ಬೆಂಗಳೂರು:ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಸಾಕುಮಗ ವಿ.ಎನ್​.ಸುಧಾಕರನ್​ಗೆ ಇಂದು(ಶನಿವಾರ) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.
ಜಯಲಲಿತಾರ ಆಪ್ತೆ ಶಶಿಕಲಾಗೂ ಮೊದಲೇ ಬಿಡುಗಡೆಯಾಗಬೇಕಿದ್ದ ಸುಧಾಕರನ್​​, 10 ಕೋಟಿ ರೂಪಾಯಿ ದಂಡ ಕಟ್ಟದೆ ಹೆಚ್ಚುವರಿಯಾಗಿ 1 ವರ್ಷ ಜೈಲು ವಾಸ ಅನುಭವಿಸಿ ಇದೀಗ ಬಿಡುಗಡೆಯಾಗಿದ್ದಾರೆ.ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ 2017ರಲ್ಲಿ ಜೈಲು ಶಿಕ್ಷೆ ಹಾಗೂ ತಲಾ 10 ಕೋಟಿ ದಂಡ ಕಟ್ಟುವ ಶಿಕ್ಷೆಗೆ ಚಿನ್ನಮ್ಮ, ಇಳವರೆಸಿ, ಸುಧಾಕರನ್​ ಗುರಿಯಾಗಿದ್ದರು. ಕಳೆದ ವರ್ಷ ಜೈಲಿಂದ ಬಿಡುಗಡೆಯಾದ ಚಿನ್ನಮ್ಮ ಶಶಿಕಲಾ ಮತ್ತು ಇಳವರೆಸಿ ಇಬ್ಬರೂ ದಂಡದ ಹಣ ಪಾವತಿಸಿದ್ದರು.
ಆದರೆ, ಸುಧಾಕರನ್​ ಅವರ ದಂಡದ ಹಣ ಪಾವತಿ ಆಗಿರಲಿಲ್ಲ. ಅತ್ತ ಜೈಲಿಂದ ಬಿಡುಗಡೆಯಾದ ಬಳಿಕ ಚಿನ್ನಮ್ಮ, ಸುಧಾಕರನ್​ರನ್ನು ಭೇಟಿ ಮಾಡಿಲ್ಲ, ದೂರವಾಣಿ ಮೂಲಕ ಭರವಸೆ ತುಂಬಲಾದರೂ ಕರೆ ಮಾಡಿರಲಿಲ್ಲ. ಅತ್ತ ಸುಧಾಕರನ್​ರ ಕುಟುಂಬಸ್ಥರ ಭೇಟಿಯೂ ಇರಲಿಲ್ಲ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇಂದು ಬಿಡುಗಡೆಯಾದ ಸುಧಾಕರನ್​ರನ್ನು ಅಭಿಮಾನಿಗಳು ಹೂ ಮಾಲೆ ಹಾಕಿ ಸ್ವಾಗತಿಸಿದ್ದಾರೆ.
ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ

ಪರಸ್ತ್ರೀ ಜತೆ ಗ್ರಾಪಂ ಅಧ್ಯಕ್ಷೆ ಗಂಡನ ಕಾಮದಾಟ! ವಾಟ್ಸ್ಆ್ಯಪ್​ ಗ್ರೂಪ್​ಗೆ ತನ್ನದೇ ಫೋಟೋ ತಾನೇ ಹಾಕಿಕೊಂಡ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + three =
Remember me
