ಮೋತಿಹಾರಿ:40 ದಿನದ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ! ಐದು ಲಕ್ಷ ರೋಗಿಗಳ ಪೈಕಿ ಒಬ್ಬರಲ್ಲಿ ಇಂತಹ ವಿರಳ ಪ್ರಕರಣ ಬಿಹಾರದ ಮಗುವಿನಲ್ಲಿ ಕಂಡುಬಂದಿದೆ.
ಮಗುವಿನ ಹೊಟ್ಟೆ ಉಬ್ಬರಿಸಿದೆ, ಸರಿಯಾಗಿ ಮೂತ್ರ ವಿಸರ್ಜನೆ ಮಾಡುತ್ತಿಲ್ಲ ಎಂದು ಆತಂಕಗೊಂಡ ಪಾಲಕರು ಮಗುವನ್ನ ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯರು ಪರೀಕ್ಷಿಸಿದಾಗ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆದಿರುವುದು ಪತ್ತೆಯಾಗಿದೆ ಎಂದು ಬಿಹಾರದ ಮೋತಿಹಾರಿಯ ರಹಮಾನಿಯಾ ವೈದ್ಯಕಿಯ ಕೇಂದ್ರದ ಮೂಲಗಳು ತಿಳಿಸಿವೆ.
ಹೊಟ್ಟೆ ಉಬ್ಬಿದ ಕಾರಣ ಮಗುವಿಗೆ ಸರಿಯಾಗಿ ಮೂತ್ರ ವಿಸರ್ಜಿಸಲಾಗುತ್ತಿಲ್ಲ ಎಂದು ಪಾಲಕರು ವೈದ್ಯರಿಗೆ ತಿಳಿಸಿದ್ದರು. ಹೊಟ್ಟೆಯ ಉಬ್ಬುವಿಕೆ ಮತ್ತು ಮೂತ್ರದ ನಿಲುಗಡೆಗೆ ಕಾರಣ ಪತ್ತೆ ಹಚ್ಚಲು ಡಾ. ತಬ್ರೇಜ್​ ಅಜೀಜ್​ ಮಗುವಿಗೆ ಕಂಪ್ಯೂಟೆಡ್​ ಟೊಮೊಗ್ರಫಿ (ಇಖ) ಸ್ಕ್ಯಾನ್​ ಮಾಡಿಸುವಂತೆ ಸೂಚಿಸಿದರು. ಇದರ ಫಲಿತಾಂಶದಲ್ಲಿ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳೆದಿರುವುದು ಕಂಡು ವೈದ್ಯರ ತಂಡ ಅಚ್ಚರಿಗೊಂಡಿದೆ.
ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ “ಫೋಟಸ್​ ಇನ್​ ಫೆಟೂ” ಅಥವಾ ”ಮಗುವಿನ ಹೊಟ್ಟೆಯಲ್ಲಿ ಭ್ರೂಣದ ಉಪಸ್ಥಿತಿ” ಎನ್ನಲಾಗುತ್ತದೆ. ಐದು ಲಕ್ಷ ರೋಗಿಗಳ ಪೈಕಿ ಒಬ್ಬರಿಗೆ ಮಾತ್ರ ಸಂಭವಿಸುವ ವಿರಳ ಪ್ರಕರಣ ಇದು. ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣ ಹೊರತೆಗೆಯಲಾಗಿದೆ. ಮಗು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಡಾ.ತಬ್ರೇಜ್​ ವಿವರಿಸಿದ್ದಾರೆ.
ಮತ್ತೆ ಕೈ ತಪ್ಪಿದ ಟಿಕೆಟ್​: ಕಾಂಗ್ರೆಸ್​ ನಾಯಕರ ವಿರುದ್ಧ ಸಿಡಿದೆದ್ದ ಮುದ್ದಹನುಮೇಗೌಡ, ಕುಣಿಗಲ್​ನಲ್ಲಿ ಸ್ಪರ್ಧೆ ಖಚಿತ

ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ BMW ಕಾರು ಪತ್ತೆ! ರಾತ್ರಿ ನಾನೇ ನೀರಲ್ಲಿ ಮುಳುಗಿಸಿದೆ ಎಂದ ಮಾಲೀಕ… ಏಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 17 =
Remember me
