡಲೇ ಶಿವಸೇನೆ ಪ್ರತಿಕ್ರಿಯಿಸಿದ್ದು ಹೀಗೆ- ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವಿಡೀ ಒಂದು ಪಿತೂರಿಯಾಗಿದ್ದು, ಆದಿತ್ಯಾ ಠಾಕ್ರೆಯವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಕೇಸ್ ಮುಂದಿಟ್ಟುಕೊಂಡು ಶಿವಸೇನೆಯನ್ನು ಬಗ್ಗು ಬಡಿಯುವ ಪ್ರಯತ್ನ ಶುರುವಾಗಿದೆ. ಸಿಬಿಐ ತನಿಖೆಗೆ ಪಕ್ಷವಾಗಲೀ ಆದಿತ್ಯಠಾಕ್ರೆಯಾಗಲೀ ಹೆದರಿಕೊಂಡು ಕೂರುವುದಿಲ್ಲ.
ಇದನ್ನೂ ಓದಿ:ಸುಶಾಂತ್​ ಪ್ರಕರಣ ಸಿಬಿಐಗೆ; ಸುಪ್ರೀಂ ತೀರ್ಪು ಸ್ವಾಗತಿಸಿದ ಬಾಲಿವುಡ್​
ಮಹಾರಾಷ್ಟ್ರ ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜಕೀಯ ಉದ್ದೇಶಕ್ಕಾಗಿ ಆದಿತ್ಯ ಠಾಕ್ರೆಯವರ ಹೆಸರನ್ನು ಪ್ರಕರಣಕ್ಕೆ ಎಳೆದು ತರಲಾಗಿದೆ. ಇಡೀ ಸಾವಿನ ಪ್ರಕರಣವೇ ರಾಜಕೀಯದ್ದಾಗಿದ್ದು, ಸತ್ಯ ಶೀಘ್ರವೇ ಬಹಿರಂಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಸುಶಾಂತ್​ಗೆ ಡಿಪ್ರೆಶನ್​ ಇತ್ತು ಅಂತ ಜನ ಯಾಕೆ ನಂಬ್ತಿಲ್ಲ? ಸ್ವರ ಪ್ರಶ್ನೆ …

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
