ನವದೆಹಲಿ:ಅನಾದಿ ಕಾಲದಿಂದಲೂ ಒಂದು ದಿನಕ್ಕೆ 24 ಗಂಟೆ ಎಂದು ಕೇಳುತ್ತಲೇ ಬಂದಿದ್ದೇವೆ. ಆದರೆ, ಭವಿಷ್ಯದಲ್ಲಿ ಇದು ಬದಲಾಗುತ್ತದೆ ಅಂದರೆ ನೀವು ನಂಬುತ್ತೀರಾ? ಆದರೆ ಇದು ನಿಜ ಎನ್ನುತ್ತಿದೆ ಇತ್ತೀಚಿನ ಸಂಶೋಧನೆ. ಉಪಗ್ರಹ ಚಂದ್ರ, ಭೂಮಿಯಿಂದ ದೂರ ಸರಿಯುತ್ತಿದ್ದು, ಭವಿಷ್ಯದಲ್ಲಿ ಒಂದು ದಿನಕ್ಕೆ 25 ಗಂಟೆಗಳಿರುತ್ತವೆ ಎಂದು ವಿಜ್ಞಾನಿಗಳು ಅಚ್ಚರಿಯ ಮಾಹಿತಿ ತಿಳಿಸಿದ್ದಾರೆ.
ಚಂದ್ರನು ನಿಧಾನವಾಗಿ ಭೂಮಿಯಿಂದ ದೂರ ಸರಿಯುತ್ತಿದ್ದು, ಇದರಿಂದಾಗಿ ಒಂದು ದಿನದ ಉದ್ದ ಹೆಚ್ಚಾಗಲಿದೆ. ಪ್ರಸ್ತುತ, ಭೂಮಿಯಿಂದ ಚಂದ್ರನ ಸರಾಸರಿ ದೂರವು 3,84,400 ಕಿಮೀ (238,855 ಮೈಲಿ) ದೂರ ಇದೆ. ಚಂದ್ರನು ಒಂದು ಕಕ್ಷೆಯನ್ನು ಪೂರ್ಣಗೊಳಿಸಲು ಸುಮಾರು 27.3 ದಿನಗಳನ್ನು ತೆಗೆದುಕೊಳ್ಳುತ್ತಾನೆ.
ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕರು ಚಂದ್ರ ಮತ್ತು ಭೂಮಿಯ ನಡುವಿನ ಅಂತರವನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರ ಪ್ರಕಾರ, ಚಂದ್ರನು, ಭೂಮಿಯಿಂದ ವರ್ಷಕ್ಕೆ 3.82 ಸೆಂಟಿ ಮೀಟರ್​ ದೂರ ಹೋಗುತ್ತಿರುವುದು ಕಂಡುಬಂದಿದೆ. ಕ್ರಮೇಣ ಇದು ದಿನಗಳ ಉದ್ದವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸುಮಾರು 200 ಮಿಲಿಯನ್ ವರ್ಷಗಳಲ್ಲಿ ಭೂಮಿಯ ಒಂದು ದಿನವು 25 ಗಂಟೆಗಳಾಗಲಿದೆ ಎಂದು ತಿಳಿಸಿದ್ದಾರೆ.
ಇತಿಹಾಸ ಏನು ಹೇಳುತ್ತೆ?ಭೂಮಿಯ ಇತಿಹಾಸವನ್ನು ನೋಡಿದಾಗಲೂ ದಿನಗಳು ಹೆಚ್ಚಾಗುತ್ತಿರುವುದನ್ನು ಕಾಣಬಹುದು. ಭೂಮಿಯಿಂದ ಚಂದ್ರ ದೂರ ಸರಿಯಲು ಪ್ರಸ್ತುತ ಹವಾಮಾನ ಬದಲಾವಣೆ ಕೂಡ ಪ್ರಭಾವ ಬೀರುತ್ತಿದೆ. 1.4 ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಒಂದು ದಿನ ಕೇವಲ 19.5 ಗಂಟೆಗಳಿತ್ತು ಎಂದು ಅಧ್ಯಯನಗಳು ಹೇಳಿವೆ. ಅಲ್ಲದೆ, 4.5 ಶತಕೋಟಿ ವರ್ಷಗಳ ಹಿಂದೆ ಚಂದ್ರನು ರೂಪುಗೊಂಡ ಸಂದರ್ಭದಲ್ಲಿ ಭೂಮಿಯ ಮೇಲಿನ ಒಂದು ದಿನದ ಉದ್ದವು ಭೂಮಿಯು ತನ್ನ ಅಕ್ಷದಲ್ಲಿ ತಿರುಗಲು ತೆಗೆದುಕೊಂಡ ಸಮಯವಾಗಿತ್ತು. ಇದು ಕೆಲವೇ ಗಂಟೆಗಳಿರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.
ಚಂದ್ರ ದೂರವಾಗಲು ಕಾರಣ?ಭೂಮಿ ಮತ್ತು ಚಂದ್ರನ ನಡುವಿನ ಗುರುತ್ವಾಕರ್ಷಣೆಯ ಪರಸ್ಪರ ಕ್ರಿಯೆಯು ಚಂದ್ರ ಮತ್ತು ಭೂಮಿಯ ನಡುವಿನ ಅಂತರಕ್ಕೆ ಕಾರಣ ಎಂದು ಸಂಶೋಧಕರು ನಂಬಿದ್ದಾರೆ. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ಭೂವಿಜ್ಞಾನದ ಪ್ರಾಧ್ಯಾಪಕ ಸ್ಟೀಫನ್ ಮೇಯರ್ಸ್ ಪ್ರಕಾರ ಚಂದ್ರನು ಹಿಂದಕ್ಕೆ ಸರಿದಷ್ಟು ಭೂಮಿಯ ತಿರುಗುವಿಕೆ ನಿಧಾನವಾಗುತ್ತದೆ ಎಂದು ಹೇಳಿದ್ದಾರೆ.
ಚಂದ್ರನ ವಾತಾವರಣಚಂದ್ರನ ಸುತ್ತಲೂ ವಾತಾವರಣವಿದೆ. ಆದರೆ, ಈ ವಾತಾವರಣ ತುಂಬಾ ದುರ್ಬಲವಾದದ್ದು. ಇದನ್ನು 1970ರ ದಶಕದಲ್ಲಿ ಕಂಡುಹಿಡಿಯಲಾಯಿತು. ಅಲ್ಲಿನ ಮಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ರುಬಿಡಿಯಂ ಅಂಶಗಳು ಕಂಡುಬಂದಿವೆ. ಚಂದ್ರನ ಮೇಲ್ಮೈಗೆ ಅಪ್ಪಳಿಸುವ ದೊಡ್ಡ ಮತ್ತು ಸಣ್ಣ ಉಲ್ಕೆಗಳ ಪ್ರಭಾವದಿಂದ ಚಂದ್ರನ ಮೇಲೆ ವಾತಾವರಣ ಸೃಷ್ಟಿಯಾಗಿದೆ ಎಂದು ಕೆಲವು ಸಂಶೋಧಕರು ಹೇಳಿದ್ದಾರೆ. ಚಂದ್ರನು ಭೂಮಿಯ ದಪ್ಪ, ಸ್ಥಿರ ವಾತಾವರಣಕ್ಕಿಂತ ವಿಭಿನ್ನವಾದ ವಾತಾವರಣವನ್ನು ಹೊಂದಿದ್ದಾನೆ. ಚಂದ್ರನ ವಾತಾವರಣದ ಕುರಿತು ಹಲವು ಪ್ರಮುಖ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ ಎಂದು ಸಂಶೋಧಕರು ಹೇಳುತ್ತಾರೆ.
ಇತರೆ ಅಂಶಗಳುದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ಇತ್ತೀಚಿನ ಅಧ್ಯಯನವು ಭೂಮಿಯ ಒಳಭಾಗವು ಮೇಲ್ಮೈಗಿಂತ ಹೆಚ್ಚು ನಿಧಾನವಾಗಿ ತಿರುಗುತ್ತದೆ ಎಂದು ಕಂಡುಕೊಂಡಿದ್ದಾರೆ. ದಶಕಗಳಲ್ಲಿ ಮೊದಲ ಬಾರಿಗೆ ಒಳಗಿನ ತಿರುಳು ಮೇಲ್ಮೈಗಿಂತ ನಿಧಾನವಾಗಿ ತಿರುಗುತ್ತಿದೆ ಎಂದು ಅಧ್ಯಯನವು ಹೇಳಿದೆ. ಆದ್ದರಿಂದ ದಿನದ ಉದ್ದವು ಹೆಚ್ಚಾಗಲಿದೆ ಎಂದು ಸಂಶೋಧನೆ ತಿಳಿಸಿದೆ.(ಏಜೆನ್ಸೀಸ್​)
ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸುನಿತಾ ವಿಲಿಯಮ್ಸ್​! ಮುಂದಿನ ವರ್ಷದವರೆಗೂ ಅಲ್ಲಿಯೇ ಲಾಕ್​

ಐಶ್ವರ್ಯಾ ನಿಮ್ಮ ಮನೆಗೆ ಬಂದ್ರೆ ಕುಟುಂಬವೇ ನಾಶವಾಗುತ್ತೆ! ಬಚ್ಚನ್​ ಕಟುಂಬದ ಪತ್ರ ರಹಸ್ಯ ಬಯಲು

ಅನರ್ಹತೆ ವಿರುದ್ಧ ಮೇಲ್ಮನವಿ ಸಲ್ಲಿಸಿದ ವಿನೇಶ್​! ಎಲ್ಲರ ದೃಷ್ಟಿ ಈಗ ಸಿಎಎಸ್ ತೀರ್ಪಿನ​ ಮೇಲೆ! ಏನಿದು CAS?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four − one =
Remember me
