ಲಖನೌ:ಮನೆ ಬಿಟ್ಟು ಬಂದ ಪ್ರೇಮಿಗಳಿಗೆ ಮಹಿಳಾ ಪೊಲೀಸರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ.
ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳ ಮದುವೆಗೆ ಹುಡುಗಿ ಮನೆ ಕಡೆಯವರು ಒಪ್ಪಿರಲಿಲ್ಲ. ಹೀಗಾಗಿ ಪ್ರೇಮಿಗಳು ಪೊಲೀಸರ ಮೊರೆ ಹೋಗಿದ್ದರು. ಲಖನೌ ಮಹಿಳಾ ಪೊಲೀಸ್​ ಠಾಣೆ ಪೊಲೀಸರು ಈ ಪ್ರೇಮಿಗಳ ಮುಹೂರ್ತಕ್ಕೆ ಪೌರೋಹಿತ್ಯ ವಹಿಸಿದ್ದರು.
ಮನೀಷಾ​ ಮತ್ತು ಕಿರಣ್​ ಎನ್ನುವ ಪ್ರೇಮಿಗಳೇ ದಾಂಪತ್ಯಕ್ಕೆ ಕಾಲಿಟ್ಟವರು. ಮದುವೆಯಾಗಲು ಮನೆಯವರು ಒಪ್ಪದ ಕಾರಣಕ್ಕೆ ​ಮನೀಷಾ ತನ್ನ ಮನೆ ಬಿಟ್ಟು ಬಂದು ಕಿರಣ್​ ಮನೆಯಲ್ಲಿದ್ದಳು.
ಹುಡುಗಿ ಮನೆಯ ಕಡೆಯವರಿಂದ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಪ್ರೇಮಿಗಳು ಪೊಲೀಸ್​ ಆಯುಕ್ತರ ಮನೆಗೆ ತೆರಳಿ ತಮ್ಮ ದುಃಖ ಹೇಳಿಕೊಂಡಿದ್ದರು. ಆಯುಕ್ತರ ಸೂಚನೆ ಮೇರೆಗೆ ಮಹಿಳಾ ಪೊಲೀಸ್​ ಅಧಿಕಾರಿ ಶಾರದಾ ಚೌಧರಿ ಮುಂದೆ ನಿಂತು ಪ್ರೇಮಿಗಳಿಗೆ ಮದುವೆ ಮಾಡಿಸಿ ಆಶೀರ್ವದಿಸಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − ten =
Remember me
