ಅಹಮದಾಬಾದ್​:ಸೆಕ್ಸ್​ ಚೇಂಜ್ ಅರ್ಥಾತ್ ಲಿಂಗ ಪರಿವರ್ತನೆ ಮಾಡಿಸಿಕೊಂಡ ವ್ಯಕ್ತಿಯೊಬ್ಬರು ಈಗ ತಮ್ಮಲ್ಲಿರುವುದು ಒಂದಕ್ಕೊಂದು ತಾಳೆಯಾಗದ್ದರ ಹಿನ್ನೆಲೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಅವರು ತಮಗೆ ಎದುರಾಗಿರುವ ತೊಂದರೆಯನ್ನು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲನ್ನೂ ಏರಿದ್ದಾರೆ.
31 ವರ್ಷ ವಯಸ್ಸಿನ ದಂತವೈದ್ಯರೊಬ್ಬರು ಜನ್ಮತಃ ಹುಡುಗಿಯಾಗಿದ್ದರೂ ಹುಡುಗನಂಥ ಸ್ವಭಾವ ಕಂಡುಬಂದ ಹಿನ್ನೆಲೆಯಲ್ಲಿ ಅವರು ಲಿಂಗ ಪರಿವರ್ತನೆ ಮಾಡಿಸಿಕೊಂಡು ಹುಡುಗ ಎನಿಸಿಕೊಂಡಿದ್ದಾರೆ. ಜೆಂಡರ್​ ಡಿಸ್ಫೋರಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ಇವರು 2018ರ ಏಪ್ರಿಲ್​ನಲ್ಲಿ ಶಸ್ತಚಿಕಿತ್ಸೆಗೆ ಒಳಗಾಗಿ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದರು. ಹೀಗೆ ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವ ಈ ವ್ಯಕ್ತಿಗೆ ಈಗ ಮತ್ತಷ್ಟು ಬದಲಾವಣೆಗಳ ಸವಾಲು ಎದುರಾಗಿದೆ.
ಇದನ್ನೂ ಓದಿ:ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!
ಲಿಂಗ ಪರಿವರ್ತನೆ ಬಳಿಕ ಆಧಾರ್ ಕಾರ್ಡ್, ಪಾಸ್​ಪೋರ್ಟ್​ ಹಾಗೂ ಡ್ರೈವಿಂಗ್ ಲೈಸೆನ್ಸ್​ಗಳನ್ನು ತಾವು ಪುರುಷ ಎನಿಸಿಕೊಂಡ ನಂತರದ ಹೊಸ ಹೆಸರು ಹಾಗೂ ಲಿಂಗ ಎಂಬ ಸ್ಥಳದಲ್ಲಿ ಪುರುಷ ಎಂಬ ನಮೂದಿನೊಂದಿಗೇ ಹೊಸದಾಗಿ ಪಡೆದಿದ್ದಾರೆ. ಆದರೆ ಅವರ ಜನ್ಮ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರಗಳು ಇನ್ನೂ ಹಳೆಯ ಲಿಂಗ-ಹೆಸರುಗಳಲ್ಲೇ ಇದ್ದು ಅದರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಈಗಿನ ಹೆಸರು ಹಾಗೂ ಲಿಂಗಕ್ಕೆ ಅವು ತಾಳೆಯಾಗದ್ದರಿಂದ ಅವರು ಹೊಸದಾಗಿ ಆ ಪ್ರಮಾಣಪತ್ರಗಳನ್ನು ಪಡೆಯಬೇಕಾಗಿದೆ. ಈ ಕುರಿತು ಸಂಬಂಧಿತ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಗುಜರಾತ್ ಹೈಕೋರ್ಟ್​ನಲ್ಲಿ ಮನವಿ ಸಲ್ಲಿಸಿದ್ದಾರೆ.
ಹೀಗಾಗಿ ಈ ವ್ಯಕ್ತಿಯ ಜನ್ಮ ಪ್ರಮಾಣಪತ್ರಕ್ಕೆ ಧಂಧೂಕ ಮುನಿಸಿಪಾಲಿಟಿ, ಗುಜರಾತ್ ರಾಜ್ಯ ಸೆಕೆಂಡರಿ ಹಾಗೂ ಹೈಯರ್ ಸೆಕಂಡರಿ ಎಜುಕೇಷನ್​ ಬೋರ್ಡ್, ಭಾವ್​ನಗರ ಯುನಿವರ್ಸಿಟಿಗಳಿಗೆ ಹೈಕೋರ್ಟ್ ಸೂಚನೆ ನೀಡಿದ್ದು, ಈ ಸಂಬಂಧ ಅವುಗಳ ಅಭಿಪ್ರಾಯವನ್ನು ಕೋರಿದೆ. ಮಾತ್ರವಲ್ಲ ಮುಂದಿನ ವಿಚಾರಣೆಗಾಗಿ ಫೆ.18ರಂದು ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದೆ. (ಏಜೆನ್ಸೀಸ್)
ಟಿಕ್​ಟಾಕ್​ಅನ್ನು ಮೀರಿಸಿ ಮೊದಲ ಸ್ಥಾನ ಪಡೆದ ಟೆಲಿಗ್ರಾಂ; ಎರಡನೇ ಸ್ಥಾನದಲ್ಲಿ ಸಿಗ್ನಲ್

ಪತ್ನಿಯ ಎಲ್​ಐಸಿ ಪಾಲಿಸಿ ಮೇಲೆ ಕಣ್ಣು ಹಾಕಿದ ಚಾರ್ಟೆರ್ಡ್ ಅಕೌಂಟೆಂಟ್ ಪತಿ ಮಾಡಿದ್ದೇನು ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + fifteen =
Remember me
