ನವದೆಹಲಿ:ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆಯೇ ಯುವಕ-ಯುವತಿ ಕಾದಾಟಕ್ಕೆ ನಿಂತರೆ ಪ್ರಯಾಣಿಕರಿಗೆ ಹೇಗೆ ಅನ್ನಿಸಿರಬಹುದು. ಆದರೆ ಇಲ್ಲಿ ಪ್ರಯಾಣಿಕರು ಉಚಿತ ಮನರಂಜನೆ ಪಡೆದಿದ್ದಂತೂ ಸತ್ಯ.
ಈ ಜೋಡಿಯೊಂದು ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಯುವತಿಗೆ ರೇಗಿಸಿದ್ದು, ಕೂಡಲೇ ಕೆಂಡಾಮಂಡಲವಾದ ಯುವತಿ ಆತನನ್ನು ಕಪಾಳಮೋಕ್ಷ ಮಾಡಿದ್ದಾಳೆ. ಅಂದಹಾಗೆ ಈ ಇಬ್ಬರು ಯಾವ ವಿಷಯಕ್ಕೆ ಜಗಳವಾಡಿರಬಹುದು ಎಂಬ ಅನುಮಾನ ಮೂಡುವುದು ಸಹಜ.
ನನ್ನ ತಾಯಿಗೆ ಹೇಳುತ್ತೇನೆ, ನಿನ್ನಂತ ಬಾಯ್​ಫ್ರೆಂಡ್​ ಯಾವ ಹೆಣ್ಣಿಗೂ ಸಿಗಬಾರದು ಎಂದು ಹೇಳುವ ಮೂಲಕ ಆತನೊಂದಿಗೆ ಜಗಳಕ್ಕೆ ನಿಲ್ಲುತ್ತಾಳೆ. ಆತನೂ ಸ್ವಲ್ಪ ಕ್ಷಣ ಸುಮ್ಮನಿದ್ದು, ನಂತರ ಆಕೆಯೊಂದಿಗೆ ಜಗಳಕ್ಕೆ ನಿಲ್ಲುತ್ತಾನೆ.
ಆಕೆ ಸಾವಿರ ರೂ.ಬೆಲೆಯ ಟೀ ಶರ್ಟ್​ ಖರೀದಿಸಿದ್ದಳು, ಆದರೆ ಆ ಯುವಕನಿಗೆ ಅದು ಇಷ್ಟವಾಗಿರಲಿಲ್ಲ. ಇದನ್ನೇ ಅಣಕಿಸಿದ್ದೇ ಯುವತಿ ಕೋಪಕ್ಕೆ ಕಾರಣವಾಗಿದೆ. ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡು, ನಂತರ ತಮ್ಮ ನಿಲ್ದಾಣ ಬಂದ ಕೂಡಲೇ ಹೊರಗೆ ಹೆಜ್ಜೆ ಹಾಕಿದ್ದಾರೆ.
https://twitter.com/Kartik_sharmaji/status/1546731123585167360?s=20&t=sHswDH_oxY2e9o4jZ0p9bg
ಸದ್ಯ ಈ ವಿಡಿಯೋ ಸಹ ಪ್ರಯಾಣಿಕನೊಬ್ಬ ವಿಡಿಯೋ ಮಾಡಿದ್ದು, ತಮ್ಮ ಟ್ವಿಟ್ಟರ್​ನಲ್ಲಿ ಉಚಿತ ಮನರಂಜನೆ ಎಂಬ ಶೀರ್ಷಿಕೆಯಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಭಾರೀ ಸಂಖ್ಯೆಯಲ್ಲಿ ಜನರು ವೀಕ್ಷಿಸಿದ್ದು, ಹಾಸ್ಯಾಸ್ಪದ ಪ್ರತಿಕ್ರಿಯೆ ನೀಡುತ್ತಿದ್ದಾರೆ.(ಏಜೆನ್ಸೀಸ್​)
ಲಲಿತ್​ ಮೋದಿ ಜತೆಗೆ ಸುಷ್ಮಿತಾ ಡೇಟಿಂಗ್​: ಮಾಜಿ ಪ್ರಿಯಕರನಿಂದ ಅಚ್ಚರಿಯ ಹೇಳಿಕೆ!

ಬರೀ 2ರೂ.ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ. ಬೆಲೆಯ ಬೈಕ್​ ಖರೀದಿಸಿದ ವ್ಯಾಪಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 6 =
Remember me
