ನವದೆಹಲಿ:ಫೆಬ್ರವರಿ 14ರಂದು ನಡೆಯಬೇಕಿದ್ದ ಪಂಜಾಬ್​ ವಿಧಾನಸಭೆ ಚುನಾವಣೆ ಮತದಾನವನ್ನು ಕೇಂದ್ರ ಚುನಾವಣಾ ಆಯೋಗ 6 ದಿನ ಮುಂದೂಡಿದೆ. 117 ಕ್ಷೇತ್ರಗಳಿಗೂ ಫೆ.14ರ ಬದಲು ಒಂದೇ ಹಂತದಲ್ಲಿ ಫೆ.20ರಂದು ಮತದಾನ ನಡೆಯಲಿದೆ.
ಫೆ.16ಕ್ಕೆ ಗುರು ರವಿದಾಸ್​ ಜಯಂತಿ ಇದೆ. ಪಂಜಾಬ್​ ಜನಸಂಖ್ಯೆಯ ಶೇ.32ರಷ್ಟಿರುವ ಪರಿಶಿಷ್ಟ ಜಾತಿ ಸಮುದಾಯದವರು ಸೇರಿದಂತೆ ರಾಜಯದ ಬಹುತೇಕರು ಗುರು ರವಿದಾಸ್​ ಅವರ ಅನುಯಾಯಿಗಳು. ಹಾಗಾಗಿ ಅವರ ಜನ್ಮದಿನದ ಹಿನ್ನೆಲೆ ಪಂಜಾಬ್​ನಿಂದ ಲಕ್ಷಾಂತರ ಮಂದಿ ಉತ್ತರ ಪ್ರದೇಶದ ಬನಾರಸ್​ಗೆ ತೆರಳಿ ಗುರು ಜಯಂತಿ ಆಚರಿಸುತ್ತಾರೆ. ಪರಿಣಾಮ ಬಹುತೇಕರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಹಾಗಾಗಿ ಚುನಾವಣೆಯನ್ನ ಮುಂದೂಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ(ಸಂಯುಕ್ತ), ಸಿಎಂ ಚರಣ್​ಜಿತ್​ ಸಿಂಗ್​ ಚನ್ನಿ ಹಾಗೂ ಬಿಎಸ್​ಪಿ ಮನವಿ ಮಾಡಿತ್ತು. ಇದೀಗ ಈ ಮನವಿಯನ್ನು ಪರಿಗಣಿಸಿರುವ ಚುನಾವಣಾ ಆಯೋಗ, ಮತದಾನದ ದಿನಾಂಕ ಬದಲಿಸಿ ಆದೇಶ ಹೊರಡಿಸಿದೆ.
ಸ್ನಾನ ಮಾಡುವಾಗ ಗೀಸರ್​ಗೆ ತಾಯಿ-ಮಗಳು ಬಲಿ! ಪದೇಪದೆ ಸಂಭವಿಸುತ್ತಿದೆ ದುರಂತ, ಅಪಾಯದಿಂದ ಪಾರಾಗಲು ಇಲ್ಲಿವೆ ಉಪಯುಕ್ತ ಮಾಹಿತಿ

ಸೋಲದೇವನಹಳ್ಳಿ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟದ್ದೇ ಮಾಲೀಕನ ಪತ್ನಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

6 ವರ್ಷದ ಮಗನ ಜತೆ ತಡರಾತ್ರಿ ಗಂಡ ಆತ್ಮಹತ್ಯೆ! ಡೆತ್​ನೋಟ್​ನಲ್ಲಿದೆ ಪತ್ನಿ ಮತ್ತು ಎಲ್​ಐಸಿ ಏಜೆಂಟ್​ ಕೊಟ್ಟ ಕಾಟ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
