ನವದೆಹಲಿ:ವಿದ್ಯುತ್​ಚಾಲಿತ ದ್ವಿಚಕ್ರ ವಾಹನಗಳ (ಇ.ವಿ.) ಬ್ಯಾಟರಿಗಳು ಸ್ಫೋಟಿಸಿ ಜೀವ ಹಾನಿ ಆಗುತ್ತಿರುವ ಕಳವಳಕಾರಿ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇ.ವಿ. ಉತ್ಪಾದಕರು ಅವುಗಳನ್ನು ವಾಪಸ್​ ಪಡೆಯುವ ಒತ್ತಡಕ್ಕೆ ಸಿಲುಕಿದ್ದಾರೆ. ತನ್ನ 1,441 ಇಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಮಾರುಕಟ್ಟೆಯಿಂದ ವಾಪಸ್​ ಪಡೆಯುವುದಾಗಿ ಓಲಾ ಇಲೆಕ್ಟ್ರಿಕ್​ ಕಂಪನಿ ಪ್ರಕಟಿಸಿದೆ.
ಪುಣೆಯಲ್ಲಿ ಮಾರ್ಚ್​ 26ರಂದು ನಡೆದ ಬೆಂಕಿ ಅವಘಡ ಪ್ರಕರಣದ ತನಿಖೆ ನಡೆಯುತ್ತಿದ್ದು ಇದೊಂದು ಪ್ರತ್ಯೇಕಿತ ಘಟನೆ ಎಂಬುದು ಪ್ರಾಥಮಿಕ ಅಂದಾಜಿನಿಂದ ಗೊತ್ತಾಗಿದೆ ಎಂದು ಕಂಪನಿ ತಿಳಿಸಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಆ ನಿರ್ದಿಷ್ಟ ಬ್ಯಾಚ್​ನ ಎಲ್ಲ ಸ್ಕೂಟರ್​ಗಳನ್ನು ಪರಿಶೀಲಿಸಲಾಗುತ್ತದೆ. ಹಾಗಾಗಿ 1,441 ವಾಹನಗಳನ್ನು ಸ್ವಯಂಪ್ರೇರಿತವಾಗಿ ವಾಪಸ್​ ಪಡೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿಕೆಯೊಂದರಲ್ಲಿ ಓಲಾ ವಿವರಿಸಿದೆ. ಸರ್ವಿಸ್​ ಎಂಜಿನಿಯರ್​ಗಳು ಸ್ಕೂಟರ್​ಗಳನ್ನು ಪರಿಶೀಲಿಸಲಿದ್ದಾರೆ. ಬ್ಯಾಟರಿ ವ್ಯವಸ್ಥೆ, ಥರ್ಮಲ್​ ವ್ಯವಸ್ಥೆ ಹಾಗೂ ಸುರಕ್ಷತಾ ವ್ಯವಸ್ಥೆಗಳ ಸಮಗ್ರ ಪರೀಕ್ಷೆ ನಡೆಸಲಾಗುವುದು ಎಂದು ಕಂಪನಿ ವಿವರಿಸಿದೆ. ತನ್ನ ಬ್ಯಾಟರಿ ವ್ಯವಸ್ಥೆಯು ಭಾರತದ ಇತ್ತೀಚಿನ ಮಾನದಂಡವಾದ ಎಐಎಸ್​ 156ಕ್ಕೆ ಅನುಗುಣವಾಗಿ ಇದೆ. ಅದು ಐರೋಪ್ಯ ಸ್ಟಾಂಡರ್ಡ್​ ಇಸಿಇ 136ಕ್ಕೂ ಅನುಗುಣವಾಗಿದೆ ಎಂದು ಓಲಾ ಹೇಳಿದೆ.
ಸಮಿತಿ ರಚನೆ:ಇವಿಗಳ ಬ್ಯಾಟರಿಗಳು ಸ್ಫೋಟಗೊಳ್ಳುತ್ತಿರುವ ಹಾಗೂ ಅವುಗಳಿಗೆ ಬೆಂಕಿ ತಗಲುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರಿಶೀಲನಾ ಸಮತಿಯೊಂದನ್ನು ರಚಿಸಿದೆ. ಒಂದು ವೇಳೆ ಕಂಪನಿಗಳ ನಿರ್ಲಕ್ಷ್ಯವಿರುವುದು ಸಾಬೀತಾದರೆ ದಂಡ ವಿಧಿಸಲಾಗುವುದೆಂದು ಸರ್ಕಾರ ಎಚ್ಚರಿಸಿದೆ.
ಆಂಧ್ರದಲ್ಲಿ ಓರ್ವ ಸಾವು:ಇವಿಗಳ ಬ್ಯಾಟರಿ ಸ್ಫೋಟ ಪ್ರಕರಣಗಳು ಮುಂದುವರಿದಿದ್ದು, ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಇನ್ನೊಂದು ದಾರುಣ ಘಟನೆ ನಡೆದಿದೆ. ವಿಜಯವಾಡ ನಗರದಲ್ಲಿ ಇವಿ ಬ್ಯಾಟರಿ ಸ್ಫೋಟಿಸಿ 40 ವರ್ಷದ ವ್ಯಕ್ತಿ ಮೃತಪಟ್ಟು ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಇಬ್ಬರು ಮಕ್ಕಳೂ ಉಸಿರಾಟದ ತೊಂದರೆಗೆ ಒಳಗಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ. ಶಿವಕುಮಾರ್​ ಎನ್ನುವವರು ಶುಕ್ರವಾರವಷ್ಟೆ ಇ ಬೈಕ್​ ಖರೀದಿಸಿದ್ದು ಪ್ರತ್ಯೇಕಗೊಳಿಸಬಹುದಾದ (ಡಿಟ್ಯಾಚೇಬಲ್​) ಬ್ಯಾಟರಿಯನ್ನು ಚಾಜಿರ್ಂಗ್​ಗಾಗಿ ಬೆಡ್​ರೂಮ್​ನಲ್ಲಿ ಇಟ್ಟಿದ್ದರು. ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಬ್ಯಾಟರಿ ಸ್ಫೋಟಿಸಿ ದುರಂತ ಸಂಭವಿಸಿದೆ. ಕೆಲವು ದಿನಗಳ ಹಿಂದೆ ತೆಲಂಗಾಣದಲ್ಲಿ ಕೂಡ ಇದೇ ರೀತಿಯ ಅವಡದಿಂದ 80 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ತಮಿಳುನಾಡಿನಲ್ಲಿ ಕೂಡ ಇಂಥದ್ದೇ ಘಟನೆಯಲ್ಲಿ ತಂದೆ ಮತ್ತು ಮಗಳು ಸಾವಿಗೀಡಾಗಿದ್ದರು.
ಬೆಡ್​ ರೂಮಲ್ಲಿ ಎಲೆಕ್ಟ್ರಿಕ್​​ ಸ್ಕೂಟರ್​ನ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಚಿಂತಾಜನಕ… ಸ್ಕೂಟರ್​ ಖರೀದಿಸಿದ ಮರುದಿನವೇ ದುರಂತ

ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
