ಮುಂಬೈ:ಹಿರಿಯ ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರು ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ, ಹೇಮಾ ಅವರು ಒಮ್ಮೆ ಚಲನಚಿತ್ರ ನಿರ್ಮಾಪಕರೊಬ್ಬರ ಬಗ್ಗೆ ಮಾತನಾಡಿದ್ದಾರೆ.
ಹೇಮಾ ಅವರು 1960 ರ ದಶಕದಲ್ಲಿ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಐದು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2004ರಲ್ಲಿ ಅವರು ಭಾರತೀಯ ಜನತಾ ಪಕ್ಷದೊಂದಿಗೆ ಅಧಿಕೃತವಾಗಿ ರಾಜಕೀಯಕ್ಕೆ ಸೇರಿದರು ಮತ್ತು ಪ್ರಸ್ತುತ ಅವರು ಮಥುರಾ ಕ್ಷೇತ್ರದಿಂದ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:ವೀರಶೈವ ಲಿಂಗಾಯತ ಸಮುದಾಯ ಒಬಿಸಿಗೆ ಸೇರಿಸಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುವಂತೆ ಹಕ್ಕೊತ್ತಾಯ ಸಭೆ
ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಮಾ ಮಾಲಿನಿ ಅವರು, “ಹೆಸರುಗಳನ್ನು ಹೇಳದ ನಿರ್ದೇಶಕರೊಬ್ಬರು ಶೂಟಿಂಗ್​ ವೇಳೆ ನಾನು ಉಟ್ಟಿದ್ದ ಸೀರೆಯ ಪಿನ್ ಅನ್ನು ತೆಗೆದುಹಾಕಲು ಕೇಳಿದರು. ಆಗ ನಾನು ಹೇಳಿದೆ ಸೀರೆಯ ಪಿನ್ನು ತೆಗೆದರೆ ಸೀರೆ ಜಾರುತ್ತದೆ ಎಂದು ಹೇಳಿದ್ದೇನು. ಆಗ ಅವರು ಸೀರೆ ಜಾರುವುದೇ ನಮಗೆ ಬೇಕು ಎಂದು 74 ವರ್ಷ ವಯಸ್ಸಿನ ನಿರ್ದೇಶಕ ಹೇಳಿದ್ದರು. ಅವರು ಕೆಲವು ರೀತಿಯ ದೃಶ್ಯವನ್ನು ಚಿತ್ರೀಕರಿಸಲು ಬಯಸಿದ್ದರೆಂದು” ಹೇಮಾ ನೆನಪಿಸಿಕೊಂಡರು.
ಹೇಮಾ ಮಾಲಿನಿ ಅವರು ಸಿನಿಮಾ ಮತ್ತು ರಾಜಕೀಯದಲ್ಲಿ ಸಕ್ರಿಯವಾಗಿರುವ ನಟಿ. ಇವರು ಹೆಸರು ಹೇಳದೆ ನಿರ್ದೇಶಕರ ಮೇಲೆ ಆರೋಪ ಮಾಡಿದ್ದು ಸಖತ್​ ಸುದ್ದಿಯಲ್ಲಿದೆ.
500 ರೂ. ನಕಲಿ ನೋಟು ನೀಡಿ ವೈದ್ಯರಿಗೆ ಮೋಸ ಮಾಡಿದ ರೋಗಿ ; ಡಾಕ್ಟರ್​​ ಮಾಡಿದ್ದೇನು?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 2 =
Remember me
