ಡೆಹ್ರಾಡೂನ್​:78 ವರ್ಷದ ವೃದ್ಧೆಯೊಬ್ಬರು ತನ್ನ ಹೆಸರಲ್ಲಿದ್ದ ಬರೋಬ್ಬರಿ 50 ಲಕ್ಷ ಬೆಲೆ ಬಾಳುವ ಆಸ್ತಿಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ಉಚಿತವಾಗಿ ಕೊಟ್ಟಿದ್ದಾರೆ!
ಹೌದು, ಇಂತಹ ಘಟನೆ ಉತ್ತರಾಖಂಡದ ಡೆಹ್ರಾಡೂನ್​ನಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ, ನಿವೃತ್ತ ಶಿಕ್ಷಕಿ ಪುಷ್ಪಾ ಮುಂಜಿಯಾಲ್​ ಎಂಬುವರು ರಾಹುಲ್​ ಗಾಂಧಿ ಹೆಸರಿಗೆ ಆಸ್ತಿ ವರ್ಗಾಯಿಸಿದ್ದಾರೆ. ಇದರ ಜತೆಗೆ 10 ತೊಲೆ ಬಂಗಾರವನ್ನೂ ರಾಹುಲ್​ ಗಾಂಧಿಗೆ ಕೊಟ್ಟಿದ್ದಾರೆ. ಕಾರಣ ಏನು ಗೊತ್ತಾ?
ವೃದ್ಧೆ ಪುಷ್ಪಾ ಮುಂಜಿಯಾಲ್​ಗೆ ರಾಹುಲ್​ ಗಾಂಧಿ ಅಂದ್ರೆ ತುಂಬಾ ಪ್ರೀತಿ, ಅಭಿಮಾನ, ಗೌರವ. ಡೆಹ್ರಾಡೂನ್​ ಕೋರ್ಟ್​ಗೆ ವಿಲ್​ ಸಲ್ಲಿಸಿ ತನ್ನ ಆಸ್ತಿಯ ಮಾಲೀಕತ್ವವನ್ನು ರಾಹುಲ್​ಗೆ ವರ್ಗಾಯಿಸಿ ‘ಮಗನಂತಿರುವ ರಾಹುಲ್​ಗೆ ನನ್ನ ಆಸ್ತಿ ಸೇರಬೇಕು. ಒಳ್ಳೆಯ ಕೆಲಸಕ್ಕೆ ಬಳಕೆಯಾಗಲಿ’ ಎಂದು ಆಶೀಸಿದ್ದಾರೆ.

‘ರಾಹುಲ್​ರ ಚಿಂತನೆಗಳಿಂದ ಪ್ರಭಾವಿತಳಾಗಿರುವ ನಾನು ನನ್ನ ಆಸ್ತಿಪಾಸ್ತಿಯನ್ನು ಅವರಿಗೆ ವರ್ಗಾಯಿಸಿದ್ದೇನೆ. ರಾಹುಲ್ ​ಅವರಂಥವರು ಹಾಗೂ ಅವರು ಅನುಸರಿಸುವಂಥ ತತ್ವಗಳು ದೇಶಕ್ಕೆ ಅತ್ಯಗತ್ಯ’ ಎಂದು ವೃದ್ಧೆ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಪ್ರೀತಮ್‌ ಸಿಂಗ್‌ ಅವರ ನಿವಾಸಕ್ಕೆ ತೆರಳಿದ ಪುಷ್ಪಾ ಅವರು ಆಸ್ತಿ ಪತ್ರವನ್ನು ಕೊಟ್ಟು ರಾಹುಲ್‌ಗೆ ಹಸ್ತಾಂತರಿಸುವಂತೆ ಹೇಳಿದರು.
ಮಿದುಳಿನ ರಕ್ತನಾಳ ಛಿದ್ರಛಿದ್ರ… ಜಿಮ್​ನಲ್ಲೇ ಮೃತಪಟ್ಟ ಮಹಿಳೆಯ ಮರಣೋತ್ತರ ವರದಿಯಲ್ಲಿದೆ ಸ್ಫೋಟಕ ಮಾಹಿತಿ

ಢಮರುಗ ಯಾರಿಗಾದ್ರೂ ಕಿರಿಕಿರಿ ಮಾಡಿದ್ಯಾ? ಎನ್ನುತ್ತಲೇ ಧ್ವನಿವರ್ಧಕ ವಿವಾದ ಇತ್ಯರ್ಥಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್​ಡಿಕೆ

ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ ಆಗಿದ್ದವ ಇದ್ದಕ್ಕಿದ್ದಂತೆ ಏನಾದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + five =
Remember me
