ದೆಹಲಿ:ಹಿರಿಯ ಪತ್ರಕರ್ತರೂ ಆದ ರಾಜ್ಯಸಭೆಯ ಮಾಜಿ ಸದಸ್ಯ ಚಂದನ್ ಮಿತ್ರಾ(65) ಅವರು ಬುಧವಾರ ತಡರಾತ್ರಿ ದೆಹಲಿಯಲ್ಲಿ ನಿಧನರಾದರು. ತಂದೆ ಮೃತಪಟ್ಟ ಬಗ್ಗೆ ಅವರ ಪುತ್ರ ಕುಶನ್​ ಮಿತ್ರ ಟ್ವೀಟ್​ ಮೂಲಕ ತಿಳಿಸಿದ್ದಾರೆ.
‘ದಿ ಪಯೋನಿರ್’​ ಪತ್ರಿಕೆ ಸಂಪಾದಕರಾಗಿದ್ದ ಚಂದನ್​ ಮಿತ್ರಾ, ಕಳೆದ ಜೂನ್​ನಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಂಗ್ಲಭಾಷೆ ಮೇಲೆ ಹಿಡಿತ ಸಾಧಿಸಿದ್ದ ಚಂದನ್​, ರಾಜಕೀಯ ವರದಿಗಾರಿಕೆಯಲ್ಲಿ ಪಳಗಿದ್ದರು. ತಮ್ಮ ವರದಿಗಾರಿಕೆಯಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಎರಡು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.
Since it is already out there; Dad passed away late last night. He had been suffering for a while.
— Kushan Mitra (@kushanmitra)September 2, 2021

ಚಂದನ್ ಮಿತ್ರಾ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
Shri Chandan Mitra Ji will be remembered for his intellect and insights. He distinguished himself in the world of media as well as politics. Anguished by his demise. Condolences to his family and admirers. Om Shanti.
— Narendra Modi (@narendramodi)September 2, 2021

“ಚಂದನ್ ಮಿತ್ರ ಜೀ ಅವರು ತಮ್ಮ ಬುದ್ಧಿಶಕ್ತಿ ಮತ್ತು ಒಳನೋಟಗಳಿಂದ ನೆನಪಿನಲ್ಲಿ ಉಳಿಯುತ್ತಾರೆ. ಅವರು ಮಾಧ್ಯಮ ಹಾಗೂ ರಾಜಕೀಯ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು. ಅವರ ನಿಧನ ಸುದ್ದಿ ನೋವುಂಟು ಮಾಡಿದೆ. ಓಂ ಶಾಂತಿ” ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಮಗಳ ಪ್ರಿಯಕರನ ಕೊಂದು ಜೈಲು ಸೇರಿದ ಅಪ್ಪ-ಅಮ್ಮ! ಎಲ್ಲವನ್ನೂ ಕಳೆದುಕೊಂಡಾಕೆ ಕೊನೆಗೂ ಬದುಕಲಿಲ್ಲ

ಅವ್ರು ದೊಡ್ಡವ್ರು ಬೇಡವ್ವ.. ಅಂದ್ರೂ ಮದ್ವೆ ಆಗ್ತೀನಂತ ಹಠ ಹಿಡಿದು ಅವನೊಂದಿಗೇ ಬಾರದ ಲೋಕಕ್ಕೆ ಹೋಗಿಬಿಟ್ಲು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
