ಮಧ್ಯಪ್ರದೇಶ:ಅವರಿಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಯುವತಿ ಕುಟುಂಬಸ್ಥರಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಕುಪಿತಗೊಂಡ ಯುವತಿ ಪಾಲಕರು, ಪ್ರಿಯಕರ ಮತ್ತು ಆತನ ಗೆಳೆಯನನ್ನು ಮನೆಗೆ ಕರೆಸಿಕೊಂಡು ಚಪ್ಪಲಿ ಹಾರ ಹಾಕಿ, ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಬೂಟುಗಾಲನ್ನು ನೆಕ್ಕಿಸಿದ್ದಾರೆ. ತಲೆ ಬೋಳಿಸಿ ಊರು ತುಂಬಾ ಮೆರವಣಿಗೆ ಮಾಡಿದ್ದಾರೆ. ಇಡೀ ಕೃತ್ಯದ ದೃಶ್ಯ ವೈರಲ್​ ಆಗಿದ್ದು, ಅಮಾನವೀಯ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಮೇ 22 ರಂದು ಮಧ್ಯಪ್ರದೇಶ್ ಜಬಲ್ಪುರ ಜಿಲ್ಲೆಯ ಚಾರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ದಮನ್ ಖಮರಿಯಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೇ 30ರಂದು ಅಮಾನವೀಯ ಕೃತ್ಯದ ವಿಡಿಯೋ ವೈರಲ್​ ಆಗಿದೆ. ಪ್ರೇಯಸಿ ಕುಟುಂಬಸ್ಥರಿಂದ ಹಲ್ಲೆಗೊಳಗಾಗಿದ್ದು ದಲಿತ ಯುವಕ ರಾಜ್‌ಕುಮಾರ್ ಮೆಹ್ರಾ(20).ಇದನ್ನೂ ಓದಿರಿಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!
ಈತ ಇದೇ ಗ್ರಾದಮ ಮೇಲ್ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಯುವತಿ ಪಾಲಕರಿಗೆ ಗೊತ್ತಾಗಿದ್ದು, ಪ್ರೀತಿ ಮಾಡದಂತೆ ತಾಕೀತು ಮಾಡಿದ್ದರು. ಪ್ರೇಮಿಗಳಿಬ್ಬರ ಭೇಟಿಗೂ ಯುವತಿ ಕುಟುಂಬಸ್ಥರು ಅಡ್ಡಿಯಾಗಿದ್ದರು. ಮೊಬೈಲ್​ ಕೊಡಿಸುವಂತೆ ಪ್ರಿಯಕರನ ಬಳಿ ಯುವತಿ ಕೇಳಿದ್ದು, ಆತ ತನ್ನ ಸ್ನೇಹಿತನ ಮೂಲಕ ಮೊಬೈಲ್​ ಅನ್ನು ಉಡುಗೊರೆ ಕೊಟ್ಟಿದ್ದ. ಪರಸ್ಪರ ದೂರವಿದ್ದರೂ ಮೊಬೈಲ್​ನಲ್ಲಿ ಪ್ರೇಮಿಗಳ ಮಾತುಕತೆ ಮುಂದುವರಿದಿತ್ತು. ಇದನ್ನ ನೋಡಿದ ಯುವತಿ ತಂದೆ ಸಿಟ್ಟಿಗೆದ್ದು, ಮಗಳ ಪ್ರಿಯಕರ ಮತ್ತು ಆತನ ಸ್ನೇಹಿತ ಇಬ್ಬರನ್ನೂ ಮನೆಗೆ ಕರೆಸಿಕೊಂಡು ದಲಿತ ಯುವಕ ತನ್ನ ಮಗಳನ್ನು ಪ್ರೀತಿ ಮಾಡುವಷ್ಟು ಧೈರ್ಯ ಮಾಡಿದ್ದೇ ತಪ್ಪು ಎಂದು ಚಪ್ಪಲಿ ಹಾರ ಹಾಕಿ, ತಲೆ ಬೋಳಿಸಿ ವಿಕೃತಿ ಮೆರೆದಿದ್ದಾರೆ.
Madhya Pradesh:#Dalityouths were tonsured, forced to lick sputum for gifting a mobile phone to an#uppercastegirl in Jabalpur.#Policehave detained four accused.pic.twitter.com/gWI5BpWTSL
— Free Press Journal (@fpjindia)May 31, 2021

ಈ ಬಗ್ಗೆ ಎಲ್ಲಿಯಾದರೂ ಬಾಯಿಬಿಟ್ಟರೆ ನಿಮ್ಮ ಕುಟುಂಬವನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಹಾಗಾಗಿ ಹಲ್ಲೆಗೊಳಗಾದ ಯುವಕರು ಪೊಲೀಸ್​ ಠಾಣೆಗೆ ಹೋಗಿರಲಿಲ್ಲ. ಘಟನೆ ನಡೆದ ಒಂದು ವಾರದ ಬಳಿಕ ಯುವತಿ ಕುಟುಂಬಸ್ಥರ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಸಂತ್ರಸ್ತ ಯುವಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಮಹಾವಂಚಕಿಗೆ ಸಾಥ್ ಕೊಟ್ಟ ಸ್ಯಾಂಡಲ್​ವುಡ್​ ನಟ? ಸಾವಿರಾರು ಕೋಟಿ ರೂ. ರಹಸ್ಯ ಬಯಲು

ಕರೊನಾಗೆ ಒಂದೇ ದಿನ ತಾಯಿ-ಮಗ ಬಲಿ! ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಸಂಸ್ಕಾರ

ಕ್ಲೋಸ್ ಡೋರ್​ ಮೀಟಿಂಗ್​ನಲ್ಲಿ ರೋಹಿಣಿ ಸಿಂಧೂರಿಗೆ ಹಿಗ್ಗಾಮುಗ್ಗಾ ತರಾಟೆ! ಮೌನವಾಗಿಯೇ ಹೊರಟ ಡಿಸಿ

ಹಿಂದು ಯುವತಿಯನ್ನ ಮದ್ವೆಯಾದ 7 ಮಕ್ಕಳ ತಂದೆ! ಖಾಸಗಿ ದೃಶ್ಯ ಸೆರೆಹಿಡಿದು ಇಸ್ಲಾಂಗೆ ಮತಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
