ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸ್ಕೂಟಿಗೆ ಆರ್‌ಟಿಒ ನೀಡಿರುವ ನಂಬರ್‌ ಪ್ಲೇಟ್‌ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ, ಆ ನಂಬರ್​ ಪ್ಲೇಟ್​ ಮೇಲಿರುವ SEX ಅಕ್ಷರದಿಂದಾಗಿ ಆಕೆ ತೀವ್ರ ಮುಜುಗರಕ್ಕೀಡಾಗಿ, ಆ ಸ್ಕೂಟಿಯ ಸಹವಾಸವೇ ಬೇಡ ಎಂದು ಮೂಲೆಯೊಂದರಲ್ಲಿ ನಿಲ್ಲಿಸಿಬಿಟ್ಟಿದ್ದಾಳೆ.
ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿರುವ ದಂಪತಿಯೊಬ್ಬರು ತನ್ನ ಮಗಳು ಮಾನಸಿಗೆ ಸ್ಕೂಟಿಯನ್ನು ಉಡುಗೊರೆಯಾಗಿ ನೀಡಿದ್ದರು. ಅಪ್ಪ-ಅಮ್ಮ ಕೊಟ್ಟ ಗಿಫ್ಟ್​ನಿಂದ ಫುಲ್​ ಖುಷಿಯಾಗಿದ್ದ ಮಗಳು, ಕಾಲೇಜಿಗೆ ಸ್ಕೂಟಿಯನ್ನು ಓಡಿಸಿಕೊಂಡು ಹೋಗಿದ್ದಳು. ಅಲ್ಲಿಂದ ಶುರುವಾಯ್ತು ನೋಡಿ ಆಕೆಗೆ ಮುಜುಗರ. ಆ ಸ್ಕೂಟಿಯನ್ನ ನೋಡಿದಾಕ್ಷಣ ಪರಿಯಚಸ್ಥರು, ಸ್ನೇಹಿತರೆಲ್ಲ ಆಕೆಯನ್ನ ಗೇಲಿ ಮಾಡುತ್ತಾ ಕಾಲೆಳೆದಿದ್ದಾರೆ. ಇದಕ್ಕೆ ಕಾರಣ ಸ್ಕೂಟಿಯ ನಂಬರ್​ ಪ್ಲೇಟಿನಲ್ಲಿDL3SEX****ಎಂಬ ಬರಹ ಇರುವುದು.
ಈ ಸ್ಕೂಟಿಗೆ ಆರ್‌ಟಿಒ ನೀಡಿರುವ ನಂಬರ್​DL3SEX****. ಸ್ಕೂಟಿ ಸಂಖ್ಯೆಯಲ್ಲಿ ಡಿಎಲ್‌ ಎಂಬ ಎರಡು ಇಂಗ್ಲಿಷ್‌ ಅಕ್ಷರಗಳ ಬಳಿಕ ಮುಂದಿನ ವರ್ಣಮಾಲೆಯಲ್ಲಿ SEX ಎಂದು ಬಂದಿದೆ. ಈ ಪದ ನೋಡಿ ಗಾಡಿ ಮೇಲ್ಯಾಕೆ ಸೆಕ್ಸ್‌ ಎಂದಿದೆ ಎಂದು ಹಲವರು ಗೇಲಿ ಮಾಡುತ್ತಿದ್ದಾರಂತೆ. ಹೀಗಾಗಿ ಸ್ಕೂಟಿಯ ಸಹವಾಹಸವೇ ಬೇಡ ಎಂದು ವಿದ್ಯಾರ್ಥಿನಿ ನಿರ್ಧರಿಸಿದ್ದಾಳೆ.
ಈ ವಿಚಾರ ಗೊತ್ತಾಗಿ ತುಂಬಾ ನೊಂದುಕೊಂಡ ಆಕೆಯ ತಂದೆ, ನಂಬರ್ ಪ್ಲೇಟ್‌ ಬದಲಾಯಿಸಲು ಯತ್ನಿಸಿದ್ದಾರೆ. ಆದರೂ ಪ್ರಯೋಜನವಾಗಲಿಲ್ಲ. ನಂಬರ್​ ಬದಲಾವಣೆ ಸಾಧ್ಯವಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳೇ ಹೇಳಿದ್ದಾರಂತೆ.
ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

ಹಾಗೆಲ್ಲ ಮಾಡಿದ್ರೆ ಅಪ್ಪುಗೆ ದ್ರೋಹ ಮಾಡಿದಂತೆ, ಆ ವಿಷ್ಯ ಅವನೊಂದಿಗೆ ಮಣ್ಣಾಗ್ಬೇಕು ಅನ್ಕೊಂಡಿದ್ದ: ರಾಘಣ್ಣ

‘ಹೇಗೆ ಮರಿಯಾಲಿ ಪುನೀತರಾಜು ನಿನ್ನ.. ಹೇಗೆ ಬಂತಪ್ಪ ನಿನಗೆ ಸಾವು?’ ಕಣ್ಣೀರು ತರಿಸುತ್ತೆ ತಾಯಂದಿರ ಸೋಬಾನೆ ಪದ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:7 + seventeen =
Remember me
