ಭೋಪಾಲ್​:ಜ್ವರದಿಂದ ಬಳಲುತ್ತಿದ್ದ ಯುವಕನೊಬ್ಬ ತನಗೆ ಕರೊನಾ ಇರಬಹುದೆಂದು ಆತಂಕಗೊಂಡು ಸೀಮೆಎಣ್ಣೆ ಕುಡಿದು ಬದುಕನ್ನೇ ದುರಂತ ಅಂತ್ಯವಾಗಿಸಿಕೊಂಡ ಘಟನೆ ಭೋಪಾಲ್‌ನ ಅಶೋಕ ಗಾರ್ಡನ್ ಪ್ರದೇಶದಲ್ಲಿ ಸಂಭವಿಸಿದೆ. ಈತ ಸೀಮೆಎಣ್ಣೆ ಕುಡಿದದ್ದು ಸಾಯಲು ಅಲ್ಲ, ಬದುಕುವ ಆಸೆಯಿಂದ… ಈತ ಬದುಕಿದ್ದರೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ ಮನೆಯಲ್ಲಿ ಕಳೆಗಟ್ಟಬೇಕಿತ್ತು.
ಹೌದು, ಕರೊನಾ ಮೇಲಿನ ಭಯಕ್ಕೆ ಕೆಲವರು ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ಹಲವರು ಸೋಂಕು ಹೋಗಿಸಲು ಯಾರು ಏನೇ ಹೇಳಿದ್ರು ಅದನ್ನೆಲ್ಲ ಮಾಡುತ್ತಿದ್ದಾರೆ. ಇಲ್ಲೂ ಇದೇ ಆಗಿದ್ದು. ಜ್ವರದಿಂದ ಬಳಲುತ್ತಿದ್ದ ಮಹೇಂದ್ರ(30)ಗೆ ಸೀಮೆಎಣ್ಣೆ ಕುಡಿದರೆ ಕರೊನಾ ಗುಣಮುಖವಾಗುತ್ತೆ ಎಂದು ಈತನ ಸ್ನೇಹಿತ ಹೇಳಿದ್ದ. ಅದನ್ನೇ ನಂಬಿ ಮಹೇಂದ್ರ ಮೇ 12ರಂದು ಸೀಮೆಎಣ್ಣೆ ಕುಡಿದಿದ್ದ.ಇದನ್ನೂ ಓದಿರಿಕರೊನಾಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಲ್ಲಿ 10 ಲಕ್ಷ ರೂ. ಡೆಪಾಸಿಟ್​! ಸಂಕಷ್ಟಕ್ಕೆ ಮಿಡಿದ ಆಂಧ್ರ ಸರ್ಕಾರ
ಇದಾದ ಬಳಿಕ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೂಡಲೇ ಕುಟುಂಬಸ್ಥರು ಮಹೇಂದ್ರನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಈತ ಬದುಕಲೇ ಇಲ್ಲ. ಸಾವು-ಬದುಕಿನ ನಡುವೆ 4 ದಿನ ಹೋರಾಡಿ ಕೊನೆಯುಸಿರೆಳೆದ. ವಿಪರ್ಯಾಸ ಅಂದ್ರೆ ಮಹೇಂದ್ರನಿಗೆ ಕರೊನಾ ಸೋಂಕು ಇರಲಿಲ್ಲ. ಕರೊನಾ ವರದಿ ನೆಗೆಟಿವ್​ ಬಂದಿತ್ತು. ವರದಿ ಬರುವ ಮುನ್ನವೇ ಸೀಮೆಎಣ್ಣೆ ಕುಡಿದು ದುರಂತ ಅಂತ್ಯಕಂಡಿದ್ದಾನೆ.
ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

ಕರೊನಾ ಸೋಂಕಿನಿಂದ ಸತ್ತವನ ಮೃತದೇಹ ತಬ್ಬಿಕೊಂಡು ತುಟಿಗೆ ಮುತ್ತಿಟ್ಟ ಭೂಪ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − three =
Remember me
