ತಿರುವನಂತಪುರಂ:ಮಹಾಮಾರಿ ಕರೊನಾಗೆ ಇಡೀ ಜಗತ್ತು ತಲ್ಲಣಿಸಿದೆ. ದೇಶದಲ್ಲಿ ನಿತ್ಯ ಸಾವಿರಾರು ಮಂದಿ ಕೋವಿಡ್​ಗೆ ಬಲಿಯಾಗುತ್ತಿದ್ದಾರೆ. ಸಾವಿನ ಸರಣಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಕೋಟ್ಯಂತರ ಜನರ ಬದುಕು ಮೂರಾಬಟ್ಟೆಯಾಗಿದೆ. ಕರೊನಾ ವಾರಿಯರ್ಸ್​ಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೋಂಕು ಮಣಿಸುವ ಹೋರಾಟದಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಆದರೂ ಬಹುತೇಕ ಜನರು ಮಾಸ್ಕ್​ ಧರಿಸಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.
ಇಂತಹ ಜನರಿಗೆ ಅರಿವು ಮೂಡಿಸಲೆಂದೇ ಕೇರಳ ಪೊಲೀಸರು ಡಾನ್ಸ್​ ಮಾಡಿದ್ದಾರೆ. ಒಂದೂವರೆ ನಿಮಿಷ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣಿದಲ್ಲಿ ಸಖತ್​ ವೈರಲ್​ ಆಗಿದೆ.
ಈ ಹಾಡಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ ತೊಳೆಯುತ್ತೀರಿ, ಮಾಸ್ಕ್ ಧರಿಸಿ, ಮಾಸ್ಕ್​ ಹಾಕದೆ ಹೊರಬರಬೇಡಿ, ಸ್ಯಾನಿಟೈಸರ್​ ಬಳಸಿ, ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ…. ಕರೊನಾ ರೂಲ್ಸ್​ ಬ್ರೇಕ್​ ಮಾಡದೆ ಮಹಾಮಾರಿ ಕೋವಿಡ್​ ಮಣಿಸಲು ಸಹಕರಿಸಿ ಎಂಬ ಸಂದೇಶ ಇದ್ದು, ಕೇರಳ ಸ್ಟೇಟ್​ ಪೊಲೀಸರು ಡಾನ್ಸ್​ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಈ ಡಾನ್ಸ್​ ವಿಡಿಯೋವನ್ನು ಕೇರಳದ ರಾಜ್ಯ ಪೊಲೀಸ್ ಮಾಧ್ಯಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಎಲ್ಲರೂ ಕರೊನಾ ವಿರುದ್ಧ ಹೋರಾಟ ಮಾಡೋಣ. ನಿಮ್ಮೊಂದಿಗೆ ಕೇರಳ ಪೊಲೀಸ್ ಇದೆ ಎಂದು ಬರೆದುಕೊಂಡಿದೆ. ಈ ವಿಡಿಯೋ ಸಖತ್​ ವೈರಲ್​ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಪೊಲೀಸರ ವಿನೂತನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.


ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ
18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ನಾಳೆಯಿಂದ ಆಸ್ಪತ್ರೆಗೆ ಬರಬೇಡಿ: ಸಚಿವ ಡಾ.ಸುಧಾಕರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + fourteen =
Remember me
