ಉ್ತತರ ಪ್ರದೇಶ:ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ತಪಾಸಣೆ ಮಾಡಿದ ವೈದ್ಯರೇ ಕೆಲಕಾಲ ಶಾಕ್​ ಆಗಿದ್ದಾರೆ. ಆ ರೋಗಿಯ ಹೊಟ್ಟೆಯಲ್ಲಿ ಬರೋಬ್ಬರಿ 62 ಚಮಚಗಳು ಪತ್ತೆಯಾಗಿದ್ದು, ಕಳೆದ ಒಂದು ವರ್ಷದಿಂದ ಆತ ಚಮಚಗಳನ್ನು ತಿನ್ನುತ್ತಿದ್ದನಂತೆ!
ಇಂತಹ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದಿದೆ. 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ರೋಗಿಯ ಹೊಟ್ಟೆಯಿಂದ 62 ಚಮಚಗಳನ್ನು ಹೊರತೆಗೆದಿದ್ದರಾದರೂ ಆತನ ಆರೋಗ್ಯಸ್ಥಿತಿ ಸುಧಾರಿಸಿಲ್ಲ. ಗಂಭೀರ ಸ್ಥಿತಿಯಲ್ಲಿದ್ದಿ, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬೊಪದ ಗ್ರಾಮದ 32 ವರ್ಷದ ವಿಜಯ್ ಮಾದಕ ವಸ್ತುಗಳ ಸೇವನೆಯ ಚಟ ಅಂಟಿಸಿಕೊಂಡಿದ್ದ. ಇದರಿಂದ ಆತನನ್ನು ದೂರವಾಗಿಸಲೆಂದು ಕುಟುಂಬಸ್ಥರು ಮಾದಕ ವ್ಯಸನ ನಿರ್ಮೂಲನಾ ಕೇಂದ್ರಕ್ಕೆ ಒಂದು ತಿಂಗಳ ಹಿಂದೆ ಸೇರಿಸಿದ್ದರು. ಇತ್ತೀಚಿಗೆ ವಿಜಯ್​ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ತಪಾಸಣೆ ಮಾಡಿದ್ದು, ಆತನ ಹೊಟ್ಟೆಯಲ್ಲಿ ಸ್ಪೂನ್​ಗಳಿರುವುದು ಗೊತ್ತಾಗಿದೆ.
UP | 62 spoons have been taken out from the stomach of 32-year-old patient, Vijay in Muzaffarnagar. We asked him if he ate those spoons & he agreed. Operation lasted for around 2 hours, he is currently in ICU. Patient has been eating spoons for 1 year: Dr Rakesh Khurrana (27.09)pic.twitter.com/tmqnfWJ2lY
— ANI UP/Uttarakhand (@ANINewsUP)September 28, 2022

ಮಾದಕ ವ್ಯಸನ ನಿರ್ಮೂಲನಾ ಕೇಂದ್ರದ ಸಿಬ್ಬಂದಿಯೇ ವಿಜಯ್​ಗೆ ಬಲವಂತವಾಗಿ ಚಮಚ ನುಂಗ್ಗಿಸಿ ಹಿಂಸೆ ನೀಡಿದ್ದಾರೆ ಎಂದು ವಿಜಯ್ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.
ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ಡಾ.ರಾಕೇಶ್ ಖುರಾನಾ, 32 ವರ್ಷದ ರೋಗಿ ವಿಜಯ್ ಅವರ ಹೊಟ್ಟೆಯಿಂದ 62 ಚಮಚಗಳನ್ನು ಹೊರತೆಗೆಯಲಾಗಿದೆ. ಚಮಚಗಳನ್ನು ತಾನೇ ತಿನ್ನುತ್ತಿದ್ದೆ ಎಂದು ವಿಜಯ್​ ಹೇಳಿದ್ದಾರೆ. ಅವರು ಆರೋಗ್ಯ ಸದ್ಯ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಪಿಎಫ್​ಐ ಬ್ಯಾನ್​ ಮಾಡಿದ್ದನ್ನು ಸ್ವಾಗತಿಸುತ್ತಲೇ ಮತ್ತೊಂದು ಡಿಮಾಂಡ್​ ಇಟ್ಟ ರಾಜ್ಯ ಕಾಂಗ್ರೆಸ್​!

ಪರಸ್ಪರ ಮದ್ವೆಯಾಗಲು ನಿರ್ಧರಿಸಿದ್ದ ಬೆಂಗಳೂರಿನ ಶಾಲಾ ಬಾಲಕಿಯರು… ಇವರ ಕರುಣಾಜನಕ ಕಥೆ ಕೇಳಿದ್ರೆ ಕರುಳುಹಿಂಡುತ್ತೆ…

‘ನವ ಮುಸಲ್ಮಾನ’ರಿಂದ ಹಿಂದು ಯುವತಿಯರ ಟಾರ್ಗೆಟ್​! ದೇಶವ್ಯಾಪಿ ಹರಡಿದೆ ಜಾಲ, ಆಘಾತಕಾರಿ ಸಂಗತಿ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 14 =
Remember me
