ನವದೆಹಲಿ:ಬಿಹಾರ ರಾಜಕೀಯವೀಗ ಕುತೂಹಲಕರ ತಿರುವು ಪಡೆದುಕೊಳ್ಳುತ್ತಿದೆ. ಮಾಜಿ ಕೇಂದ್ರ ಸಚಿವ, ಲೋಕಜನಶಕ್ತಿ ಪಕ್ಷದ ಸ್ಥಾಪಕ ದಿವಂಗತ ರಾಮ್​ ವಿಲಾಸ್​ ಪಾಸ್ವಾನ್​ ಪುತ್ರ, ಜಮುಯ್​ ಕ್ಷೇತ್ರದ ಸಂಸದ ಚಿರಾಗ್​ ಪಾಸ್ವಾನ್​ ತಮ್ಮದೇ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಬಿಹಾರ ರಾಜಕಾರಣದ ಪಂಟರ್​ ನಿತೀಶ್​ರನ್ನೇ ಎದುರು ಹಾಕಿಕೊಂಡ ಚಿರಾಗ್​, ಈಗ ನಿತೀಶರು ತೋಡಿದ ಖೆಡ್ಡಾದಲ್ಲಿ ಸಿಲುಕಿದ್ದಾರೆ. ಎಲ್​ಜೆಪಿಯ 6 ಸಂಸದರಲ್ಲಿ ಐವರು ಚಿರಾಗ್​ ವಿರುದ್ಧ ಬಂಡೆದಿದ್ದಾರೆ. ಇದ್ದ ಒಬ್ಬ ಶಾಸಕ ಕೂಡ ಜೆಡಿಯು ಪಾಲಾಗಿದ್ದಾರೆ.
| ರಾಘವ ಶರ್ಮ ನಿಡ್ಲೆ2020ರ ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಸೂಕ್ತ ಸಮಯಕ್ಕೆ ಕಾದಿದ್ದ ನಿತೀಶ್​, ಚಿರಾಗ್​ಗೆ ಮರೆಯಲಾಗದ ಬಿಸಿಯೇಟನ್ನೇ ಕೊಟ್ಟಿದ್ದಾರೆ. ಎಲ್​ಜೆಪಿ ಸಂಸದೀಯ ನಾಯಕ ಸ್ಥಾನ, ಪಕ್ಷದ ಅಧ್ಯಕ್ಷ ಸ್ಥಾನ ಎರಡೂ ಇಲ್ಲದ ಚಿರಾಗ್​ ಒಂದರ್ಥದಲ್ಲಿ ಈಗ ಅನಾಥ. ರಾಮ್​ ವಿಲಾಸ್​ ಪಾಸ್ವಾನ್​ ಸೋದರ, ಹಾಜಿಪುರ ಸಂಸದ ಪಶುಪತಿನಾಥ ಪರಸ್​, ಮತ್ತೋರ್ವ ಸೋದರ ರಾಮಚಂದ್ರ ಪಾಸ್ವಾನ್​ ಪುತ್ರ, ಸಮಸ್ತಿಪುರ ಸಂಸದ ಪ್ರಿನ್ಸ್​ ರಾಜ್​ ಇಬ್ಬರೂ ಚಿರಾಗ್​ ರಕ್ತಸಂಬಂಧಿಗಳು. ಆದರೆ, ಪಶುಪತಿನಾಥ ಪರಸ್​ಗೆ ನಿತೀಶ್​ ಕುಮಾರ್​ ಈಗ ವಿಕಾಸ ಪುರುಷರಾಗಿ ಕಾಣುತ್ತಿದ್ದಾರೆ. ಪರಸ್​ ಅಥವಾ ಅವರ ಪುತ್ರನಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಖಚಿತ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಶಾಸಕ ಬಲವಿಲ್ಲದಿದ್ದರೂ, ಎನ್​ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡು ರಾಜ್ಯದಲ್ಲೂ ಸರ್ಕಾರದ ಪಾಲುದಾರರಾದಲ್ಲಿ ಸಹಜವಾಗಿಯೇ ಅವರೆಲ್ಲರ ಬಲ ದ್ವಿಗುಣಗೊಳ್ಳಲಿದೆ.ಅಷ್ಟಕ್ಕೂ ಎಲ್​ಜೆಪಿ 2020ರಲ್ಲಿ ಎನ್​ಡಿಎ ಮೈತ್ರಿಕೂಟ ತೊರೆದು, ಏಕಾಂಗಿಯಾಗಿ ಸ್ಪರ್ಧಿಸಿದ್ದೇ ನಿತೀಶ್​ರನ್ನು ಹಣಿಯಬೇಕು ಎಂಬ ಉದ್ದೇಶಕ್ಕಾಗಿ. ಇದು ಚಿರಾಗ್​ ಏಕಾಂಗಿ ನಿರ್ಧಾರ. ಇದಕ್ಕೆ ಪಕ್ಷದ ಹಿರಿಯ ನಾಯಕರ ವಿರೋಧವಿತ್ತು. ಆದರೆ, ಆಗ “ನಾನು ಪ್ರಧಾನಿ ಮೋದಿಯವರ ಹನುಮಾನ್​’ ಎಂದು ಹಾರಾಡಿದ್ದ ಚಿರಾಗ್​ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. 2020ರಲ್ಲಿ ಎನ್​ಡಿಎ ಅಧಿಕಾರಕ್ಕೆ ಬಂದರೂ, ಜೆಡಿಯು ಮಾತ್ರ 43 ಕ್ಷೇತ್ರಗಳಿಗಷ್ಟೇ ಸೀಮಿತಗೊಂಡಿತು. 74 ಕ್ಷೇತ್ರಗಳನ್ನು ಬಾಚಿಕೊಂಡ ಬಿಜೆಪಿ ನಾಯಕರು, ನಿತೀಶ್​ ಸ್ಥಿತಿ ಕಂಡು ಒಳಗಿಂದೊಳಗೇ ನಕ್ಕಿದ್ದರು. ವಾಸ್ತವದಲ್ಲಿ ನಿತೀಶ್​ 43 ಸೀಟುಗಳಿಗೆ ಕುಸಿದಿದ್ದು ಎಲ್​ಜೆಪಿ ಕಾರಣದಿಂದಲೇ. ಎಲ್​ಜೆಪಿ ಸ್ಪರ್ಧೆ ಮಾಡಿದ್ದು ಒಟ್ಟು 144 ಕ್ಷೇತ್ರಗಳಲ್ಲಿ. ಜೆಡಿಯು ಸ್ಪರ್ಧಿಸಿದ್ದ 115 ಕ್ಷೇತ್ರಗಳ ಪೈಕಿ 113ರಲ್ಲಿ ಎಲ್​ಜೆಪಿ ಅಭ್ಯರ್ಥಿಗಳನ್ನು ಹಾಕಿತ್ತು. ಇದರಿಂದಾಗಿ ಎನ್​ಡಿಎ ಮತಗಳು ವಿಭಜನೆಗೊಂಡು ಆರ್​ಜೆಡಿಗೆ ಲಾಭವಾಗಿತ್ತು. ಒಟ್ಟು 35 ಕ್ಷೇತ್ರಗಳಲ್ಲಿ ಜೆಡಿಯು ಮತ್ತು ಎಲ್​ಜೆಪಿ ಪಡೆದ ಒಟ್ಟು ಮತಗಳು ಆರ್​ಜೆಡಿಯ ಗೆದ್ದ ಅಭ್ಯರ್ಥಿಗಳಿಗಿಂತ ಹೆಚ್ಚಿವೆ. ಅಂದರೆ, ಎಲ್​ಜೆಪಿ ಸ್ಪರ್ಧೆಯಿಂದಾಗಿ ಈ 35 ಹೆಚ್ಚುವರಿ ಸೀಟುಗಳು ಆರ್​ಜೆಡಿ ಪಾಲಾದವು. ಉದಾಹರಣೆಗೆ & ದರ್ಭಂಗಾ ಗ್ರಾಮೀಣ ಕ್ಷೇತ್ರದಲ್ಲಿ ಆರ್​ಜೆಡಿಯ ಲಲಿತ್​ ಕುಮಾರ್​ ಜೆಡಿಯು ಅಭ್ಯರ್ಥಿ ವಿರುದ್ಧ ಕೇವಲ 2141 ಮತಗಳ ಅಂತರದಲ್ಲಿ ಗೆದ್ದಿದ್ದರು. ಇಲ್ಲಿ ಎಲ್​ಜೆಪಿಗೆ ಸಿಕ್ಕ ಮತಗಳು 17,605. ಮಹಾರಾಜ್​ ಗಂಜ್​ ಕ್ಷೇತ್ರದಲ್ಲಿ ಆರ್​.ಜೆ.ಡಿ. ಗೆಲುವಿನ ಅಂತರ 1976 ಮತಗಳು. ಎಲ್​ಜೆಪಿಗೆ ಸಿಕ್ಕಿದ್ದು 18,278 ಮತಗಳು.ಎಲ್​ಜೆಪಿ&ನಿತೀಶ್​ ನಡುವಿನ ದ್ವೇಷ ಹೊಸದೇನಲ್ಲ. ರಾಮ್​ ವಿಲಾಸ್​ ಪಾಸ್ವಾನ್​ ಒಡಲೊಳಗೆ ಕೂಡ ನಿತೀಶ್​ ವಿರುದ್ಧ ಆಕ್ರೋಶ ಕುದಿಯುತ್ತಿತ್ತು. 2005ರಿಂದ 2020ರ ತನಕದ ಅಧಿಕಾರಾವಧಿಯಲ್ಲಿ ಪಾಸ್ವಾನ್​ ಸಮುದಾಯವನ್ನು ರ್ನಿಲಕ್ಷಿಸಿದ ಗುರುತರ ಆರೋಪ ನಿತೀಶ್​ ಮೇಲಿದೆ. ಅಲ್ಲದೆ 2005ರಲ್ಲಿ ಎಲ್​ಜೆಪಿ 29 ಸೀಟುಗಳನ್ನು ಗೆದ್ದಿತ್ತಾದರೂ, ನಿತೀಶ್​ ಆಮಿಷದಿಂದಾಗಿ 22 ಶಾಸಕರು ಜೆಡಿಯು ಸೇರ್ಪಡೆಯಾಗಿದ್ದರು. ನಂತರ ಅತಂತ್ರ ವಿಧಾನಸಭೆ ನಿಮಾರ್ಣವಾಗಿ ಅದೇ ವರ್ಷದ ನವೆಂಬರ್​ ತಿಂಗಳ ಮರುಚುನಾವಣೆಯಲ್ಲಿ ಬಿಜೆಪಿ&-ಜೆಡಿಯು ಮೈತ್ರಿಕೂಟ 139 ಸೀಟು ಗೆದ್ದು ಸರ್ಕಾರ ರಚನೆ ಮಾಡಿತ್ತು. ಪಾಸ್ವಾನ್​ಗೆ ಮರುಚುನಾವಣೆಯಲ್ಲಿ 10ಕ್ಕಿಂತ ಹೆಚ್ಚು ಸೀಟುಗಳೂ ಬರಲಿಲ್ಲ. ರಾಜ್ಯದ ಮಹಾದಲಿತ ಮತವರ್ಗದ ಜನಪ್ರಿಯತೆ ಗಳಿಸಲು ಮುಂದಾಗಿದ್ದ ನಿತಿಶ್​, ಪಾಸ್ವಾನ್​ ಸಮುದಾಯವನ್ನೂ ಮಹಾದಲಿತ ಕೆಟಗರಿಗೆ ಸೇರಿಸಿ ಎಂಬ ಬೇಡಿಕೆ ಒಪ್ಪಲಿಲ್ಲ. ಮಹಾದಲಿತರ ಪರ ಯೋಜನೆಗಳಿಗೆ ಅಗತ್ಯ ಹಣಕಾಸು ನೆರವು ಸಿಕ್ಕಿತು. ಪಾಸ್ವಾನ್​ ಹೊರತುಪಡಿಸಿ ಉಳಿದೆಲ್ಲಾ ದಲಿತ ಸಮುದಾಯಗಳು ನಿತೀಶ್​ರನ್ನು ಮೆಚ್ಚಿದವು. ನಿತೀಶ್​ ತಂತ್ರಗಾರಿಕೆ ಯಿಂದಾಗಿ ರಾಮ್​ ವಿಲಾಸ್​ಗೆ ತನ್ನ ಸಮುದಾಯದಾಚೆಗೆ ವರ್ಚಸ್ಸು ಬೆಳೆಸಿಕೊಳ್ಳಲೂ ಸಾಧ್ಯ ವಾಗಲಿಲ್ಲ. 2020ರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್​ಗೆ ಡ್ಯಾಮೇಜ್​ ಮಾಡಿದ ಖುಷಿ ಚಿರಾಗ್​ರಲ್ಲಿ ಕಂಡಿತ್ತು. ನಿತೀಶ್​ ಕುಮಾರ್​ ಈಗ ಅಪ್ಪ ಕಟ್ಟಿದ ಪಕ್ಷದಲ್ಲೇ ಮಗನಿಗೆ ಸ್ಥಾನವಿಲ್ಲದಂತೆ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಸಿಗುವುದರಿಂದ ಎಲ್​ಜೆಪಿ ಸಂಸದರಿನ್ನು ನಿತೀಶ್​ ತಾಳಕ್ಕೆ ಹೆಜ್ಜೆ ಹಾಕಲಿದ್ದಾರೆ. ಚಿರಾಗ್​ ಈಗ ಪಕ್ಷದ ಚಿಹ್ನೆಗಾಗಿ ಹೋರಾಡಬೇಕಿದೆ. ಅದನ್ನೂ ಕಳೆದುಕೊಂಡರೆ ಭವಿಷ್ಯದ ಹಾದಿ ಮತ್ತಷ್ಟು ಕಠಿಣವೆನಿಸಲಿದೆ.
ಇಬ್ಭಾಗಕ್ಕೆ ಜೆಡಿಯು ಕಾರಣನವದೆಹಲಿ: ಪಕ್ಷ ಇಬ್ಭಾಗ ಆಗುವುದಕ್ಕೆ ಜೆಡಿಯು ನಡೆಸಿದ ಪಿತೂರಿಯೇ ಕಾರಣ ಎಂದು ಲೋಕ ಜನಶಕ್ತಿ ಪಕ್ಷದ (ಎಲ್​ಜೆಪಿ) ಯುವ ನಾಯಕ ಚಿರಾಗ್​ ಪಾಸ್ವಾನ್​ ದೂರಿದ್ದಾರೆ. ತಾವು ಟೈಾಯ್ಡ್​ನಿಂದ ಬಳಲುತ್ತಿದ್ದ ವೇಳೆ ಜೆಡಿಯು ಮುಖಂಡರು ಸಂಚು ನಡೆಸಿ ತಮ್ಮ ಸೋದರ ಸಂಬಂಧಿಯನ್ನು ಎತ್ತಿಕಟ್ಟಿದ್ದಾರೆ. ಇದರಿಂದಲೇ ಪಕ್ಷ ಹೈಜಾಕ್​ ಆಯಿತು ಎಂದು ಕಿಡಿಕಾರಿದ್ದಾರೆ. ಚಿರಾಗ್​ರ ಸಂಬಂಧಿಯಾದ ಪಶುಪತಿನಾಥ ಕುಮಾರ್​ ಪರಸ್​ರನ್ನು ಲೋಕಸಭೆಯಲ್ಲಿ ಎಲ್​ಜೆಪಿ ನಾಯಕನ್ನಾಗಿ ಆಯ್ಕೆ ಮಾಡಿದ ನಂತರ ಚಿರಾಗ್​ರನ್ನು ಪಕ್ಷದಿಂದ ಹೊರಹಾಕಲಾಗಿದೆ.
ಪೈಲಟ್​ ಬೆಂಬಲಿಗರಿಗೆ 3 ಸಚಿವ ಸ್ಥಾನ?ಜೈಪುರ: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಬೆಂಬಲಿಗರಿಗೆ 3 ಸಚಿವ ಸ್ಥಾನ ಮತ್ತು ಕೆಲವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ಹಾಗೂ ನಿಗಮ& ಮಂಡಳಿಗಳಿಗೆ ನೇಮಕ ಮಾಡುವ ಪ್ರಸ್ತಾವವನ್ನು ಸಿಎಂ ಅಶೋಕ್​ ಗೆಹ್ಲೋಟ್​ ಬಣ ಮುಂದಿಟ್ಟಿದೆ ಎನ್ನಲಾಗಿದೆ. ಸಚಿನ್​ ಪೈಲಟ್​ ಕಳೆದ ವಾರ ದೆಹಲಿಗೆ ಹೋಗಿ ಬಂದ ಮೇಲೆ ಈ ಬೆಳವಣಿಗೆ ನಡೆದಿದೆ.
ಬಿಜೆಪಿಯ 30 ಶಾಸಕರ ಮೇಲೆ ರಾಯ್​ ಕಣ್ಣುಕೋಲ್ಕತ: ಬಿಜೆಪಿ ಬಿಟ್ಟು ಮತ್ತೆ ಟಿಎಂಸಿ ಸೇರಿರುವ ಮುಕುಲ್​ ರಾಯ್​, ತಮ್ಮ ವಿಶ್ವಾಸದಲ್ಲಿರುವ ಮತ್ತು ಬಿಜೆಪಿಯಿಂದ ಶಾಸಕರಾಗಿರುವ 25ರಿಂದ 30 ಮಂದಿಯನ್ನು ಮತ್ತೆ ಟಿಎಂಸಿಗೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಈ ಶಾಸಕರ ಜತೆ ದೂರವಾಣಿ ಮೂಲಕ ಸಂಪರ್ಕದಲ್ಲಿರುವುದಾಗಿ ರಾಯ್​ ಮತ್ತು ಅವರ ಮಗ ಸುಭ್ರಾಂಗ್ಶು ರಾಯ್​ ಹೇಳಿದ್ದಾರೆ. ಬಿಜೆಪಿಯ ಇಬ್ಬರು ಸಂಸದರು ಕೂಡ ತಮ್ಮ ಸಂಪರ್ಕದಲ್ಲಿದ್ದು, ಟಿಎಂಸಿಗೆ ಬರಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. “ಇವರೆಲ್ಲ ಮೂಲತ@ ಟಿಎಂಸಿಯ ನಾಯಕರೇ. ಕೆಲ ತಿಂಗಳ ಹಿಂದೆ ಅವರು ಬಿಜೆಪಿ ಸೇರಿದ್ದರು. ಈಗ ರ್​ವಾಪ್ಸಿಗೆ ಸಿದ್ಧರಾಗಿದ್ದಾರೆ’ ಎಂದು ಸುಭ್ರಾಂಗ್ಶು ಹೇಳಿದ್ದಾರೆ.
* ಪಶ್ಚಿಮ ಬಂಗಾಳದ ಚುನಾವಣೆ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣದ ಸಂಬಂಧ ಬಾಲಿವುಡ್​ ಹಿರಿಯ ನಟ ಮಿಥುನ್​ ಚಕ್ರವರ್ತಿಯನ್ನು ಕೋಲ್ಕತ ಪೊಲೀಸರು ಬುಧವಾರ ವರ್ಚುವಲ್​ ಮೂಲಕ ವಿಚಾರಣೆಗೆ ಗುರಿಪಡಿಸಿದ್ದರು.
* ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ ಮತ್ತು ಮುಖಂಡ ನವಜೋತ್​ ಸಿಂಗ್​ ಸಿಧು ಅವರಿಗೆ ಜೂನ್​ 20ಕ್ಕೆ ದೆಹಲಿಗೆ ಬರುವಂತೆ ಪಕ್ಷದ ಅಧ್ಯೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 11 =
Remember me
