ಸೌಥಾಂಪ್ಟನ್​:ದ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ.
ಪಂದ್ಯದಲ್ಲಿ ಟಾಸ್​ ಜಯಿಸಿ ಮೊದಲು ಬ್ಯಾಟಿಂಗ್​ ಮಾಡಿದ ನಾಯಕ ರೋಹಿತ್​ ಶರ್ಮ ನೇತೃತ್ವದ ಭಾರತ ತಂಡ 8 ವಿಕೆಟ್​ಗೆ 198 ರನ್​ ಪೇರಿಸಿತು. ಇಂಗ್ಲೆಂಡ್​ ನಿಗದಿತ 20 ಓವರ್​ಗಳಿಗೆ 148 ರನ್​ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0ರ ಮುನ್ನಡೆ ಸಾದಿಸಿದೆ.
ಸಂಘಟಿತ ಬ್ಯಾಟಿಂಗ್​ ಹೋರಾಟ:ಸಂಘಟಿತ ಬ್ಯಾಟಿಂಗ್​ ಹೋರಾಟದ ಫಲವಾಗಿ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ ಬೃಹತ್​ ಸವಾಲು ನೀಡಿತ್ತು. ಉತ್ತಮ ಆರಂಭ ಪಡೆದರೂ ದಿಢೀರ್​ ಕುಸಿತ ಕಂಡ ಭಾರತ ತಂಡಕ್ಕೆ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ (51ರನ್​, 33 ಎಸೆತ, 6 ಬೌಂಡರಿ, 1 ಸಿಕ್ಸರ್​) ಅರ್ಧಶತಕದಾಟದ ಮೂಲಕ ನೆರವಾದರು. ಕೋವಿಡ್​ನಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್​ ಶರ್ಮ (24ರನ್​, 14 ಎಸೆತ, 5 ಬೌಂಡರಿ) ಆರಂಭಿಕ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿ ಗಮನಸೆಳೆದರು.
ಆರಂಭಿಕರನ್ನು ಕಳೆದುಕೊಂಡ ಬಳಿಕ ಜತೆಯಾದ ದೀಪಕ್​ ಹೂಡಾ (33ರನ್​, 17 ಎಸೆತ, 3 ಬೌಂಡರಿ, 2 ಸಿಕ್ಸರ್​) ಹಾಗೂ ಸೂರ್ಯಕುಮಾರ್​ ಯಾದವ್​ (39ರನ್​, 19 ಎಸೆತ, 4 ಬೌಂಡರಿ, 2 ಸಿಕ್ಸರ್​) ಜೋಡಿ 3ನೇ ವಿಕೆಟ್​ಗೆ ಬಿರುಸಿನ 43 ರನ್​ ಪೇರಿಸಿತು. ಹೂಡಾ ಅಬ್ಬರದ ಫಲವಾಗಿ ಭಾರತ ತಂಡ ಆರಂಭಿಕ 10 ಓವರ್​ಗಳಲ್ಲಿ 3 ವಿಕೆಟ್​ಗೆ 105 ರನ್​ ಪೇರಿಸಿತು. ಉತ್ತಮ ನಿರ್ವಹಣೆ ನೀಡುವ ಮೂಲಕ ಹೂಡಾ ಮೂರನೇ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಿಗಿಮಾಡಿಕೊಂಡರು. ಹೂಡಾ ನಿರ್ಗಮನದ ಬಳಿಕ ಸೂರ್ಯಕುಮಾರ್​ಗೆ ಜತೆಯಾದ ಹಾದಿರ್ಕ್​ ಪಾಂಡ್ಯ ಇಂಗ್ಲೆಂಡ್​ ಬೌಲರ್​ಗಳನ್ನು ಕಾಡಿದರು. ಈ ಜೋಡಿ 4ನೇ ವಿಕೆಟ್​ಗೆ ಬಿರುಸಿನ 37 ರನ್​ ಕಲೆಹಾಕಿತು. ಬಳಿಕ ಅಕ್ಷರ್​ ಪಟೇಲ್​ ಜತೆಗೂಡಿ ಹಾರ್ದಿಕ್​​ ಪಾಂಡ್ಯ ಇನಿಂಗ್ಸ್​ ಕಟ್ಟಿದರು. ಅರ್ಧಶತಕ ಸಿಡಿಸಿದ ಬೆನ್ನಲ್ಲೆ ಟಾಪ್ಲೆ ಎಸೆತದಲ್ಲಿ ಸಿಕ್ಸರ್​ ಸಿಡಿಸಲು ಯತ್ನಿಸಿ ಬ್ರೂಕ್​ಗೆ ಕ್ಯಾಚ್​ ನೀಡಿದರು. ಅಂತಿಮವಾಗಿ ಭಾರತ ತಂಡ 8 ವಿಕೆಟ್​ಗೆ 198 ರನ್​ ಪೇರಿಸಿತು. ಕಡೇ 5 ಓವರ್​ಗಳಲ್ಲಿ 4 ವಿಕೆಟ್​ ಕೈಚೆಲ್ಲಿ 41 ರನ್​ ಪೇರಿಸಲಷ್ಟೇ ಶಕ್ತವಾಯಿತು.
199 ರನ್​ಗಳ ಬೆನ್ನತ್ತಿದ ಇಂಗ್ಲೆಂಡ್​ ತಂಡಕ್ಕೆ ಭಾರತ ಬೌಲರ್ಸ್​​ ಆರಂಭದಲ್ಲೇ ಆಘಾತ ನೀಡಿದರು. ಭುವನೇಶ್ವರ್ ಕುಮಾರ್​ರ ಮೊದಲ ಎಸೆತದಲ್ಲೇ ಬಟ್ಲರ್ ಕ್ಲೀನ್‌ ಬೌಲ್ಡ್​ ಆದರು. ಡೇವಿಡ್​ ಮಲನ್ ಕೂಡ ಹೆಚ್ಚು ಹೊತ್ತು ಇರಲಿಲ್ಲ. ಸ್ಫೋಟಕ ಬ್ಯಾಟರ್‌ ಲಿವಿಂಗ್​​ಸ್ಟೋನ್ ಆರಂಭದಲ್ಲೇ ಔಟಾದರು. ಹ್ಯಾರಿ ಬ್ರೊಕ್ ಮತ್ತು ಮೊಯಿನ್ ಅಲಿ ಜತೆಯಾಟದಲ್ಲಿ 61 ರನ್​ ಪೇರಿಸಿದರು. ನಂತರ ಒಬ್ಬರ ಹಿಂದೆ ಒಬ್ಬರು ಔಟಾದರು. ಅಂತಿಮವಾಗಿ 148 ರನ್​ ಗಳಿಸಿದ ಇಂಗ್ಲೆಂಡ್​ ತಂಡ ಸೋಲುಕಂಡಿತು.
ಸೆಮಿಪೈನಲ್​ನಿಂದ ಹಿಂದೆ ಸರಿದ ರಾಫೆಲ್ ನಡಾಲ್: ಕಿಬ್ಬೊಟ್ಟೆ ನೋವಿಂದ ಸ್ಪೇನ್​ ದಿಗ್ಗಜನ ಕನಸು ಭಗ್ನ

ಜಪಾನ್​ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ, ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fourteen =
Remember me
