ಗುವಾಹಟಿ:ಮಹಾರಾಷ್ಟ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿರುವ ರೆಬೆಲ್​ ಶಾಸಕರು ಉಳಿದುಕೊಂಡಿರುವ ಹೋಟೆಲ್​ ಹಾಗೂ ಈವರೆಗೆ ಆಗಿರುವ ವೆಚ್ಚದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ಸೂರತ್​ನಿಂದ ಗುವಾಹಟಿಗೆ ತೆರಳಿರುವ ರೆಬೆಲ್​ ಶಾಸಕರ ಗುವಾಹಟಿಯ ಐಷಾರಾಮಿ ಹೋಟೆಲ್​ನಲ್ಲಿ ಉಳಿದುಕೊಂಡಿರುವುದು ಗೊತ್ತಿರುವ ವಿಚಾರವೇ, ಆದರೆ ಈ ಹೋಟೆಲ್​ನಲ್ಲಿ ಈವರೆಗೆ ಆಗಿರುವ ವೆಚ್ಚದ ಬಗ್ಗೆ ಕೇಳಿದ್ರೇ ನಿಜಕ್ಕೂ ಬೆರಗಾಗ್ತೀರಾ.
ಒಟ್ಟು 70 ಕೊಠಡಿಗಳಲ್ಲಿ ರೆಬೆಲ್​ ಶಾಸಕರಿದ್ದು, ಕೇವಲ 7 ದಿನಕ್ಕೆ 56 ಲಕ್ಷ ರೂ. ಖರ್ಚಾಗಿದ್ದು, ಇತರೆ ವೆಚ್ಚ 8 ಲಕ್ಷ ರೂ. ಸೇರಿ ಒಟ್ಟು 64 ಲಕ್ಷ ರೂ. ವೆಚ್ಚಾಗಿದೆ ಎನ್ನಲಾಗಿದೆ.ಶಾಸಕರು ಹಾಗೂ ಅವರ ಜತೆಗೆ ಆಗಮಿಸುವವರಿಗೂ ಸೇರಿ ಬರೋಬ್ಬರಿ 70 ಕೊಠಡಿಗಳನ್ನು ಇಲ್ಲಿ ಬುಕ್​ ಮಾಡಲಾಗಿದೆ. ಇದು ಕೇವಲ ಹೋಟೆಲ್​​ ವೆಚ್ಚವಾದರೆ, ಅವರ ಪ್ರಯಾಣ ವೆಚ್ಚ ಬೇರೆಯೇ ಇದೆ.

ಸದ್ಯ ರೆಬೆಲ್​ ನಾಯಕ ಏಕನಾಥ್​ ಶಿಂಧೆ ಅವರೊಂದಿಗೆ 40 ಶಾಸಕರಿದ್ದು, ಸ್ವತಂತ್ರ ಅಭ್ಯರ್ಥಿಗಳು ಕೂಡ ಇವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇತ್ತ ಶಿವಸೇನೆ ಎನ್​ಸಿಪಿ ಜತೆಗಿನ ಮೈತ್ರಿ ಮುರಿದುಬೀಳುವ ಹಂತದಲ್ಲಿದ್ದು, ಸದ್ಯ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + five =
Remember me
