ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ನಾಮಫಲಕ ತೋರಿ ಪ್ರತಿಭಟಿಸಿ, ಕಲಾಪಕ್ಕೆ ಅಡ್ಡಿಪಡಿಸಿದ್ದ 19 ಸದಸ್ಯರನ್ನು ಒಂದು ವಾರ ರಾಜ್ಯಸಭಾ ಕಲಾಪದಿಂದ ಅಮಾನತು ಮಾಡಲಾಗಿದೆ.
ನಾಲ್ವರು ಕಾಂಗ್ರೆಸ್​ ಸಂಸದರೂ ಸೇರಿ 19 ಸಂಸದರನ್ನು ಸ್ಪೀಕರ್​ ಓಂ ಬಿರ್ಲಾ ಅವರು ಅಮಾನತುಗೊಳಿಸಿದ್ದು, ಈ ಎಲ್ಲಾ ಸದಸ್ಯರು ಅಧಿವೇಶನದ ವೇಳೆ ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶಿಸಿ ಸದನಕ್ಕೆ ಅಡ್ಡಿಪಡಿಸಿದ್ದರು. ಹಣದುಬ್ಬರ,ಜಿಎಸ್​ಟಿ ಬೆಲೆ ಏರಿಕೆ ಮತ್ತು ಕಾಂಗ್ರೆಸ್​ ಸಂಸದರ ಅಮಾನತು ಸೇರಿದಂತೆ ಇತರೆ ವಿಷಯಗಳ ಕುರಿತು ಸದಸ್ಯರು ಪ್ಲೇ ಕಾರ್ಟ್​ ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.
ಟಿಎಂಸಿ ಸಂಸದರಾದ ಸುಶ್ವಿತಾ ದೇವ್​, ಡಾ.ಸಂತಾನು ಸೇನ್ ಮತ್ತು ಡೋಲಾ ಸೇನ್​ ಇನ್ನುಳಿದ ಶಂತನು ಸೇನ್​,ಮೌಸಂ ನೂರ್​, ನದಿಮುಲ್​ ಹಖ್​, ಅಬೀರ್ ರಂಜನ್​ ಬಿಸ್ವಾಸ್​, ಡಿಎಂಕೆಯ ಕನಿಮೋಳಿ, ಎಂ. ಮೊಹಮ್ಮದ್​ ಅಬ್ದುಲ್ಲ, ಸಿಪಿಐ (ಎಂ)ನ ಎಎ ರಹೀಂ ಅವರನ್ನು ಅಮಾನತು ಮಾಡಲಾಗಿದೆ.
ಸೋಮವಾರ ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ನಾಲ್ವರು ಕಾಂಗ್ರೆಸ್ ಸಂಸದರಾದ ಮಾಣಿಕ್ಯಂ ಟ್ಯಾಗೋರ್​, ಟಿಎನ್​ ಪ್ರತಾಪನ್​, ಜೋತಿಮಣಿ ಮತ್ತು ರಮ್ಯಾ ಹರಿದಾಸ್​ ಅವರನ್ನು ಲೋಕಸಭೆಯ ಉಳಿದ ಅವಧಿಗೆ ಅಮಾನತುಗೊಳಿಸಲಾಗಿತ್ತು.(ಏಜೆನ್ಸೀಸ್​)
ಸಿನಿಮಾಗಳು ನಷ್ಟವಾಗುವುದು ನನಗೆ ಇಷ್ಟವಿಲ್ಲ, ದಕ್ಷಿಣದ ಸಿನಿಮಾಗಳೇ ಬೆಸ್ಟ್​ ಎಂದ ಸಲ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − thirteen =
Remember me
