ಹೈದರಾಬಾದ್​:ದೇಶದ ಬಹುಪಾಲು ಜನರು ಉತ್ತಮ ಶಿಕ್ಷಣ ಪಡೆಯಬೇಕು, ಸರ್ಕಾರಿ ಉದ್ಯೋಗ ಗಿಟ್ಟಿಸಬೇಕು ಮತ್ತು ಸಮಾಜದಲ್ಲಿ ಗೌರವ ಪಡೆಯಬೇಕು ಎಂಬ ಹಂಬಲವನ್ನು ಹೊಂದಿರುತ್ತಾರೆ. ಆದರೆ, ಸರ್ಕಾರಿ ಕೆಲಸ ಪಡೆಯುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ಅವಿರತ ಪ್ರಯತ್ನ ಮಾಡಬೇಕು.
ಸಾಮಾನ್ಯವಾಗಿ ಸರ್ಕಾರಿ ಕೆಲಸಗಳಿಗೆ ನೋಟಿಫಿಕೇಷನ್​​ಗಳು ಬರುವುದೇ ಕಡಿಮೆ. ಅದರಲ್ಲೂ ಒಂದು ಉದ್ಯೋಗಕ್ಕೆ ಸಾವಿರಾರು ಮಂದಿ ಪೈಪೋಟಿ ನೀಡುತ್ತಾರೆ. ಕೆಲವರು ಅರ್ಧದಲ್ಲೇ ಸರ್ಕಾರಿ ಕೆಲಸದ ಮೇಲಿನ ತಮ್ಮ ಆಸೆಯನ್ನು ಕೈಬಿಟ್ಟರೆ, ಇನ್ನು ಕೆಲವರು ಎಷ್ಟೇ ವಿಫಲರಾದರೂ ತಮ್ಮ ಗುರಿ ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ರೈತನ ಮಗಳೊಬ್ಬಳಿಗೆ ಏಕಕಾಲದಲ್ಲಿ ಮೂರು ಕೆಲಸ ಸಿಕ್ಕಿದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು.
ಹೌದು, ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಕೊಡಿಮ್ಯಾಲ ಮಂಡಲದ ಚೆಪ್ಯಾಲ ಗ್ರಾಮದ ಮುದುಗಂಪಳ್ಳಿ ಚಂದ್ರಯ್ಯ-ಭಾರತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು. ಇತ್ತೀಚೆಗಷ್ಟೆ ಹಿರಿಯ ಮಗಳು ಶ್ರವತಿ ಮದುವೆ ಮಾಡಲಾಗಿದೆ. ಎರಡನೇ ಮಗಳು ಜಯಾ ಮೊದಲಿನಿಂದಲೂ ವ್ಯಾಸಂಗದ ಕಡೆ ಗಮನ ಹರಿಸಿದ್ದಾರೆ. ಅಲ್ಲದೆ, ಎಲ್ಲದರಲ್ಲೂ ಪ್ರಥಮ ದರ್ಜೆಯಲ್ಲಿ ಪಾಸ್​ ಆಗುತ್ತಿದ್ದಳು.
ಜಯಾ ಅವರು 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ಬಸರಾದ ಐಐಐಟಿ ಕಾಲೇಜಿನಲ್ಲಿ ಸೀಟು ಪಡೆದರು. ಅಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಗೇಟ್​ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದರು. ಹೈದರಾಬಾದ್‌ನ ಜೆಎನ್‌ಟಿಯುನಲ್ಲಿ ಎಂಟೆಕ್ ಮುಗಿಸಿದ್ದಾರೆ. ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಜಯಾ, ಇತ್ತೀಚೆಗೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಎಇಇ, ಪುರಸಭೆ ಟೌನ್ ಪ್ಲಾನಿಂಗ್ ಆಫೀಸರ್ ಮತ್ತು ಅಸಿಸ್ಟೆಂಟ್ ಇಂಜಿನಿಯರಿಂಗ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಎಇಇ ಕೆಲಸಕ್ಕೆ ಸೇರುವುದಾಗಿ ಜಯಾ ತಿಳಿಸಿದ್ದಾರೆ.
ವಿದ್ಯಾಭ್ಯಾಸಕ್ಕೆ ಬಡತನ ಅಡ್ಡಿಯಲ್ಲ, ಪರಿಶ್ರಮವಿದ್ದರೆ ಎಂತಹ ಯಶಸ್ಸು ಬೇಕಾದರೂ ಸಾಧಿಸಬಹುದು ಎನ್ನುತ್ತಾರೆ ಈ ರೈತನ ಮಗಳು. ಚಿಕ್ಕಂದಿನಿಂದಲೂ ಮಗಳು ಎಲ್ಲದರಲ್ಲೂ ಯಶಸ್ವಿಯಾಗಿದ್ದು, ಒಂದೇ ಬಾರಿಗೆ ಮೂರು ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ ಎಂದು ಜಯ ಅವರ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ವಿರಾಟ್​ ಕೊಹ್ಲಿ ಬಗ್ಗೆ ಈ ಹಿಂದೆ ಆಡಿದ್ದ ಮಾತನ್ನು ನೆನಪು ಮಾಡಿದ್ದಕ್ಕೆ ಗರಂ ಆದ ಮೃನಾಲ್​ ಠಾಕೂರ್​!

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:eleven + nine =
Remember me
