ನವದೆಹಲಿ:ಭಾರತದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಇದೇ ಮೊದಲ ಬಾರಿಗೆ 25 ವರ್ಷ ಅಥವಾ ಅದಕ್ಕೆ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ. ಪುರುಷ ಮತ್ತು ಮಹಿಳೆ ಅಥವಾ ನಗರ ಮತ್ತು ಗ್ರಾಮೀಣ ಎಂಬ ಭೇದವಿಲ್ಲದೆ ಈ ಅಂಶ ಸಮಾನವಾಗಿದೆ ಎನ್ನುವುದನ್ನು 2018ರ ಮಾದರಿ ನೋಂದಣಿ ವ್ಯವಸ್ಥೆ (ಸ್ಯಾಂಪಲ್ ರಿಜಿಸ್ಟ್ರೇಶನ್ ಸಿಸ್ಟಂ-ಎಸ್​ಆರ್​ಎಸ್) ವರದಿ ದಾಖಲಿಸಿದೆ. ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಇತ್ತೀಚೆಗೆ ಈ ವರದಿ ಬಿಡುಗಡೆ ಮಾಡಿದ್ದಾರೆ. 2018ರಲ್ಲಿ 25 ವರ್ಷಕಿಂತ ಕಡಿಮೆ ವಯೋಮಾನದವರ ಒಟ್ಟಾರೆ ಪ್ರಮಾಣ ಜನಸಂಖ್ಯೆಯ ಶೇಕಡಾ 46.9 ಆಗಿತ್ತು.
ಕಾರಣವೇನು?: ಆಯುಷ್ಯ ಹೆಚ್ಚುವುದರ ಜೊತೆಯಲ್ಲಿ ಭಾರತೀಯರ ಫಲವತ್ತತೆ ದರ ಕುಸಿಯುತ್ತಿರುವುದರಿಂದ ಅದರ ಯುವ ಜನಸಂಖ್ಯೆಯ ಪ್ರಮಾಣವೂ ಅದಕ್ಕನುಗುಣವಾಗಿ ಕುಗ್ಗುತ್ತಿದೆ. ಸರಾಸರಿ ವಯಸ್ಸು ಹೆಚ್ಚಾಗುತ್ತಿದೆ.
ಗ್ರಾಮೀಣ ಪುರುಷರಲ್ಲಿ ಕೂಡ, 25 ವಯಸ್ಸಿಗಿಂತ ಕಡಿಮೆ ವಯಸ್ಸಿನವರ ಅನುಪಾತ 2017ರಲ್ಲಿ ಶೇಕಡಾ 50.2 ಇದ್ದದ್ದು 2018ರಲ್ಲಿ ಶೇಕಡಾ 49.9ಕ್ಕೆ ಕುಸಿದಿದೆ ಎನ್ನುವುದನ್ನು ವರದಿ ತೋರಿಸಿದೆ. ನಗರ ಮಹಿಳೆಯರು, ನಗರ ಪರುಷರು ಮತ್ತು ಗ್ರಾಮೀಣ ಮಹಿಳೆಯರು- ಹೀಗೆ ಇತರ ಎಲ್ಲ ವಿಭಾಗಗಳಲ್ಲಿ ಕೂಡ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಜನಸಂಖ್ಯೆಯ ಅರ್ಧಕ್ಕಿಂತ ಕಡಿಮೆಯಿರುವುದು ವರದಿಯಲ್ಲಿ ದಾಖಲಾಗಿದೆ.
ಫಲವಂತಿಕೆ (ಫಲವತ್ತತೆ) ಪ್ರಮಾಣ ತೀರಾ ಹೆಚ್ಚಿರುವ ಕೆಲವು ರಾಜ್ಯಗಳೂ ಇದ್ದು ಅಲ್ಲಿ ಈ ಅನುಪಾತ ಇನ್ನೂ ಹೆಚ್ಚಾಗಿದೆ.
ಬಿಹಾರ ಮೊದಲ ಸ್ಥಾನದಲ್ಲಿ: ಅತಿ ಹೆಚ್ಚು ಅಂದರೆ 3.2 ಫಲವಂತಿಕೆ ದರ ಹೊಂದಿರುವ ಬಿಹಾರ, 25 ವರ್ಷಕ್ಕಿಂತ ಕಡಿಮೆ ವಯೋಮಾನದವರ ವಿಚಾರದಲ್ಲೂ (57.2%) ಮುಂದಿದೆ. ಎರಡನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ ಫಲವಂತಿಕೆ 2.9 ಆಗಿದ್ದು ಅನುಪಾತ ಶೇಕಡಾ 52.7 ಆಗಿದೆ. ಗಾತ್ರ ದೊಡ್ಡದಿರುವ ರಾಜ್ಯದ ಫಲವತ್ತತೆ ದರ ಕಡಿಮೆಯಿದ್ದು ಅಲ್ಲಿ ಆಯಸ್ಸು ಹೆಚ್ಚಿರುತ್ತದೆ. 25 ವರ್ಷಕ್ಕಿಂತ ಕಡಿಮೆ ವಯೋಮಾನದವರ ಅನುಪಾತ ಸಣ್ಣದಿರುತ್ತದೆ.
ಅನೇಕ ರಾಜ್ಯಗಳು ಕೇರಳಕ್ಕಿಂತ ಕಡಿಮೆ ಫಲವತ್ತತೆ ಪ್ರಮಾಣ ಹೊಂದಿದ್ದರೂ ಅದು ಈಗ ಕಡಿಮೆ ದರ ಹೊಂದಿರುವುದು ಯಾಕೆ ಎನ್ನುವುದನ್ನು ಈ ಅಂಶ ವಿವರಿಸುತ್ತದೆ. ಕೇರಳದ ಫಲವಂತಿಕೆ ಪ್ರಮಾಣ 1991ರಲ್ಲೇ 1.8ಕ್ಕೆ ಕುಸಿದಿದ್ದು 25 ವಯೋಮಾನದರಿಗಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಆ ರಾಜ್ಯದಲ್ಲಿ ಶೇಕಡಾ 37.4ರಷ್ಟಿದೆ.
ಕೇರಳದ ಈಗಿನ 1.7 ಫಲವಂತಿಕೆಗೆ ಹೋಲಿಸಿದರೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ ಹಾಗೂ ಪಂಜಾಬ್ ರಾಜ್ಯಗಳು ಕಡಿಮೆ, ಅಂದರೆ 1.6 ಫಲವಂತಿಕೆ ದರ ಹೊಂದಿವೆ. ಇವುಗಳ ಫಲವತ್ತತೆ ದರ 1991ರಲ್ಲಿ 3ಕ್ಕಿಂತ ಹೆಚ್ಚಾಗಿತ್ತು. ತಮಿಳುನಾಡಿನದ್ದು ಮಾತ್ರ 2.2 ಆಗಿತ್ತು. ಹೀಗಾಗಿ, ಈ ರಾಜ್ಯಗಳು 25 ವಯೋಮಾನಕ್ಕಿಂತ ಕಡಿಮೆ ವಯಸ್ಸಿನವರ ಅನುಪಾತದ ವಿಚಾರದಲ್ಲಿ ಕೇರಳಕ್ಕಿಂತ ಉನ್ನತ ಅನುಪಾತ ಹೊಂದಿವೆ.

ಮನೆಗೆ ಬರುತ್ತೇ ಫೈವ್ ಸ್ಟಾರ್​ ಹೋಟೆಲ್​ ಊಟ; ಬಟ್ಟೆನೂ ತೊಳೆದು ಕೊಡ್ತಾರೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eighteen =
Remember me
