ಹೈದರಾಬಾದ್:ಆನ್​ಲೈನ್ ಗೇಮ್ ಪಬ್​ಜಿ ಚಟಕ್ಕೆ ಬಿದ್ದು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​​​ನ ಪಂಜಾಗುಟ್ಟ ಪೊಲೀಸ್​ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಮ್ಮ ಐ ಲವ್​ ಯೂ….ಹುಷಾರಾಗಿರು ಎಂದು ವಾಟ್ಸ್​ಆ್ಯಪ್​​ನಲ್ಲಿ ಅವರ ತಾಯಿಗೆ ಮೆಸೇಜ್ ಮಾಡಿ ಅಖಿಲ್​ (21) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಅಖಿಲ್​ ತಂದೆ ಮರಣಹೊಂದಿದ ನಂತರ ತಾಯಿ ಜೊತೆ ಸೇರಿ ಅಪಾರ್ಟ್​ಮೆಂಟ್​​ನಲ್ಲಿ ವಾಸವಾಗಿದ್ದರು. ಅಮೀರ್​ಪೇಟ್ ಸಮೀಪದ ಸಿದಾರ್ಥ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ. ಕಳೆದ ಮೂರು ತಿಂಗಳಿನಿಂದ ಕಾಲೇಜಿಗೂ ಹೋಗದೆ ಪಬ್​ಜಿಗೆ ಜೋತು ಬಿದ್ದು ಹಗಲು ರಾತ್ರಿ ಗೇಮ್ ಆಡುತ್ತಿದ್ದ. ಕುಟುಂಬದವರು ಬುದ್ಧಿಮಾತು ಹೇಳಿದರೂ ಕೇಳದ ಅಖಿಲ್​ ಆಟಕ್ಕಾಗಿ ಊಟ ಬಿಟ್ಟು ಪಬ್​ಜಿ ಗೇಮ್​ನಲ್ಲಿ ನಿರತನಾಗಿದ್ದ. ಕೊನೆಗೆ ಪಬ್​ಜಿ ಆಟವೇ ಆತನ ಜೀವಕ್ಕೆ ಮುಳುವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಖಿಲ್​ ತಾಯಿ ಪಿ. ಜಯ ತನ್ನ ಗೆಳತಿ ಮನೆಗೆ ಹೋಗಿದ್ದಳು. ಮನೆಯಲ್ಲಿ ಇದ್ದ ಅಖಿಲ್ ಅಮ್ಮ ಐ ಲವ್​ ಯೂ….ಮಿಸ್​ ಜೋಪಾನ ಎಂದು ಮೆಸೇಜ್​ ಮಾಡಿದ್ದ, ಈ ಮೆಸೇಜ್​ ನೋಡಿದ ತಾಯಿ ಮನೆಗೆ ಬಂದು ಬಾಗಿಲು ಬಂದ್ ಆಗಿರುವುದನ್ನು ಕಂಡು ಬಾಗಿಲು ತೆರೆಯುವಂತೆ ಮಗನನ್ನು ಕೂಗಿದ್ದಾರೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಎಷ್ಟೋತ್ತಾದರೂ ಪ್ರತಿಕ್ರಿಯೆ ಬಾರದಿದ್ದಾಗ ಅಕ್ಕಪಕ್ಕದ ಮನೆಯವರ ನೆರವಿನಿಂದ ಬಾಗಿಲು ಒಡೆದು ನೋಡಿದ್ದಾರೆ, ಮಗ ನೇಣು ಬಿಗಿದುಕೊಂಡು ಸಾವುಗೀಡಾಗಿರುವುದನ್ನು ನೋಡಿ ತಾಯಿ ಕುಸಿದು ಬಿದ್ದಿದ್ದಾಳೆ.
ಪಬ್​ಜಿಯಂತಹ ಆನ್​ಲೈನ್ ಗೇಮ್​ಗಳಿಂದ ಅಮಾಯಕ ಯುವಕರು, ವಿದ್ಯಾರ್ಥಿಗಳು ತಮ್ಮ‌ ಭವಿಷ್ಯಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಪಬ್​ಜಿಯಂತಹ ಆನ್​​ಲೈನ್​ ಗೇಮ್​​ಗಳನ್ನು ಕೂಡಲೇ ಬ್ಯಾನ್ ಮಾಡಬೇಕು ಎಂದು ಮೃತನ ತಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಚಿನ್ನ ಲೇಪಿತ ಪಾದರಕ್ಷೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ಭಕ್ತ: ಪಾದುಕೆಗಳ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

‘ತಾಲಿಬಾನ್ ರೀತಿ ಸರ್ಕಾರ ಮಾಡಲು ಸಿದ್ದರಾಮಯ್ಯ ನಿರ್ಧಾರ’: ಸಚಿವ ಪ್ರಲ್ಹಾದ ಜೋಶಿ

150 ಕೋಟಿ ರೂ.ನತ್ತ ಸಾಗಿದ ‘ಕಾಟೇರ’! ಇಲ್ಲಿದೆ ಬಾಕ್ಸ್​ ಆಫೀಸ್​ ವಿವರ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five + 10 =
Remember me
