https://fb.watch/24HiBGCCFE/
ಮುಂಬೈ:ಲಿಫ್ಟ್​, ಎಸ್ಕಲೇಟರ್​ಗಳು ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸುತ್ತವೆಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಅದರಲ್ಲೂ ಪುಟ್ಟ ಮಕ್ಕಳಿರುವ ಕುಟುಂಬ ಲಿಫ್ಟ್​ ಬಳಸುವಾಗ ಎಷ್ಟೇ ಜಾಗೃತವಾಗಿದ್ದರೂ ಸಾಲದು. ಪೋಷಕರ ಅಜಾಗರೂಕತೆಯಿಂದಾಗಿ ಐದು ವರ್ಷದ ಪುಟ್ಟ ಬಾಲಕ ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಮುಂಬೈನ ಧಾರಾವಿಯಲ್ಲಿ ನಡೆದಿದೆ.
ಇದನ್ನೂ ಓದಿ:ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಟೀ ಕುಡಿಯೋಕೆ ಸಿಗಲ್ಲ ಪ್ಲಾಸ್ಟಿಕ್​ ಕಪ್​; ಮಣ್ಣಿನ ಲೋಟದಲ್ಲೇ ಸವಿಯಿರಿ ಬಿಸಿಬಿಸಿ ಚಹಾ!
ಧಾರಾವಿಯ ಘೋಶಿ ಶೆಲ್ಟರ್​ ಬಿಲ್ಡಿಂಗ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮೂರು ಮಕ್ಕಳು ಆಟವಾಡುತ್ತಾ, ಗ್ರೌಂಡ್​ ಫ್ಲೋರ್​ನಿಂದ ನಾಲ್ಕನೇ ಫ್ಲೋರ್​ಗೆ ಹೊರಟಿದ್ದಾರೆ. ಗ್ರೌಂಡ್​ ಫ್ಲೋರ್​ನಲ್ಲಿ ಲಿಫ್ಟ್​ ಹತ್ತಿದ ಅವರು, ನಾಲ್ಕನೇ ಫ್ಲೋರ್​ನಲ್ಲಿ ಒಬ್ಬೊಬ್ಬರಾಗಿ ಲಿಫ್ಟ್​ನಿಂದ ಹೊರಬಂದಿದ್ದಾರೆ. ಇಬ್ಬರು ಮಕ್ಕಳು ಬಂದ ನಂತರ, ಐದು ವರ್ಷದ ಬಾಲಕ ಹೊರಬರಲು ಮುಂದಾಗಿದ್ದಾನೆ. ಲಿಫ್ಟ್​ನ ಮೊದಲನೇ ಬಾಗಿಲನ್ನು ಯುವಕ ದಾಟುತ್ತಿದ್ದಂತೆ ಕಬ್ಬಿಣದ ಸರಳಿದ್ದ ಬಾಗಿಲು ಮತ್ತು ಮರದ ಬಾಗಿಲು ಎರಡೂ ಮುಚ್ಚಿದೆ. ಎರಡೂ ಬಾಗಿಲ ಮಧ್ಯದಲ್ಲಿ ಬಾಲಕ ಸಿಲುಕಿಕೊಂಡಿದ್ದಾನೆ. ಬಾಗಿಲು ಮುಚ್ಚುತ್ತಿದ್ದಂತೆ ಲಿಫ್ಟ್​ ಚಲಿಸಲು ಆರಂಭವಾಗಿದೆ.
ಆ ಮಗು ಲಿಫ್ಟ್​ಗೆ ಸಿಕ್ಕಿದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ
ಲಿಫ್ಟ್​ನಲ್ಲಿ ಮಕ್ಕಳನ್ನು ಆಟವಾಡಲು ಬಿಡುತ್ತೀರಾ? ಈ ವಿಡಿಯೋ ನೋಡಿದ ಮೇಲೆ ನೀವೇ ಹೇಳಿ
ಲಿಫ್ಟ್​ನ ಬಾಗಿಲ ಮಧ್ಯೆ ಸಿಲುಕಿ ಬಾಲಕ ಪ್ರಾಣ ಕಳೆದುಕೊಂಡಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. (ಏಜೆನ್ಸೀಸ್​)
ಲೈವ್​ನಲ್ಲೇ ಹೋಯಿತು ಪ್ರಾಣ! ಹರಿಹರದಲ್ಲಿ ವಿದ್ಯುತ್​ ಅವಘಡಕ್ಕೆ ಬಲಿಯಾದ ಲೈನ್​ ಮ್ಯಾನ್​

ಲಾಡ್ಜ್​ಗೆ ಬರುವಾಗ ಇಬ್ಬರು, ಹೋಗುವಾಗ ಒಬ್ಬನೇ: ಮುಚ್ಚಿದ್ದ ಕೊಠಡಿ ತೆರೆದವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
