|ಎಸ್.ರಾಜೇಂದ್ರ ಪ್ರಸಾದ್ಕುಲಪತಿ, ಕೃಷಿ ವಿವಿ, ಬೆಂಗಳೂರು
ಸುಸ್ಥಿರ ಅಭಿವೃದ್ಧಿ ಮತ್ತು ಕೃಷಿ ರಂಗದ ಬೆಳವಣಿಗೆಗೆ ಇಂಬು ನೀಡುವ ಬಜೆಟ್ ಇದಾಗಿದೆ. ವರ್ತಮಾನದ ಸಮಸ್ಯೆಗಳ ಪರಿಹಾರದ ಜತೆಗೆ ಭವಿಷ್ಯದ ದೂರದೃಷ್ಟಿಯನ್ನು ಇದು ಹೊಂದಿರುವುದು ಗಮನಾರ್ಹ. ಹೊಸ ಘೋಷಣೆಗಳ ಪರಿಣಾಮ ಕೃಷಿಯಲ್ಲಿ ಮೂಲಸೌಕರ್ಯ ವಿಸ್ತರಣೆಗೆ ಅನುಕೂಲವಾಗಲಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರಮುಖ ಆಹಾರ ಬೆಳೆಗಳಾದ ಭತ್ತ ಮತ್ತು ಗೋಧಿ ಬೆಳೆಗಳಿಗೆ 2.37 ಲಕ್ಷ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದರಿಂದ ಇನ್ನೂ ಹೆಚ್ಚು ಆಹಾರ ಬೆಳೆಗಳನ್ನು ಕೃಷಿಕರು ಬೆಳೆಯಲು ಪೋ›ತ್ಸಾಹಿಸಿದಂತಾಗುತ್ತದೆ. 2023 ಅನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ವೆಂದು ಘೊಷಿಸಲಾಗಿದ್ದು, ಇದಕ್ಕೆ ಪೂರಕವಾಗಿ ಸಿರಿಧಾನ್ಯ ಕೃಷಿಗೆ ಅದರಲ್ಲೂ ವಿಶೇಷವಾಗಿ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಒತ್ತು ನೀಡಲಾಗಿದೆ. ಇದರಿಂದ ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿರುವ ಹಾಗೂ ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುತ್ತಿರುವ ನಮ್ಮ ರಾಜ್ಯಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.
ಪ್ರಸ್ತುತ ರಾಷ್ಟ್ರವು ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು ಇದರಿಂದ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ಮನಗಂಡು ಎಣ್ಣೆ ಕಾಳುಗಳ ಉತ್ಪಾದನೆಗೆ ಉತ್ತೇಜಿಸಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಈಗಾಗಲೇ ಅಭಿವೃದ್ಧಿಪಡಿಸಿರುವ ಸುಧಾರಿತ ಎಣ್ಣೆ ಕಾಳುಗಳ ತಳಿ ಸಂಕರಣಗಳನ್ನು ಹೆಚ್ಚು ಬೆಳೆಯಲು ಕೃಷಿಕರನ್ನು ಪೋ›ತ್ಸಾಹಿಸಬೇಕಾಗಿದೆ.
ಕೃಷಿಯಲ್ಲಿ ನವೋದ್ಯಮಗಳಿಗೆ ನಬಾರ್ಡ್ ಸಹಯೋಗದೊಂದಿಗೆ ಅವಶ್ಯಕ ಆರ್ಥಿಕ ನೆರವನ್ನು ಪೂರೈಸಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಯುವಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಕೃಷಿಯಲ್ಲಿ ಕಂಡುಬರುತ್ತಿರುವ ಕಾರ್ವಿುಕರ ಸಮಸ್ಯೆ ನೀಗಿಸಲು ಯಾಂತ್ರೀಕರಣ ಅನಿವಾರ್ಯವಾಗಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಮುಂಗಡಪತ್ರದಲ್ಲಿ ಕಿಸಾನ್ ಡ್ರೋನ್​ಗಳ ಬಳಕೆಗೆ ಒತ್ತು ನೀಡಿದೆ. ಇದರಿಂದ ಬೆಳೆ ವಿಶ್ಲೇಷಣೆ ಕುರಿತಾದ ನಿಖರ ಮಾಹಿತಿ, ಕೃಷಿ ಜಮೀನುಗಳ ಡಿಜಿಟಲ್ ದಾಖಲೀಕರಣ ಹಾಗೂ ರಾಸಾಯನಿಕಗಳ ಸಿಂಪರಣೆಗೂ ನೆರವಾಗಲಿದೆ.
ಕೃಷಿ ಶಿಕ್ಷಣದಲ್ಲಿ ನೈಸರ್ಗಿಕ ಕೃಷಿ, ಸಾವಯವ ಕೃಷಿ, ಆಧುನಿಕ ಕೃಷಿ, ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಕುರಿತಾದ ಪಠ್ಯಕ್ರಮ ಅಳವಡಿಸಲು ಒತ್ತು ನೀಡಲಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಹಲವು ಸಂಶೋಧನೆಗಳನ್ನು ಯಶಸ್ವಿಯಾಗಿ ಕೈಗೊಂಡಿದೆ. ಅವುಗಳನ್ನು ಆಧರಿಸಿ ಸೂಕ್ತ ಪಠ್ಯಕ್ರಮ ರೂಪಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಉತ್ಸುಕವಾಗಿದೆ.
ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − ten =
Remember me
