ಸೂರತ್​:ರಸ್ತೆಯಲ್ಲಿ ಹೋಗುತ್ತಿದ್ದ ಆಂಬುಲೆನ್ಸ್​ನಲ್ಲಿ ಬರೋಬ್ಬರಿ 25.80 ಕೋಟಿ ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿದ್ದು, ಪೊಲೀಸರೇ ಶಾಕ್​ ಆಗಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸುವ ಮಹತ್ತರ ಕಾರ್ಯಕ್ಕೆಂದು ಇರುವ ಆಪದ್ಬಾಂಧವ ಆಂಬುಲೆನ್ಸ್​ ಅನ್ನು ವಂಚಕರು ನಕಲಿ ನೋಟು ರವಾನೆ ಬಳಸಿಕೊಂಡಿದ್ದಾರೆ. ನಕಲಿ ನೋಟುಗಳನ್ನು ರವಾನಿಸುವಾಗ ಪೊಲೀಸರಿಗೆ ಅನುಮಾನ ಬಾರದಂತೆ ನೋಡಿಕೊಳ್ಳಲು ಆಂಬುಲೆನ್ಸ್​ ಬಳಸಿದ್ದಾರೆ.
ಎಲ್ಲವೂ 2 ಸಾವಿರ ರೂಪಾಯಿ ಮುಖಬೆಲೆಯ ನಕಲಿ ನೋಟುಗಳಾಗಿದ್ದು, 6 ಪೆಟ್ಟಿಗೆಯಲ್ಲಿ ಒಟ್ಟು 1290 ನೋಟಿನ ಕಂತೆಗಳು ಸಿಕ್ಕಿವೆ. ಈ ಪ್ರಕರಣ ಗುಜರಾತ್​ ರಾಜ್ಯದಲ್ಲಿ ಬೆಳಕಿಗೆ ಬಂದಿದೆ.
Surat, Gujarat |On basis of inputs received by Kamrej police, an ambulance was intercepted on Ahmedabad-Mumbai road. On questioning driver & checking vehicle, 6 cartons containing 1290 packets of Rs 2000 counterfeit notes worth Rs 25.80 crores, was found: Hitesh Joysar, SP Ruralpic.twitter.com/wWiItpmQpa
— ANI (@ANI)September 29, 2022

ಅಹಮದಾಬಾದ್-ಮುಂಬೈ ರಸ್ತೆಯಲ್ಲಿ ಗುರುವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಆಂಬುಲೆನ್ಸ್ ಅನ್ನು ತಡೆದ ಕಾಮ್ರೇಜ್​ ಠಾಣೆ ಪೊಲೀಸರು ತಪಾಸಣೆ ಮಾಡಿದರು. ಅ ವೇಳೆ ಆಂಬುಲೆನ್ಸ್​ ಒಳಗೆ ನಕಲಿ ನೋಟು ಪತ್ತೆಯಾಗಿವೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಹಿತೇಶ್ ಜೋಯ್ಸರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − two =
Remember me
