ಮುಂಬೈ:ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಸಚಿವ ಏಕನಾಥ್​ ಶಿಂಧೆ ನಡೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ರೆಸಾರ್ಟ್​ನಲ್ಲಿರುವ ಬಂಡಾಯ ಶಾಸಕರು ಉದ್ಧವ್​ ಠಾಕ್ರೆ ವಿರುದ್ಧ ಬಲಪ್ರದರ್ಶನ ತೋರಿಸಿದ್ದಾರೆ. ಠಾಕ್ರೆ ಕರೆದ ಸಭೆಗೂ ಗೈರಾಗಿದ್ದಾರೆ. ಉದ್ಧವ್​ ಠಾಕ್ರೆ ರಾಜೀನಾಮೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಏಕನಾಥ್​ ಶಿಂಧೆ ಮಹತ್ತರವಾದ ಡಿಮಾಂಡ್​ ಇಟ್ಟಿದ್ದಾರೆ.
ಶಿವಸೇನೆ ಪಕ್ಷದ ಚಿಹ್ನೆಯನ್ನೇ ಏಕನಾಥ್​ ಶಿಂಧೆ ಕೇಳಿದ್ದಾರೆ. ಆ ಮೂಲಕ ಬಾಳಾ ಸಾಹೇಬ್​ ಠಾಕ್ರೆ ಕಟ್ಟಿದ್ದ ಪಕ್ಷವನ್ನೇ ಹೈಜಾಕ್​ ಮಾಡಲಾಗುತ್ತಿದೆ. ಶಿವಸೇನೆ ಪಕ್ಷದ 56 ಶಾಸಕರಿದ್ದಾರೆ. ಈ ಪೈಕಿ ಶಿಂಧೆ ಬಳಿ 42 ಶಾಸಕರಿದ್ದಾರೆ. ಠಾಕ್ರೆ ಬಳಿ 14 ಶಾಸಕರಿದ್ದಾರೆ.
ಮಹಾ ಆಘಾಡಿ ಸರ್ಕಾರದಿಂದ ಹೊರ ಬರುವ ಹಾಗೂ ಉದ್ಧವ್​ ಠಾಕ್ರೆಯ ನಾಯಕತ್ವ ವಿರೋಧಿಸಿ ಶಿಂಧೆ ಬಂಡಾಯ ಎದ್ದಿದ್ದು, ಬೈ ಎಲೆಕ್ಷನ್​ಗೆ ಹೋಗುವ ಬಗ್ಗೆ ತೀರ್ಮಾನಿಸಿಲ್ಲ. ಶಿಂಧೆ ತಂಡ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಇದೀಗ ಶಿಂಧೆ ಅವರು ನಮ್ಮ ಕಡೆ ಹೆಚ್ಚಿನ ಶಾಸಕರಿದ್ದಾರೆ. ಹಾಗಾಗಿ ಶಿವಸೇನೆ ಪಕ್ಷದ ಚಿಹ್ನೆಯನ್ನ ನಮಗೇ ಕೊಡಬೇಕು ಎಂದು ಡಿಮಾಂಡ್​ ಮಾಡ್ತಿದ್ದಾರೆ.
ಮೈತ್ರಿ ಬಗ್ಗೆ ಸಿಎಂ ಉದ್ಧವ್​ ಠಾಕ್ರೆ ಜತೆ ನಾವು ಚರ್ಚಿಸೋಣ. 24 ತಾಸಿನೊಳಗೆ ಮಾತುಕತೆಗೆ ಬನ್ನಿ ಎಂದು ಬಂಡಾಯ ಶಾಸಕರಿಗೆ ಸಂಜಯ್​ ರಾವತ್​ ಆಹ್ವಾನಿಸಿದ್ದಾರೆ.
ಬೆಳಗಾವಿಯಲ್ಲಿ ತ್ರಿವಳಿ ಕೊಲೆ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ‌ಪ್ರವೀಣ್ ಭಟ್​ನನ್ನು ನಿರ್ದೋಷಿ ಎಂದ ಧಾರವಾಡ ಹೈಕೋರ್ಟ್

ಕೂಲಿ ಕೆಲಸಕ್ಕಾಗಿ ಆಂಧ್ರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ ಈಗ ಕೋಟ್ಯಧೀಶ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + three =
Remember me
