ವಿಶಾಖಪಟ್ಟಣ:ಆಂಧ್ರ ಪ್ರದೇಶದ ವಿಶಾಖ ಸಾಗರ ನಗರ ಬೀಚ್​ನಲ್ಲಿ ಅಪಾಯಕಾರಿ ಹಾವೊಂದು ಪತ್ತೆಯಾಗಿದೆ. ಸುಮಾರು 5 ಅಡಿ ಉದ್ದವಿರುವ ಹಾವು ಸ್ಥಳೀಯ ಮೀನುಗಾರರ ಬಲೆಗೆ ಬಿದ್ದಿದೆ.
ಮೊದ ಮೊದಲು ಹಾವನ್ನು ಮೀನು ಅಂದುಕೊಂಡಿದ್ದ ಮೀನುಗಾರರು ಅದನ್ನು ಹತ್ತಿರದಿಂದ ನೋಡಿದ ಬಳಿಕ ನಿಬ್ಬೆರಗಾಗಿದ್ದಾರೆ. ಬಳಿಕ ಆ ಮೀನನ್ನು ಮರಳಿ ಸಮುದ್ರಕ್ಕೆ ಬಿಡಲಾಯಿತು. ಹಾವಿನ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದು, ಅದೊಂದು ಅಪಾಯಕಾರಿ ಹಾವು ಎಂದಿದ್ದಾರೆ. ಅದರ ವೈಜ್ಞಾನಿಕ ಹೆಸರು ‘ಹೈಡ್ರೋಫಿಸ್ ಗ್ರಾಸಿಲಿಸ್’ ಎಂದು ತಿಳಿಸಿದರು.
ಈ ಮೀನು ಹೆಚ್ಚಾಗಿ ಆಳ ಸಮುದ್ರದಲ್ಲಿ ಸುತ್ತಾಡುತ್ತವೆ. ಇದನ್ನು ಸ್ಥಳೀಯವಾಗಿ ಸಮುದ್ರ ಹಾವೆಂದು ಮೀನುಗಾರರು ಕರೆಯುತ್ತಾರೆ. ಸಣ್ಣ ಸಣ್ಣ ಮೀನುಗಳನ್ನು ತಿಂದು ಬದುಕುಳಿಯುತ್ತವೆ. ಆಹಾರವನ್ನು ಹುಡುಕಾಡುವ ಸಂದರ್ಭದಲ್ಲಿ ಈ ಹಾವು ಮೀನುಗಾರರ ಬಲೆಗೆ ಸಿಲುಕಿದೆ ಎನ್ನಲಾಗಿದೆ.
ಇನ್ನು ಈ ಹಾವು ಸಮುದ್ರದಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತದೆ. ಅಂದರೆ, ಕಣ್ಣು ಮಿಟುಕಿಸುವುದರಲ್ಲಿ ನಮ್ಮಿಂದ ಮಾಯವಾಗಿಬಿಡುತ್ತವೆಯಂತೆ. ಈ ಹಾವೇನಾದರೂ ಕಡಿದರೆ, ತಕ್ಷಣ ವೈದ್ಯರ ನೆರವು ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಬಹು ಬೇಗ ಸಾವು ಸಂಭವಿಸುತ್ತದೆ. ಈ ಹಾವು ಮುಂಜಾನೆ ಮೀನಿನ ಬಲೆಗೆ ಬಿದ್ದಿದೆ. ರಾತ್ರಿಯಾಗಿದ್ದರೆ ಕಾಣುತ್ತಿರಲಿಲ್ಲ. ಅದರಿಂದ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಸದ್ಯ ಗೊತ್ತಾಗಿದ್ದು, ಒಳ್ಳೆಯದಾಯಿತು ಎಂದು ಮೀನುಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.(ಏಜೆನ್ಸೀಸ್​)
ಪತಿಯ ಮುಂದೆ ಪ್ರದರ್ಶಿಸು ಸಾರ್ವಜನಿಕರ ಮುಂದಲ್ಲ! ಟ್ರೋಲ್​ಗೆ ಗುರಿಯಾದ ನಿವೇದಿತಾರ ಹೊಸ ಅವತಾರ

ಹೆಚ್ಚು ವಿಡಿಯೋ ಗೇಮ್ಸ್​ ಆಡುತ್ತೀರಾ? ನಿಮ್ಮ ಎದೆಬಡಿತ ಏರುಪೇರಾಗಬಹುದು, ಎಚ್ಚರಿಕೆ!

ಪರಪುರುಷನ ಮೋಹಕ್ಕಾಗಿ ಗಂಡನನ್ನೇ ಕೊಲ್ಲಿಸಿದ ಪತ್ನಿ; ಶವ ಮೋರಿಗೆ ಹಾಕಿ, ಅಕ್ಕ-ತಮ್ಮ ಅಂತ ಪೊಲೀಸರಿಗೇ ಸುಳ್ಳು ಹೇಳಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twenty =
Remember me
